ಭಗವಂತ ನಿರಾಕಾರ ಸ್ವರೂಪ, ನಿತ್ಯ ಚೇತನ್

ಕೊಟ್ಟೂರು : ಭಗವಂತನು ನೆಲದ ಮರೆಯ ನಿಧಾನದಂತೆ, ಮುಗಿಲ ಮರೆಯ ಮಿಂಚಿನಂತೆ, ಬಯಲ ಮರೆಯ ಮರೀಚಿಯಂತೆ ಯಾರಿಗೂ ಕಾಣದಂತೆ, ಇದ್ದಾನೆ ಅವನು ನಿರಂಜನ, ನಿರಾಕಾರ ಸ್ವರೂಪನಾಗಿರುವ
ಅವನನ್ನು ಅಲ್ಲಮ ಪ್ರಭುಗಳು ಸೇರಿದಂತೆ ಅನೇಕ
ಶರಣರು ಮಾರ್ಮಿಕವಾಗಿ ಎಂದು ಅಂಗಡಿ ಚಂದ್ರಣ್ಣ ಥಿಯಾಸಫೀಕಲ್ ಲಾಡ್ಜ್ ಅಧ್ಯಕ್ಷರು ಹೇಳಿದರು.
ಪಟ್ಟಣದ ನ್ಯೂ ಜ್ಞಾನ ಭಾರಥಿ ಶಾಲಾ ಆವರಣದಲ್ಲಿ ಶರಣ ಸಾಹಿತ್ಯ ಪರಿಷತ್ ಕೊಟ್ಟೂರು
ತಾಲೂಕು ಘಟಕದಿಂದ ಅಯೋಜಿಸಿದ್ದ ದಿ.ಕಾಮಶಟ್ಟಿ ತಿಪ್ಪೇಸ್ವಾಮಿ ಕೆ ಟಿ ಮಾಸ್ಟರ್ ರವರ ಮಹಾಮನೆ ದತ್ತಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅಖಂಡ ಪರಿಪೂರ್ಣನಾಗಿರುವ ಅವನು ಸರ್ವ ಶೂನ್ಯ,ನಿರಾಲಂಬ, ನಿರವಯವನಾಗಿದ್ದಾನೆ.ಅಜಾತನಾದ ಅವನಿಗೆ ಉತ್ಪತ್ತಿ ಇಲ್ಲ.ಕರ್ಮ ರಹಿತನಾಗಿದ್ದಾನೆ.ಪರಶಿವನು
ಅನಂತ ಕೋಟಿಯಾಗಿರುವನು ಎಂದರು.
ದಿ ಕಾಮಶಟ್ಟೆ ತಿಪ್ಪೇಸ್ವಾಮಿ ದತ್ತಿ ವಿಷಯ ಕುರಿತು ಶರಣರ ವಚನಗಳಲ್ಲಿ ವೖಚಾರಿಕತೆ ವಿಷಯದ ಕುರಿತು ಉಪನ್ಯಾಸಕಿ ಪೂರ್ಣಿಮ ಮಾತನಾಡಿದರು. ಶರಣರ ವಚನಗಳಲ್ಲಿನ ವೈಚಾರಿಕ ಮೌಲ್ಯಗಳು ಜೀವನದಲ್ಲಿ ಅಳವಡಿಸಿಕೊಂಡರೆ ಮಾತ್ರ ಸಮಾಜದಲ್ಲಿ ಪರಿವರ್ತನೆ ತರಲು ಸಾಧ್ಯವಿದೆ ಮತ್ತು ವಚನಗಳಲ್ಲಿ ಸಮಾನತೆ ಅಸ್ಪೃಶ್ಯತೆ ನಿವಾರಣೆ ,ಸಂವಿಧಾನದ ಆಶಯಗಳನ್ನು ಒಳಗೊಂಡಿದೆ ಮತ್ತು ಸಮಾಜದ ಅಂಕು ಡೊಂಕುಗಳನ್ನು ತಿದ್ದಲು ಪ್ರಯತ್ನಿಸಿ ಆದರಿಂದ12ನೇ ಶತಮಾನದಲ್ಲಿ ಕಲ್ಯಾಣದಲ್ಲಿ ಸಮಾಜಿಕ ಕ್ರಾಂತ್ರಿಯಾಯಿತು ಎಂದು ಹೇಳಿದರು.
ದತ್ತಿ ದಾಸೋಹಿ ಶಿಕ್ಷಕ ಸಿದ್ಧರಾಮೇಶ್ವರ ಮಾತನಾಡಿ
ಅಂದಿನ ಶರಣೆರಲ್ಲೆರೂ ಯಾವುದೇ ತತ್ವಶಾಸ್ತ್ರ ಪ್ರಗತಿಗಳನ್ನು ಓದಿರಲ್ಲಿಲ್ಲ. ಜನಸಾಮಾನ್ಯರೊಡನೆ
ಬೆರೆತು,ತಮಗಾದ ಅನುಭಮಗಳಿಂದ ವಚನಗಳನ್ನು ರಚಿಸಿದರು.ಮತ್ತು ವಚನಗಳು ಕನ್ನಡದ ಉಪ ನಿಷತ್ತುಗಳು ಹಾಡಿದರೆ ಪದ್ಯವಾಗುವ,ಓದಿದರೆ ಗದ್ಯವಾಗುವ ಸಾಹಿತ್ಯ ಕೃತಿಗಳಾಗಿವೆ ಎಂದು ತಿಳಿಸಿದರು.
ಕರಿಯಪ್ಪ ತಾಲೂಕು ಶರಣ ಪರಿಷತ್ ಅಧ್ಯಕ್ಷರು
ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಶರಣ ಸಾಹಿತ್ಯ ಪರಿಷತ್ ಉಪಾದ್ಯಕ್ಷ ನಳಿನ ಪ್ರಸ್ತಾವಿಕವಾಗಿ ನುಡಿದರು. ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ದೇವರಮನೆ ಕೊಟ್ರೇಶ್, ಕದಳಿ ವೇದಿಕೆ ಅಧ್ಯಕ್ಷೆ ಸುಜಾತ,ಖಜಾಂಜಿ ಅನುರಾಧ,ನಾಗರಾಜ್, ನೀಲಕಂಠಚಾರಿ,ಮುಖೇಶ್,
ಇತರರು ಭಾಗವಹಿಸಿದ್ದರು.ಹೊಂಬಾಳೆ ಮಂಜುನಾಥ ಕಾರ್ಯನಿರ್ವಹಿಸಿದರು.ಶ್ರೀಮತಿ ಕವಿತಾ ಸಿದ್ಧರಾಮೇಶ್ವರ ಸ್ವಾಗತಿಸಿದರು. ಶಿಕ್ಷಕ
ಸಿದ್ಧಣ್ಣ ವಂದಿಸಿದರು.

ವರದಿ : C. ಕೊಟ್ರೇಶ್ tv8kannada ಬಳ್ಳಾರಿ, (ಹೊಸಪೇಟೆ)