ಮಾಸಂಗಿಪುರದ ಮೂಗಿನ ಮೇಲೆ ತಾಲೂಕೆಂಬ ಹೈಬ್ರೀಡ್ ತುಪ್ಪ! ಯಾರಿಗೂ ಬೇಡವಾಗಿ ಮಗುವಂತಾದ ಮಸ್ಕಿ ತಾಲೂಕು.

ಮಸ್ಕಿ : ಮಸ್ಕಿಯ ಜನತೆ ಮಸ್ಕಿ ತಾಲೂಕು ಎಂದು ಘೋಷಣೆಯಾದ ದಿನ ಅಬ್ಬಾ ….ಅದೇನು ಸಂಭ್ರಮ? ಅದೇನು ಸಡಗರ ?ಮಸ್ಕಿಯಲ್ಲಿ ಅಂದು ಪಟಾಕಿಗಳ ಸದ್ದೇ ಜನರ ಕಿವಿಯ ತಮಟೆಯನ್ನು ಹರಿದು ಹಾಕಿತ್ತು. ಅಂದು ಸಂಭ್ರಮ ಪಟ್ಟವರೇ ಹೇಳಬೇಕು ನಾವುಗಳು ಏಕೆ ಸಂಭ್ರಮ ಪಟ್ಟೆವು? ಎಂದು. ಮಸ್ಕಿ ತಾಲ್ಲೂಕಾಗಿದೆ ಎಂದು ಸಂಬ್ರಮ ಪಟ್ಟೆವೇ….ಅಥಾವ ಇನ್ನೂ ಲಿಂಗಸ್ಗೂರ ಸಿಂಧನೂರ ಮಾನ್ವಿ ಗೆ ಅಲೆಯುತ್ತಿವೇ ಎಂದೂ ಪಟಾಕಿ ಸಿಡಿಸಿ ಸಂಬ್ರಮ ಪಟ್ಟೆವೇ? ಇಂದಿಗೂ ಆ ಸಂಭ್ರಮ ಅನಾಥ ಮಗುವಾಗೇ ಬೀದಿಯಲ್ಲಿ ಭಿಕ್ಷೆ ಬೇಡುತ್ತಿದೆ. ಗಂಡ ಹೆಂಡಿರ ಜಗಳದಲ್ಲಿ ಕೂಸು ಬಡವಾಯ್ತು ಎಂಬಂತೆ, ಮಸ್ಕಿಯ ಜನರ ಪಾಡಾಗಿದೆ. ಇಂದಿಗೂಸಹ ಮಸ್ಕಿಯ ಜನ ಸಣ್ಣ ಕೆಲಸಕ್ಕೂ ತಮ್ಮ ಮೂಲ ತಾಲ್ಲೂಕಿಗೇ ಅಲೆಯುವ ಕರ್ಮ ತಪ್ಪಿಲ್ಲ.ಜನರಿಗೆ ಅನುಕೂಲವಾಗಲೆಂದು ಅಂದು ತಾಲ್ಲೂಕು ರಚನೆ ಮಾಡಿದರು, ಆದರೆ ಇಂದು ಕೂಲಿ ಮಾಡಿ ಬದುಕುವ ಬಡಜನರು ಸಣ್ಣ ಕೆಲಸವಿದ್ದರೂ ಅವರ ಮೂಲ ತಾಲ್ಲೂಕಿಗೆ ತೆರಳುವ ಪರಿಸ್ಥಿತಿ ತಪ್ಪಿಲ್ಲ. ಅವರ ಒಂದು ದಿನದ ದುಡಿಮೆ ತಾಲ್ಲೂಕ ಕೇಂದ್ರಕ್ಕೆ ಅಲೆಯುವುದರಲ್ಲೇ ಕಳೆದು ಹೋಗುತ್ತಿದೆ. ಇದಕ್ಕೆ ಯಾರು ಹೊಣೆ? ತಾಲ್ಲೂಕು ಎಂದೂ ಘೋಷಣೆ ಮಾಡಿ ಐದಾರು ವರ್ಷ ವಾಗಿದ್ದರೂ ಬೆರಳೆಣಿಕೆಯಷ್ಟೇ ಇಲಾಖೆಗಳು ಕಾರ್ಯಾರಂಭ ಮಾಡಿದ್ದನ್ನು ಬಿಟ್ಟರೆ ಇನ್ನುಳಿದ ಹಲವು ಇಲಾಖೆಗಳಿಗೆ ಮಸ್ಕಿಯ ನೆಲದಲ್ಲಿ ಬೇರೂರುವ ಭಾಗ್ಯ ಸಿಕ್ಕಿಲ್ಲ.