ಇತ್ತೀಚಿನ ಸುದ್ದಿ

ಮಸ್ಕಿ ತಹಶಿಲ್ದಾರರ ಕಚೇರಿಯಲ್ಲಿವಿವಿಧ ವಿಭಾಗಗಳಲ್ಲಿ ಸಿಬ್ಬಂದಿ ಗಳು ಇಲ್ಲದೆ ಪರದಾಟ.

ರೈತರು, ಸಾರ್ವಜನಿಕರು
ಕೆಲಸ– ಕಾರ್ಯಗಳಿಗೆ ನಿತ್ಯ
ಅಲೆಯಬೇಕಾದ ದುಃಸ್ಥಿತಿ.!


ಮಸ್ಕಿ : ತಾಲ್ಲೂಕು ಆಡಳಿತದ ‘ಶಕ್ತಿ ಕೇಂದ್ರ’ ಎನಿಸಿರುವ ಇಲ್ಲಿನ ತಹಶೀಲ್ದಾರ್ ಕಚೇರಿಯ ವಿವಿಧ ವಿಭಾಗಗಳಲ್ಲಿ
ಸಿಬ್ಬಂದಿ ಗಳು ಇಲ್ಲದೆ ಆಡಳಿತ ಜಡ್ಡುಗಟ್ಟಿ ಹೋಗಿದೆ. ಸರಕಾರ ಹಾಗೂ ಜನ ಪ್ರತಿನಿಧಿಗಳ ನಿರ್ಲಕ್ಷ್ಯ ಮನೋಭಾವದಿಂದಾಗಿ ಸಾರ್ವಜನಿಕರು ತಮ್ಮ ಕೆಲಸ– ಕಾರ್ಯಗಳಿಗೆ ನಿತ್ಯ ಅಲೆಯಬೇಕಾದ ದುಃಸ್ಥಿತಿ ಇದೆ.

ಮಸ್ಕಿ ತಾಲೂಕು ಎಂದು ಘೋಷಣೆ ಮಾಡಿ ಸರಿ ಸುಮಾರು ಆರು-ಏಳು ವರ್ಷ ಗಳೇ ಗತಿಸಿದ್ದರು.
ಸಮರ್ಪಕವಾಗಿ ಕೆಲಸ ಕಾರ್ಯಗಳನ್ನು ನಿರ್ವಹಿಸಲು
ತಹಶಿಲ್ದಾರರ ಕಚೇರಿಯಲ್ಲಿ ಸಿಬ್ಬಂದಿ ಕೊರತೆಯಿಂದ ರೈತರಿಗೆ ಹಾಗೂ ಸಾರ್ವಜನಿಕರಿಗೆ ಸಕಾಲಕ್ಕೆ ಸರಕಾರದ ಸೇವೆ ದೊರೆಯುತ್ತಿಲ್ಲ.

ಕೇವಲ ನಾಲ್ವರು ಗ್ರಾಮ ಲೆಕ್ಕಾಧಿಕಾರಿಗಳ ಮೇಲೆ ಕೆಲಸ ಕಾರ್ಯಗಳು ನಡೆಯುತ್ತಿವೆ.ಕೆಲ ಗ್ರಾಮ ಲೆಕ್ಕಾಧಿಕಾರಿಗಳಿಗೆ 2 ರಿಂದ 3 ಗ್ರಾಮಗಳ ಪ್ರಭಾರಿ ಹೊಣೆ ಹೊರಿಸಲಾಗಿದೆ.ಈ ಸಿಬ್ಬಂದಿ ಸಾರ್ವಜನಿಕರಿಗೆ ಸುಲಭವಾಗಿ ಸಿಗುತ್ತಿಲ್ಲ.

ಪೋಡಿ ವಿರಾಸತ್‌, ಪಹಣಿ ತಿದ್ದುಪಡಿ ಸೇರಿ ಇನ್ನಿತರ ನಾನಾ ಅರ್ಜಿ ಸಲ್ಲಿಸಿದ ಫಲಾನುಭವಿಗಳಿಗೆ ಸಕಾಲಕ್ಕೆ ಸೇವೆ ದೊರೆಯದೇ ಸಮಸ್ಯೆ ಎದುರಿಸುತ್ತಿದ್ದಾರೆ.

ಫಲಾನುಭವಿಗಳು ಸಲ್ಲಿಸಿದ ಪ್ರತಿ ಅರ್ಜಿಗಳನ್ನು ಇಲ್ಲಿನ ಕಂಪ್ಯೂಟರ್‌ ಸಿಬ್ಬಂದಿಯೇ ಪರಿಶೀಲನೆ ಮಾಡಿ ನಾನಾ ಅಧಿಕಾರಿಗಳಿಗೆ ವಿಲೇವಾರಿ ಮಾಡಬೇಕು. ನಿತ್ಯ ಪಹಣಿ ವಿತರಣೆ, ಅರ್ಚಕರ ತಸ್ಯಿಕ ಭತ್ಯೆ,ಸೇರಿ ಇನ್ನಿತರ ನಾನಾ ಅರ್ಜಿ ಸ್ವಿಕೃತಿ ಜತೆಗೆ, ಅರ್ಜಿ ವಿಲೇವಾರಿ ಕೆಲಸವೂ ಕೇಲವು ಕೇಲವು ಸಿಬ್ಬಂದಿಗೆ ವಹಿಸಿದ್ದರಿಂದ ಕೆಲಸ ಕಾರ್ಯಗಳು ನಿಧಾನಗತಿಯಲ್ಲಿ ಸಾಗುತ್ತಿವೆ.

ಮತೊಂದು ಕಡೆ
ಗ್ರಾಮ ಲೆಕ್ಕ ಅಧಿಕಾರಿಗಳುನ್ನು ಮೂಲ ಹುದ್ದೆಗೆ ಹೋಗುವ ವಂತೆ
ಸರಕಾರದ ಆದೇಶ ಮಾಡಿದೆ ಇದರಿಂದಾಗಿ ಕಛೇರಿಯಲ್ಲಿ ಸಿಬ್ಬಂದಿ ಕೊರತೆ ಮತ್ತಷ್ಟು ಆಗಲಿದೆ.

ಸರಕಾರ ಹಾಗೂ ಜನಪ್ರತಿನಿಧಿಗಳು ಆದಷ್ಟೂ ಬೇಗನೇ ತಹಶಿಲ್ದಾರರ ಕಛೇರಿ ಯಲ್ಲಿ ಸಿಬ್ಬಂದಿ ನೇಮಕ ಮಾಡಬೇಕು ಎಂದು ಸಾರ್ವಜನಿಕ ಹಾಗೂ ರೈತರ ಅಳಲು.

ಹೇಳಿಕೆ.. ಜಿಲ್ಲಾಧಿಕಾರಿಗಳು ಗಮನಹರಿಸಿ ಮಸ್ಕಿ ತಹಶಿಲ್ದಾರರ ಕಚೇರಿ ಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವ ಮೂಲಕ ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ಅನುಕೂಲ ಕಲ್ಪಿಸಬೇಕು ಎಂದು
ಮಲ್ಲಿಕ್ ಕೊಠಾರಿ ಕನ್ನಡ ಸೇನೆ ತಾಲೂಕು ಅಧ್ಯಕ್ಷರು.

ವರದಿ : ಸಿದ್ದಯ್ಯ ಸ್ವಾಮಿ ಹೆಸರೂರು tv8kannada ಮಸ್ಕಿ

Related Articles

Leave a Reply

Your email address will not be published. Required fields are marked *

Back to top button