ನಿರ್ವಹಣೆ ಕೊರತೆಯಿಂದ ನಲುಗಿದ ಉದ್ಯಾನವನಗಳು ಸ್ಥಳೀಯ ಆಡಳಿತ ನಿರ್ಲಕ್ಷ; ಬೀಗ ಹಾಕಿದ ಉದ್ಯಾನವನ

ಮಸ್ಕಿ : ನಿರ್ವಹಣೆ ಕೊರತೆಯಿಂದಾಗಿ ಪಟ್ಟಣದ ಬಹುತೇಕ ಬಡಾವಣೆಯಲ್ಲಿನ ಉದ್ಯಾನವನಗಳು ಉಪಯೋಗಕ್ಕೆ ಬಾರದಂತಾಗಿವೆ. ತಾಲೂಕು ಕೇಂದ್ರ ರಚನೆಯಾಗಿ ಆರೇಳು ವರ್ಷಗಳು ಗತಿಸಿದರೂ, ಸ್ಥಳೀಯ ಆಡಳಿತ ನಿರ್ಲಕ್ಷದಿಂದಾಗಿ ಉದ್ಯಾನವನಗಳು ಇದ್ದೂ ಇಲ್ಲದಂತಾಗಿವೆ.
ಪುರಸಭೆ ವ್ಯಾಪ್ತಿಗೆ ಒಳಪಡುವ ಉದ್ಯಾನವನಗಳಲ್ಲಿ ಕುಡಿಯುವ ನೀರು, ಕೂರಲು ಆಸನ, ಸೇರಿದಂತೆ ಮೂಲ ಸೌಕರ್ಯಗಳ ಕೊರತೆ ಹಾಗೂ ಸಮರ್ಪಕ ನಿರ್ವಹಣೆ ಇಲ್ಲದೆ ಉದ್ಯಾನಗಳ ಸ್ಥಿತಿ ಹೇಳತೀರದಾಗಿದೆ.
ಸಾರ್ವಜನಿಕರ ಅನುಕೂಲಕ್ಕಾಗಿ ನಿರ್ಮಿಸಿರುವ ಪಟ್ಟಣದ ಕವಿತಾಳ ರಸ್ತೆ, ರಾಷ್ಟಿçÃಯ ಹೆದ್ದಾರಿ 150ಎ ಲಿಂಗಸುಗೂರು ರಸ್ತೆ ಹಾಗೂ ಸಿಂಧನೂರು ರಸ್ತೆ ಬದಿಯಲ್ಲಿ ಲೇಔಟ್ಗಳಲ್ಲಿರುವ ಉದ್ಯಾನವನಗಳು ನಿರ್ವಹಣೆ ಕೊರತೆಯಿಂದಾಗಿ ಜಾಲಿ ಗಿಡಗಳು ಬೆಳೆದಿವೆ. ಕೆಲವು ಉದ್ಯಾನವನಗಳಿಗೆ ಬೀಗ ಹಾಕಿದ್ದಾರೆ. ಉದ್ಯಾನಗಳ ಸುತ್ತಲೂ ಪೊದೆಗಳು ಬೆಳೆದಿದ್ದು, ಆಗಾಗ ಹಾವು, ಹೆಗ್ಗಣಗಳು ಕಾಣಿಸಿಕೊಳ್ಳುತ್ತಿವೆ. ಸಂಜೆಯಾದರೆ ಸಾಕು ಪುಡಾರಿಗಳು ಉದ್ಯಾನವನವನ್ನು ಮೋಜು-ಮಸ್ತಿಗಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಧೂಮಪಾನ ಸೇವಿಸಿ ಬೀಸಾಕಿರುವ ಬೆಂಕಿಯಿAದ ಒಣಗಿದ ಹುಲ್ಲಿಗೆ ಬೆಂಕಿ ಹತ್ತಿ ಉದ್ಯಾನವನ ಬರಡಾಗಿದೆ. ಉದ್ಯಾನವನದಲ್ಲಿ ಬೇಸಿಗೆ ಬರುವ ಮುನ್ನ ಹಸಿರು ಮಾಯವಾಗಿದೆ.