ಮಾಧ್ಯಮಗಳಲ್ಲಿ ಈ ಬಗ್ಗೆ ಹಲವು ಬಾರಿ ವರದಿಯಾದಮೇಲೆ ಮಾಧ್ಯಮಗಳಿಗೆ ಅಂಜಿದ ಇಲಾಖೆಗಳು PWD ಕ್ಯಾಂಪ ನಲ್ಲಿ ತಾತ್ಕಾಲಿಕ ಇಲಾಖೆಯನ್ನು ಆರಂಭಿಸಿದರು. ಆದರೆ ಅದು ಕೇವಲ ಒಂದೆರಡು ತಿಂಗಳು ಮಾತ್ರ ಮಸ್ಕಿಯ ಜನತೇ ಏನು ಕೇಳುವುದಿಲ್ಲ ನಾವು ಅವರ ಕಣ್ಣೋರೆಸೋಣವೆಂಬಂತೆ ಕೆಲ ತಿಂಗಳ ಮಟ್ಟಿಗೆ ಇಲಾಖೆಯ ನಾಮಫಲಕ, ಒಬ್ಬ ಸಿಂಬ್ಬಂದಿಯನ್ನು ಇಟ್ಟು ನಂತರ ಮಂಗಮಾಯವಾಗಿ ಮಸ್ಕಿಯ ಜನತೆಯನ್ನು ಮೂರ್ಖರನ್ನಾಗಿಸಿದರು. ಅಬಾಲ ವೃದ್ದರಾಧಿಯಾಗಿ ಲಿಂಗಸುಗೂರು, ಸಿಂಧನೂರು,ಮಾನವಿ ತಾಲೂಕಾ ಕಾರ್ಯಾಲಯಗಳಿಗೆ ಅಲೆಯುವ ಕಾಯಕ ತಪ್ಪಿಲ್ಲ. ಈ ಸೌಭಾಗ್ಯಕ್ಕಾ ಅಂದು ಸಂಭ್ರಮ ಪಟ್ಟಿದ್ದು?ಪಟಾಕಿ ಸೊಡಿಸಿ ಕುಣಿದದ್ದು?ಇದಕ್ಕೆಲ್ಲ ಯಾರು ಹೊಣೆ?ಎಲ್ಲಾ ಕಚೇರಿ ಗಳು ತಳ ಊರದಿರಲು ಅಡ್ಡಿಯಾಗಿರುವುದಾದರೂ ಏನು? ರಾಜಕಾರಣಿಗಳ ಸ್ವಪ್ರತಿಷ್ಠೆಯೋ? ಸಾಮಾನ್ಯ ಜನರ ದಡ್ಡತನವೋ? ಅಥವಾ ದುರಾದೃಷ್ಟಡವೋ?ಇದಕ್ಕೆಲ್ಲ ಯಾರು ಹೊಣೆ?ಎಲ್ಲಾ ಕಚೇರಿ ಗಳು ತಳ ಊರದಿರಲು ಅಡ್ಡಿಯಾಗಿರುವುದಾದರೂ ಏನು? ರಾಜಕಾರಣಿಗಳ ಸ್ವಪ್ರತಿಷ್ಠೆಯೋ? ಸಾಮಾನ್ಯ ಜನರ ದಡ್ಡತನವೋ? ಅಥವಾ ದುರಾದೃಷ್ಟಡವೋ?ಆರ್ಥಿಕ ಇಲಾಖೆಯ ಅನುಮೋದನೆ ಪಡೆದು ಎಲ್ಲಾ ಕಾನೂನು ಪ್ರಕ್ರಿಯೆ ಮುಗಿದ ಮೇಲೆ ತಾಲ್ಲೂಕು ಕೇಂದ್ರವೆಂದು ಘೋಷಣೆ ಮಾಡುತ್ತಾರೆ. ಆದರೇ ನಾವು ಕಳೆದ ಐದಾರು ವರ್ಷಗಳಿಂದ ಇನ್ನು ಲಿಂಗಸ್ಗೂರಗೆ ಹೋಗುವುದು ತಪ್ಪಿಲ್ಲ ಇದರಿಂದಾಗಿ ನಮ್ಮ ಸಮಯ ವ್ಯರ್ಥ ಎಂದು ಹೆಸರು ಹೇಳಲು ಇಚ್ಛಿಸಿದ ಸರ್ಕಾರಿ ನೌಕರರೊಬ್ಬರು ಹೇಳುತ್ತಾರೆ*. ಪ್ರಭಾವಿಗಳು ಹಣವಿದ್ದವರು ಬೆಂಗಳೂರಿಗೆ ಬೇಕಾದರೂ ಹೋಗಿಬರುತ್ತಾರೆ, ಅವರಿಗೆ ಒಂದು ದಿನದ ಕೂಲಿ ಎಂದರೇನೆಂಬುದೇ ಗೊತ್ತಿಲ್ಲ.
