Hanumantha: ಮಾದರಿ ಗಾಯಕ- ಬಿಗ್‌ಬಾಸ್ ವಿನ್ನರ್ ಹನುಮಂತ ಎಸ್‌ಎಸ್‌ಎಲ್‌ಸಿಯಲ್ಲಿ ಪಡೆದ ಅಂಕ ನೋಡಿದ್ರೆ ನೀವು ಶಾಕ್ ಆಗೋದು ಗ್ಯಾರಂಟಿ?

ಬಿಗ್ ಬಾಸ್ ಹನುಮಂತ ಸಿಕ್ಕಾಪಟ್ಟೆ ಟ್ರೆಂಡಿಂಗ್‌ನಲ್ಲಿ ಇದ್ದಾರೆ. ಇದೀಗ ಬಿಗ್ ಬಾಸ್ ಕನ್ನಡ ಸೀಸನ್ 11ರ ವಿನ್ನರ್ ಆಗಿರುವ ಹನುಮಂತ ಬಗ್ಗೆ ಕೆಲವೊಂದಿಷ್ಟು ಕುತೂಹಲಕಾರಿ ವಿಷಯಗಳು ಹೊರಬಂದಿವೆ. ಹನುಮಂತನ ಮಾರ್ಕ್ಸ್ ಕಾರ್ಡ್ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
ಹಾಗಾದರೆ ಹನುಮಂತನ ವಿಧ್ಯಾಭ್ಯಾಸ ಎಷ್ಟು? ಎಲ್ಲಿಯವರೆಗೆ ಓದಿದ್ದಾರೆ? ಎಸ್‌ಎಸ್‌ಎಲ್‌ಸಿಯಲ್ಲಿ ಹನುಮಂತ ತೆಗೆದುಕೊಂಡ ಮಾರ್ಕ್ಸ್ ಎಷ್ಟು?
ಹನುಮಂತ ಸಿಕ್ಕಾಪಟ್ಟೆ ಕಷ್ಟಪಟ್ಟು ಮೇಲೆ ಬಂದ ಪ್ರತಿಭಾವಂತ ವ್ಯಕ್ತಿ. ಇವರು ತುಂಬಾ ಚೆನ್ನಾಗಿ ಹಾಡು ಹಾಡುವುದು ಮಾತ್ರವಲ್ಲ ತುಂಬಾ ಚೆನ್ನಾಗಿ ಓದಿದ್ದಾರೆ. ಇದೇ ಕಾರಣಕ್ಕೆ ಹನುಮಂತನನ್ನು ಶಾಲಾ ಶಿಕ್ಷಕರು ಕೂಡ ಕೊಂಡಾಡಿದ್ದಾರೆ. ತುಂಬಿದ ಕೊಡ ತುಳುಕುವುದಿಲ್ಲ ಎನ್ನುವ ಗಾದೆ ಮಾತು ಹನುಮಂತನಿಗೆ ತುಂಬಾ ಚೆನ್ನಾಗಿ ಒಪ್ಪುತ್ತದೆ.
ಹಾಡಿನಲ್ಲಿ ಮಾತ್ರವಲ್ಲ ಓದಿನಲ್ಲೂ ಹನುಮಂತ ಫಸ್ಟ್ ರಾಂಕ್
ಹೌದು.. ಹನುಮಂತ ಹಾಡುವುದರಲ್ಲಿ ಮಾತ್ರ ಅಲ್ಲ ಓದುವುದರಲ್ಲೂ ಮೇಲುಗೈ ಸಾಧಿಸಿದ್ದಾರೆ. ಹನುಮಂತ ಉನ್ನತ ಮಟ್ಟದ ವಿಧ್ಯಾಭ್ಯಾಸ ಪಡೆಯಲು ಸಾಧ್ಯವಾಗಿಲ್ಲ. ಆದರೂ ಕೂಡ ಓದಿದಷ್ಟು ಉತ್ತಮ ವಿದ್ಯಾರ್ಥಿ ಅಂತಲೇ ಗುರುತಿಸಿಕೊಂಡಿದ್ದಾರೆ. ಹನುಮಂತ ಹಾಡಿನಲ್ಲಿ ಮಾತ್ರವಲ್ಲ ಶಾಲೆಯಲ್ಲೂ ತುಂಬಾ ಚೆನ್ನಾಗಿ ಓದಿ ಸೈ ಎನಿಸಿಕೊಂಡಿದ್ದಾರೆ.
ಬಿಗ್‌ಬಾಸ್ ಮನೆಯ ವಿನ್ನರ್ ಹನುಮಂತನ ಹಾಡು ಹಾಗೂ ಮುಗ್ಧತೆ ಜನರ ಮನದಿಂದ ಮಾಸಿಲ್ಲ. ಹನುಮಂತ ಅವರಿಗೆ ಎಲ್ಲರೂ ಹತ್ತಿರವಾಗುತ್ತಿದ್ದದ್ದು ಅವರ ಮುಗ್ಧತೆಯಿಂದಾಗಿ. ಸರಾಗವಾಗಿ ಹಾಡು ಹಾಡುವ ಹನುಮಂತ ಮಾತನಾಡುವಾಗ ಕೆಲವೊಂದು ಇಂಗ್ಲೀಷ್ ಪದಗಳನ್ನು ಬಳಕೆ ಮಾಡಲು ತೊಳಲಾಡಿಬಿಡುತ್ತಾರೆ. ಹಾಗಂತ ಅವರಿಗೆ ಜ್ಞಾನದ ಕೊರತೆ ಇದೆ ಎಂದಲ್ಲ. ಹೀಗಂದುಕೊಂಡರೆ ಅಂಥವರ ತಿಳುವಳಿಕೆ ತಪ್ಪು. ಯಾಕೆಂದರೆ ಹನುಮಂತ ತುಂಬಾ ಚೆನ್ನಾಗಿ ಓದಿ ಉತ್ತಮ ಅಂಕಗಳನ್ನು ಪಡೆದಿದ್ದಾರೆ.
ಹಾವೇರಿಯ ಚಿಲ್ಲೂರು ಬಡ್ನಿ ಶಾಲೆಗೆ ಪ್ರಥಮ ಸ್ಥಾನವನ್ನು ಪಡೆದಿದ್ದಾರಂತೆ. ಬಾಹ್ಯ ವಿದ್ಯಾರ್ಥಿಯಾಗಿ 2020-21ರ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625 ಅಂಕಕ್ಕೆ 532 ಅಂಕ ಗಳಿಸಿದ್ದಾರೆ ಹನುಮಂತ. ಈತನ ಓದು, ಕಲಿಕೆ ಹಾಗೂ ಗುಣದ ಬಗ್ಗೆ ಶಾಲಾ ಶಿಕ್ಷಕರು ಕೊಂಡಾಡಿದ್ದಾರೆ. ಹನುಮಂತನ ಬಗ್ಗೆ ಶಿಕ್ಷಕರಿಗೂ ಹೆಮ್ಮೆ ಇದೆ. ಇದೀಗ ಹನುಮಂತ ಎಸ್‌ಎಸ್‌ಎಲ್‌ಸಿಯಲ್ಲಿ ತೆಗೆದುಕೊಂಡ ಮಾರ್ಕ್ಸ್ ನೋಡಿ ಎಲ್ಲರೂ ಕೂಡ ಹುಬ್ಬೇರಿಸುತ್ತಿದ್ದಾರೆ