ಮಸ್ಕಿ ಪುರಸಭೆ ವ್ಯಾಪ್ತಿಯ ಬೀದಿಗಳಿಗೆ ಸೂಚನ ಫಲಕವೇ ಇಲ್ಲ!

ಹೊಸದಾಗಿ ಊರಿಗೆ ಬರುವವರು ಬೀದಿ ಹುಡುಕುವುದೇ ದೊಡ್ಡ ಸಮಸ್ಯೆ.
ಮಸ್ಕಿ : ಪುರಸಭೆ ವ್ಯಾಪ್ತಿಯಲ್ಲಿ 23 ವಾರ್ಡ್‌ಗಳಿದ್ದು, ನೂರಾರು ಬೀದಿಗಳು ಇವೆ. ಆದರೆ ಬೀದಿಯ ಹೆಸರು ಸೂಚಿಸುವ ಮಾರ್ಗ ಸೂಚಕ ಫಲಕಗಳು ಇಲ್ಲದೇ ಹೊಸದಾಗಿ ಊರಿಗೆ ಬರುವವರು ಬೀದಿ ಹುಡುಕುವುದೇ ದೊಡ್ಡ ತಲೆನೋವಾಗಿದೆ.
ಕುಂಬಾರ ಬೀದಿ, ದೇವಾಂಗ ಬೀದಿ, , ದೈವದ ಕಟ್ಟೆ, ತೇರು ಬೀದಿ,ಉಪ್ಪಳದೂಡ್ಡಿ ಪೇಟೆ, ಎಲೆಗೇರ ಓಣಿ ಎಂಬ ಹಲವಾರು ಏರಿಯಾ ಗಳು ಪಟ್ಟಣದಲ್ಲಿದ್ದು, ಬಹುತೇಕ ಸ್ಥಳಗಳಿಗೆ ಹೋಗಲು ಅನು ಕೂಲವಾಗುವಂತೆ ನಾಮಫಲಕವಾಗಲಿ, ಸೂಚನಾ ಚಿಹ್ನೆಯಾಗಲಿ ಇಲ್ಲ. ಅಲ್ಲದೇ 23 ವಾರ್ಡ್‌ಗಳ ಬೌಂಡರಿಯೂ ನಿಗದಿತವಾಗಿ ಸೂಚಿಸಲಾಗಿಲ್ಲ. ಬಹುತೇಕ ಸ್ಥಳೀಯರಿಗೆ ತಮ್ಮ ಮನೆ ಯಾವ ವಾರ್ಡ್‌ಗೆ ಬರುತ್ತದೆ ಎಂಬುದು ಗೊತ್ತಿಲ್ಲ. ಇದರಿಂದ ಪಟ್ಟಣಕ್ಕೆ ಹೊಸದಾಗಿ ಬರುವವರು ಹೋಗಬೇಕಾದ ಸ್ಥಳ ಹುಡುಕುವ ತಲೆನೋವು ಎದುರಾಗಿದೆ.
ಫಲಕ ನೀಡದ ಪುರಸಭೆ:
ಪಟ್ಟಣ ಪುರಸಭೆ ವ್ಯಾಪ್ತಿಗೆ ಒಳಪಟ್ಟು ಹಲವಾರು ವರ್ಷ ಕಳೆದರು ಸಹ ಇನ್ನೂ ಬಹುತೇಕ ಏರಿಯಾಗಳಿಗೆ ನಾಮ ಪಲಕವೇ ಇಲ್ಲವಾಗಿದೆ. ವಾರ್ಡ್‌ಗಳ ಒಳ ಭಾಗದಲ್ಲಿನ ಬೀದಿಗಳನ್ನು ಗುರುತಿಸಲು ಊರಿನ ಚಿರಪರಿಚಿತ ವ್ಯಕ್ತಿಗಳ ಮನೆ ಹೆಸರು ಹೇಳಿಕೊಂಡು ಹುಡುಕಬೇಕಾದ ಪರಿಸ್ಥಿತಿ ಇದೆ. ಪುರಸಭ ವ್ಯಾಪ್ತಿಯಲ್ಲಿನ ವಾರ್ಡ್ ಹಾಗೂ ವಾರ್ಡ್‌ಗಳ ಒಳಭಾಗದಲ್ಲಿನ ಬೀದಿಗಳಿಗೆ ನಾಮಪಲಕ ಹಾಕಲು ಪುರಸಭೆ ಮುಂದಾಗಬೇಕು ಎಂದು ಸಾರ್ವ ಜನಿಕರು ಮನವಿ ಮಾಡಿದ್ದಾರೆ.
(ಜಿ.ಎ. ಎಸ್ ನಿಂದ ಅನುಮತಿ
ಸಲುವಾಗಿ ಸರಕಾರಕ್ಕೆ ಅನುಮತಿಯನ್ನು ನೀಡಿದ ನಂತರ ಸೂಚನೆ ಫಲಕಗಳು ಹಾಕುವ ಕೆಲಸ ಪ್ರಾರಂಭವಾಗುತ್ತದೆ ಇದಕ್ಕಾಗಿ ಕಾಲ ಅವಕಾಶ ಬೇಕು ಆಗುತ್ತದೆ.)
– ನರಸರಡ್ಡಿ ಪುರಸಭೆ
ಮುಖ್ಯ ಅಧಿಕಾರಿಗಳು ಮಸ್ಕಿ
ವರದಿ: ಸಿದ್ದಯ್ಯ ಸ್ವಾಮಿ ಹೆಸರೂರು tv8kannada ಮಸ್ಕಿ