ಅಂತವರಿಗೆ ನಮ್ಮ ಕಷ್ಟಗಳನ್ನು ಹೇಗೇ ಹೇಳೋಣವೆಂಬುದು ಕೂಲಿಕಾರರ ಮನದಾಳದ ಮಾತಾಗಿದೆ. ತಾಲೂಕ ಕೇಂದ್ರದಲ್ಲಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆ, ಸಮುದಾಯ ಆರೋಗ್ಯ ಕೇಂದ್ರವಾಗಿದ್ದು ತಾಲೂಕ ಆಸ್ಪತ್ರೆಯಾಗಿ ಮೇಲ್ದರ್ಜೆಗೆ ಏರಿಸುವ ಸೌಜನ್ಯ ಕೂಡ ಮಾಡಲಾಗಿಲ್ಲಇಲ್ಲಿನ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು, ಸಾರ್ವಜನಿಕರು ಲಿಂಗಸಗೂರು , ಸಿಂಧನೂರು ನಂತಹ ಪಟ್ಟಣಗಳಿಗೆ ಅಲೆಯಬೇಕಿದೆ. ಮಕ್ಕಳ ತಜ್ಞರ ಕೊರತೆ:- ತಾಲೂಕಿನ ಸುತ್ತಲಿನಿಂದಲು ಜನ ಅದರಲ್ಲೂ ಚಿಕ್ಕ ಮಕ್ಕಳ ಆರೋಗ್ಯದಲ್ಲಿ ಏರುಪೇರಾದಾಗ ಲಿಂಗಸಗೂರು ಬಿಟ್ಟರೆ ಸಿಂಧನೂರೇ ಗತಿ ಎನ್ನುವಂತಾಗಿದೆ. ಅದಕ್ಕಾಗಿ ಸರಕಾರಿ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಿ ಸೂಕ್ತ ಮಕ್ಕಳ ತಜ್ಞ ವೈದ್ಯರುಗಳ ನೇಮಕವಾಗಬೇಕೆನ್ನುವುದು ಇಲ್ಲಿನ ಅದೆಷ್ಟೋ ಜನರ ಬಹುದಿನಗಳ ಕನಸಾಗಿದೆ . ಇದರಿಂದ ಬಡಬಗ್ಗರಿಗೆ ಮಾತ್ರ ತೊಂದರೆ ಉಂಟಾಗುತ್ತಿದೆ ಎನ್ನುವುದು ಮಾತ್ರ ಕಹಿ ಸತ್ಯ.ಧನಿಕರು,ಮಧ್ಯಮವರ್ಗ ಹಾಗೋ ಹೀಗೋ ಮಾಡಿ ದೂರದ ಸ್ಥಳಗಳಿಗೆ ಹೋಗಿ ಅನುಕೂಲ ಮಾಡಿಕೊಳ್ಳುತ್ತಾರೆ. ಆರ್ಥಿಕವಾಗಿ ಹಿಂದುಳಿದ ವರ್ಗಗಳ ಪಾಡೇನು ಎನ್ನುವುದನ್ನು ಯೋಚಿಸಬೇಕಿದೆ.