ಸಮರ್ಪಕ ನಿರ್ವಹಣೆ ಇಲ್ಲದೆ ವಾರ್ಡ್ ನಂ1ರ ಎಚ್ಪಿ ಗ್ಯಾಸ್ ಕಚೇರಿ ರಸ್ತೆಗೆ ತೆರಳುವ, ಕಾಲುವೆ ಪಕ್ಕದಲ್ಲಿ ಉದ್ಯಾನವನ ಪಾಳು ಬಿದ್ದಿದೆ. ಉದ್ಯಾನವನದ ಗೇಟ್ ಬೀಗ ಹಾಕಿದೆ. ಮಕ್ಕಳ ಆಟಿಕೆಗಳು ಹಾಗೂ ನಾಮಫಲಕ ಮಾಯವಾಗಿದೆ. ಎಲ್ಲೆಂದರಲ್ಲಿ ಬೆಳೆದ ಕಸ, ಚರಂಡಿ ನೀರು, ಒಣಗಿ ನೆಲಕ್ಕೊರಗಿದ ಗಿಡಗಳನ್ನು ನೋಡಬಹುದು. ಗಾಂಧಿನಗರದ ಅಂಬೇಡ್ಕರ್ ಉದ್ಯಾನವನದಲ್ಲಿ ಮೂಲ ಸೌಕರ್ಯಗಳ ಕೊರತೆ ಇದೆ. ಅಭಿವೃದ್ಧಿ ಆಗುತ್ತಿಲ್ಲ. ಬಸವೇಶ್ವರ ನಗರ, ಗ್ರೀನ್ ಸಿಟಿ, ಹಾಗೂ ಎಲಿಗಾರ ಲೇಔಟ್ನಲ್ಲಿರುವ ಉದ್ಯಾನವನದಲ್ಲಿ ಹಸಿರು ವಾತಾವರಣ, ಹಾಗೂ ಸೌಕರ್ಯಗಳು ಇದ್ದು, ಉಳಿದ ಎಲ್ಲಾ ಉದ್ಯಾನವನಗಳು ಸೌಕರ್ಯವಿಲ್ಲದೆ ನಲುಗುತ್ತಿವೆ. ಇದಕ್ಕೆ ಸಂಬAಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಸಾರ್ವಜನಿಕರಿಗೆ ಬಳಕೆಗೆ ಇರುವ ಉದ್ಯಾನವನದಲ್ಲಿ ಸೌಲಭ್ಯವನ್ನು ಕಲ್ಪಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಕೋಟ್-1
ಪುರಸಭೆ ವ್ಯಾಪ್ತಿಗೆ ಬರುವ ಸ್ಮಶಾನ ನಿರ್ವಹಣೆಗೆ ಅನುದಾನ ಮೀಸಲಿಟ್ಟಿದ್ದೇವೆ. ಆದರೆ ಉದ್ಯಾನವನಗಳ ನಿರ್ವಹಣೆಗೆ ಅನುದಾನ ಇಲ್ಲ. ಉದ್ಯಾನವನಗಳ ನಿರ್ವಹಣಗೆ ಅನುದಾನ ನೀಡುವಂತೆ ಮನವಿ ಮಾಡಿದ್ದೇವೆ ಮುಂದಿನ ದಿನಗಳಲ್ಲಿ ಪಟ್ಟಣದಲ್ಲಿರುವ ಉದ್ಯಾನವನಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು. – ನರಸರೆಡ್ಡಿ, ಪುರಸಭೆ ಮುಖ್ಯಾಧಿಕಾರಿಗಳು, ಮಸ್ಕಿ
ಕೋಟ್-2
ಪಟ್ಟಣದಲ್ಲಿರುವ ಉದ್ಯಾನವನಗಳು ಇದ್ದೂ, ಇಲ್ಲದಂತಾಗಿದೆ. ಬೆಳಿಗ್ಗೆ ವಾಯುವಿಹಾರಕ್ಕೆ ತೆರಳಲು ಹಾಗೂ ನಾಗರಿಕರು ವಿಶ್ರಾಂತಿ ತೆಗೆದುಕೊಳ್ಳಲು, ಮಕ್ಕಳು ಆಟ ಆಡುವುದಕ್ಕೆ ಸಾರ್ವಜನಿಕ ಉದ್ಯಾನವನಗಳ ನಿರ್ಮಿಸಿರುತ್ತಾರೆ. ಆದರೆ ನಿರ್ವಹಣೆ ಕೊರತೆಯಿಂದ ಬಹುತೇಕ ಎಲ್ಲಾ ಉದ್ಯಾನವನಗಳಲ್ಲಿ ಜಾಲಿ ಗಿಡಗಳು ಬೆಳೆದು ನಿಂತಿವೆ ಇದರಿಂದ ಹೆಚ್ಪಿ ಗ್ಯಾಸ್ ಕಚೇರಿಗೆ ತೆರಳುವ ರಸ್ತೆಯಲ್ಲಿನ ಕಾಲುವೆ ಪಕ್ಕದಲ್ಲಿರುವ ಉದ್ಯಾನವನಕ್ಕೆ ಬೀಗ ಹಾಕಿದ್ದಾರೆ. – ಮಲ್ಲಿಕ್ ಕೂಠಾರಿ ಕನ್ನಡ ಸೇನೆ ತಾಲೂಕು ಅಧ್ಯಕ್ಷರು ಮಸ್ಕಿ.
ವರದಿ ಹಾಗೂ ಸಂಗ್ರಹ: ಸಿದ್ದಯ್ಯ ಸ್ವಾಮಿ ಹೆಸರೂರು tv8kannada ಮಸ್ಕಿ