ಅಂಬೇಡ್ಕರ್ ಒಬ್ಬ ಮಹಾನ್ ಮಾನವತವಾದಿ: ವೆಂಕಟರಮಣಸ್ವಾಮಿ

ಚಾಮರಾಜನಗರ: ಡಾ.ಬಿ.ಆರ್. ಅಂಬೇಡ್ಕರ್ ಅವರು ವಿಶ್ವದ ಒಬ್ಬ ಮಹಾನ್ ಮಾನವತವಾದಿ ಎಂದು ದಲಿತ ಮಹಾಸಭಾದ ರಾಜ್ಯ ಉಪಾಧ್ಯಕ್ಷ ಹಾಗೂ ಅಂಬೇಡ್ಕರ್ ಪ್ರಶಸ್ತಿ ಪುರಸ್ಕೃತರಾದ ವೆಂಕಟರಮಣಸ್ವಾಮಿ(ಪಾಪು) ಅವರು ತಿಳಿಸಿದರು.
ನಗರದ ಡಾ.ರಾಜಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಅಂಬೇಡ್ಕರ್ ಕಾರವಾನ್ ಪತ್ರಿಕೆ ದಶಮಾನೋತ್ಸವ ಸಂಭ್ರಮ ಹಾಗೂ ದಲಿತ ಮಹಾಸಭಾ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಹೆಸರಿನಲ್ಲಿ ಪತ್ರಿಕೆ ಪ್ರಾರಂಭಿಸಿರುವುದು ತುಂಬಾ ಸಂತೋಷವಾಗಿದೆ ಪತ್ರಿಕೆಯಲ್ಲಿ ಉತ್ತಮ ಸಂದೇಶಗಳು ವಿಶ್ವದೆಲ್ಲೆಡೆ ಪಸರಿಸುವಂತಾಗಬೇಕು ಅಲ್ಲದೆ ಪ್ರತಿಯೊಂದು ಮನೆಗೂ ಅವರ ಸಂದೇಶಗಳು ತಲುಪುವಂತೆ ಆಗಬೇಕು ಎಂದು ತಿಳಿಸಿದರು.
ಅಂಬೇಡ್ಕರ್ ಕಾರವಾನ್ ಪತ್ರಿಕಾ ಸಂಪಾದಕರಾದ ಯಮದೂರು ಸಿದ್ದರಾಜು ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಕೊಳ್ಳೇಗಾಲ ಚೆನ್ನಲಿಂಗನಹಳ್ಳಿ, ಚೇತವನದ ಮನೋರಖ್ಖಿತ ಭಂತೇಜಿ ಅವರು ಸಭೆಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಇದೇ ವೇಳೆ ಪತ್ರಕರ್ತರಾದ ಇರಸವಾಡಿ ಸಿದ್ದಪ್ಪಾಜಿ, ವಕೀಲರಾದ ಮಹಾಲಿಂಗ ಗಿಗಿ೯, ಸಮಾಜ ಸೇವಕ ಡಾ.ಪರಮೇಶ್ವರಪ್ಪ, ಪತ್ರಕರ್ತ ಗಂಗಾಧರ್ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಪ್ರಾಧ್ಯಾಪಕ ಪಿ.ದೇವರಾಜು, ಯರಗನಹಳ್ಳಿ ಸಿದ್ದರಾಜು, ಮುಖ್ಯಅತಿಥಿಗಳಾದ ಕಾವೇರಿ ಶಿವಕುಮಾರ್, ಮಹೇಶ್ ಹಳೇಪುರ, ಪತ್ರಕರ್ತ ಪೂರೀಗಾಲಿ ಮರಡೇಶ ಮೂರ್ತಿ, ನಗರಸಭಾ ಸದಸ್ಯೆ ನೀಲಮ್ಮ, ದಸಂಸ ಜಿಲ್ಲಾ ಸಂಚಾಲಕ ಸಿ.ಎಂ.ಶಿವಣ್ಣ, ಸೇರಿದಂತೆ ಇತರರು ಇದ್ದರು.
ವರದಿ:ಇರಸವಾಡಿ ಸಿದ್ದಪ್ಪಾಜಿ tv8kannada : ಚಾಮರಾಜನಗರ