ನಿರ್ಲಕ್ಷಕ್ಕೆ ಒಳಗಾದ ಶಿಕ್ಷಣ ಇಲಾಖೆ;-
ಮಸ್ಕಿ ತಾಲೂಕ ಘೋಷಣೆಯಾಗಿ 4 ವರ್ಷ ಕಳೆದರೂ ಇಂದಿಗೂ ಶಿಕ್ಷಣ ಇಲಾಖೆಗೆ ಸಂಬಂಧಿಸಿದ ಕಚೇರಿಗಳು ಇಲ್ಲದೆ ಮತ್ತದೇಬಾಲೆದಾಟ. ವಿದ್ಯಾರ್ಥಿಗಳ ಪ್ರಮಾಣಪತ್ರಗಳಿಗೆ ಸಹಿಮಾಡಲು ಪ್ರಭಾರಿ ಶಿಕ್ಷಣಾಧಿಕಸರಿಗಳನ್ನು ನೇಮಿಸಿದ್ದನ್ನು ಬಿಟ್ಟರೆ ಬೇರಾವ ಬದಲಾವಣೆಗಳಿಲ್ಲಶಿಕ್ಷಕರ ಪರಸ್ಥಿತಿಯಂತು ಹೇಳತೀರದು,ತಮ್ಮ ತಿಂಗಳ ಸಂಬಳಕ್ಕೆ ಸಂಬಂಧಿಸಿದಂತೆ ಅಲೆದಾಟ ತಪ್ಪಿಲ್ಲ, ಈ ವಿಚಾರವಾಗಿ ಅನೇಕಬಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಪ್ರತಿಭಟನೆ ನಡೆದು ತಾಲೂಕ ದಂಡಾಧಿಕಾರಿ ಗಳಿಗೆ ಮನವಿ ಪತ್ರ ನೀಡಿದ್ದರೂ ಪ್ರಯೋಜನವಾಗಿಲ್ಲ ಎನ್ನುವುದು ಪರಿಸ್ಥಿತಿಯ ವಿಷಮತೆಯನ್ನು ಎತ್ತಿ ತೋರಿಸುತ್ತಿದೆ.
ಜಗತ್ಪ್ರಸಿದ್ಧ ಅಶೋಕನ ಶಿಲಾಶಾಸನಕ್ಕೆ ಕವಡೆ ಕಾಸಿನ ಕಿಮ್ಮತ್ತು ಸಿಗುತ್ತಿಲ್ಲ.
ಐತಿಹಾಸಿಕ ಕುರುಹು ಉಳ್ಳ ಮಸ್ಕಿಯನ್ನು ರಾಜ್ಯ ಸರಕಾರ , ಪ್ರವಾಸೋಧ್ಯಮ ಇಲಾಖೆ, ಜಿಲ್ಲಾ ಆಡಳಿತ ಮತ್ತು ಸ್ಥಳೀಯ ಆಡಳಿತಗಳು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದು ಅಶೋಕ ಶಿಲಾಶಾಸನದ ಅಳಿವಿನಂಚಿಗೆ ನೂಕುತ್ತಿದೆ. ಶಾಸನದ ಅಭಿವೃದ್ಧಿ ಹೆಸರಲ್ಲೂ ಅದೆಷ್ಟೋ ಕಾಮಗಾರಿಗಳು ಕೇವಲ ಕಾಗದದಲ್ಲಿ ಮಾತ್ರ ರಾರಾಜಿಸುತ್ತಿವೆ. ಪ್ರವಾಸೋಧ್ಯಮ ಮತ್ತು ಪುರಾತತ್ವ ಇಲಾಖೆಗಳೂ ನಿರ್ಲಕ್ಷ್ಯ ತಾಳಿವೆ.ಸ್ಥಳೀಯ ಆಡಳಿತ ,ಜನಪ್ರತಿನಿಧಿಗಳ ಬೇಜವಾಬ್ದಾರಿ ಧೋರಣೆ ಇದೆಲ್ಲದಕ್ಕೂ ಸಾಕ್ಷಿಯಾಗಿದೆ. ಇನ್ನಾದರೂ ಸರ್ಕಾರ,ಪ್ರವಾಸೋಧ್ಯಮ ಇಲಾಖೆ,ಜಿಲ್ಲಾಡಳಿತ ತಾಲೂಕ ಆಡಳಿತ ಮತ್ತು ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು,ಅಧಿಕಾರಿ ವರ್ಗ ಎಚ್ಚೆತ್ತು ಮಸ್ಕಿಗೆ ತಾಲೂಕಿನ ರೂಪ ನೀಡಲು ಮುಂದಾಗಬೇಕಿದೆ. ಎಂಬುದು ಮಸ್ಕಿ ತಾಲ್ಲೂಕಿನ ಜನರ ಆಶಯವಾಗಿದೆ. ಅವರ ಆಶಯ ಈಡೇರಿವೋದು?ಅಥಾವ ಹೆಸರಿಗಷ್ಟೇ ತಾಲ್ಲೂಕ ಕೇಂದ್ರ ವಾಗಿ ಉಳಿಯುವುದೋ ಕಾದು ನೊಡೋಣ.
ವರದಿ : ಸಿದ್ದಯ್ಯ ಸ್ವಾಮಿ tv8kannada ಮಸ್ಕಿ