ಇತ್ತೀಚಿನ ಸುದ್ದಿ

ಕೋಲಾರ ಜನರ ನಿದ್ದೆ ಕೆಡಿಸಿದ್ದ ಕುಖ್ಯಾತ ಮನೆಗಳ್ಳರ ಗ್ಯಾಂಗ್ ಬಂಧಿಸಿದ ಹೊಸಕೋಟೆ ಪೊಲೀಸ್ ಇನ್ಸ್ಪೆಕ್ಟರ್ ಅಶೋಕ್.

ಹೊಸಕೋಟೆ -ಚಿಂತಾಮಣಿ ರಾಜ್ಯ ಹೆದ್ದಾರಿಯಲ್ಲಿ ಓಡಾಡುವ ವಾಹನಗಳನ್ನು ಅಡ್ಡಗಟ್ಟಿ ಸವಾರರಿಂದ ಹಣ, ಒಡವೆಗಳನ್ನು ಮತ್ತು ಬೆಲೆ ಬಾಳುವ ವಸ್ತುಗಳನ್ನು ದರೋಡೆ ಮಾಡಲು ಸಂಚು ಮಾಡುತ್ತಿದ್ದ ಆರೋಪಿಗಳನ್ನು ವಶಕ್ಕೆ ಪಡೆದು. ಸುಮಾರು 06 ಲಕ್ಷ ಮೌಲ್ಯದ ಕಾರು. ಒಂದು ಲಕ್ಷದ ಐವತ್ತು ಸಾವಿರ ಬೆಲೆಬಾಳುವು 04 ಮೋಬೈಲ್ ಪೋನ್ ಮತ್ತು ಆರೋಪಿಗಳು ಕೃತ್ಯಕ್ಕೆ ಬಳಸಲು ತಂದಿದ್ದ ಮಾರಕಾಸ್ತ್ರಗಳು ಹಾಗೂ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳು 10 ದಿನಗಳ ಹಿಂದೆ. ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಬೈರಕೂರ ಹೋಬಳಿಯ ರಾಜೇಂದ್ರಹಳ್ಳಿ ಗ್ರಾಮದ, ಒಂಟಿ ಮನೆಯಲ್ಲಿ ರೈತರು ಟೊಮ್ಯಾಟೊ ಬೆಳದು ಮಾರಾಟ ಮಾಡಿ 05 ಲಕ್ಷ ರೂ ಹಣ ಬಂದಿರುವ ಬಗ್ಗೆ ಮಾಹಿತಿಯನ್ನು ಖಚಿತ ಪಡಿಸಿಕೊಂಡು ಆರೋಪಿಗಳು ರಾತ್ರಿ ಸಮಯದಲ್ಲಿ ಮನೆಯಲ್ಲಿದ್ದ ವೃದ್ದರು ಮತ್ತು ಚಿಕ್ಕ ಮಕ್ಕಳನ್ನು ಮಾರಕಾಸ್ತ್ರಗಳಿಂದ ಹೆದರಿಸಿ ಅವರ ಬಳಿಯಿದ್ದ ಸುಮಾರು 207 ಗ್ರಾಂ ಚಿನ್ನದ ಒಡವೆಗಳನ್ನು ಹಾಗು ನಾಲ್ಕು ಲಕ್ಷದ ಐವತ್ತುಸಾವಿರ ರೂ ನಗದು ಹಣವನ್ನು ದೋಚಿಕೊಂಡು ಪರಾರಿಯಾಗಿರುತ್ತಾರೆ.


ಇದೇ ಆರೋಪಿಗಳು ಹೊಸಕೋಟೆ ಪೊಲೀಸ್ ಠಾಣೆ ಸರಹದ್ದಿನ ಪ್ಯಾಕ್ಟರಿ ಗೇಟ್ ಬಳಿ ಮಾರಕಾಸ್ತçಗಳಿಂದ ಹೈವೇ ರಾಬರಿ ಮಾಡಲು ಸಂಚು ರೂಪಿಸಿದ್ದ ವೇಳೆ ಹೊಸಕೋಟೆ ಪೊಲೀಸ್ ಇನ್ಸ್ಪೆಕ್ಟರ್ ಅಶೋಕ್ ನೇತೃತ್ವದ ತಂಡ ಸಿನಿಮೀಯ ರೀತಿಯಲ್ಲಿ ಸುತ್ತುವರೆದು ಬಂಧಿಸಿದ್ದಾರೆ. ಮತ್ತಷ್ಟು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಕಂಡು ಬಂದಿದ್ದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button