ಇತ್ತೀಚಿನ ಸುದ್ದಿ

ಫೆ.22 ಕೊಟ್ಟೂರು ಶ್ರೀಗುರುಬಸವೇಶ್ವರ ರಥೋತ್ಸ

ಕೊಟ್ಟೂರು : ಜಾತ್ರೋತ್ಸವದಲ್ಲಿ ಸಂಪೂರ್ಣ ಬ್ಯಾನರ್ ನಿಷೇಧ, ಜಾತ್ರೆಯಲ್ಲಿ ಕಳ್ಳತನ ತಡೆಗೆ ಸಿಸಿ ಕ್ಯಾಮೆರಾ ಕಣ್ಣಾವಲು ಜಿಲ್ಲಾಧಿಕಾರಿ ಎಂ.ಎಸ್‌.ದಿವಾಕರ ಹೇಳಿಕೆ |

ಈ ಬಾರಿಯೂ ಭಕ್ತರೊಂದಿಗೆ ಕೊಟ್ಟೂರಿಗೆ ಕಾಲ್ನಡಿಗೆಕೊಟ್ಟೂರು:-

ಫೆಬ್ರವರಿ 22 ರಂದು ಜರುಗಲಿರುವ ಕೊಟ್ಟೂರು ಶ್ರೀಗುರುಬಸವೇಶ್ವಸ್ವಾಮಿ ದೇವಸ್ಥಾನದ ರಥೋತ್ಸವಕ್ಕೆ ಭಕ್ತಾಧಿಗಳನ್ನು ಅತಿಥಿಗಳಂತೆ ಅಹ್ವಾನಿಸಲು ಕೊಟ್ಟೂರಿನ ಜನತೆ ಜಿಲ್ಲಾಡಳಿತದ ಜೊತೆ ಕೈಜೋಡಿಸಬೇಕೆಂದು ಜಿಲ್ಲಾಧಿಕಾರಿ ಎಂ. ಎಸ್.ದಿವಾಕರ್ ಹೇಳಿದರು.

ಕೊಟ್ಟೂರು ದೇವಸ್ಥಾನದ ಮುಂಭಾಗದಲ್ಲಿ ಹಿಂದೂ ಧಾರ್ಮಿಕ ಸಂಸ್ಥೆಗಳ ಮತ್ತು ಧರ್ಮದಾಯ ದತ್ತಿ ಇಲಾಖೆ ಹಾಗೂ ಶ್ರೀ ಗುರುಬಸವೇಶ್ವರ ಸ್ವಾಮಿ ದೇವಸ್ಥಾನ ಸಹಯೋಗದಲ್ಲಿ ಏರ್ಪಡಿಸಿದ್ದ ಶ್ರೀಗುರುಬಸವೇಶ್ವರ ಸ್ವಾಮಿ ವಾರ್ಷಿಕ ರಥೋತ್ಸವದ ಪೂರ್ವಭಾವಿ ಸಭೆಯನ್ನು ಉದ್ಘಾಟಿಸಿ ಬುಧವಾರ ಅವರು ಮಾತನಾಡಿದರು. ಭಕ್ತರಿಗೆ ನಿತ್ಯ ಪ್ರಸಾದ ವ್ಯವಸ್ಥೆ ಕಲ್ಪಿಸಲು ದೇವಸ್ಥಾನದ ಎದುರುಗಡೆ ಇರುವ ಶ್ರೀಗುರುಬಸವರಾಜಸ್ವಾಮಿ ಟಸ್ಟ್ ನ ಪ್ರಸಾದ ಮತ್ತು ಕಲ್ಯಾಣ ಮಂಟಪವನ್ನು ದೇವಸ್ಥಾನಕ್ಕೆ ನೀಡುವಂತೆ ಟ್ರಸ್ಟಿ ಹರ್ಷವರ್ಧನರನ್ನು ಮನವೊಲಿಸಲಾಯಿತು. ಉತ್ತರ ಕರ್ನಾಟಕ ಭಾಗದಲ್ಲಿ ಕೊಪ್ಪಳ ಜಾತ್ರೋತ್ಸವ ಬಳಿಕ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಸೇರುವ ದೈವಿಕ ಸ್ಥಳ ಕೊಟ್ಟೂರು ಕ್ಷೇತ್ರವಾಗಿದೆ. ಈ ಬಾರಿಯ ರಥೋತ್ಸವ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಿಸಲು ಜಿಲ್ಲಾಡಳಿತ ಸಜ್ಜಾಗಿದೆ. ಹಿಂದಿನ ಬಾರಿ 9 ಲಕ್ಷ ಜನಸಂಖ್ಯೆ ರಥೋತ್ಸವಕ್ಕೆ ಆಗಮಿಸಿದ್ದರು, ಯಾವುದೇ ತೊಂದರೆ ಆಗದಂತೆ ಸ್ಥಳೀಯರ ಸಹಕಾರದಿಂದ ಯಶಸ್ವಿಗೊಳಿಸ ಲಾಗಿದೆ. ಈ ಬಾರಿಯೂ ಜಾತೆಗೆ ಬರುವ ಭಕ್ತಾಧಿಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸುವ ಸಲುವಾಗಿ ವಿವಿಧ ಇಲಾಖೆಗಳಿಂದ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗುವುದು.ಈಬಾರಿಯು ಅಯ್ಯನಹಳ್ಳಿಯಿಂದಕಾಲ್ನಡಿಗೆ ಮೂಲಕ ಕೊಟ್ಟೂರಿಗೆ ಆಗಮಿಸುತ್ತೇನೆ. ಇದರಿಂದ ಸಮಸ್ಯೆಗಳು ಆರಿಯಲು ತಿಳಿಯಲು ಸಾಧ್ಯವಾಗಲಿದೆ ಎಂದರು.ಶಾಸಕ ಕೆ.ನೇಮಿರಾಜ ನಾಯ್ಕ ಮಾತನಾಡಿ, ಶ್ರೀಗುರುಕೊಟ್ಟೂರೇಶ್ವರ ರಥೋತ್ಸವ ನಿಮಿತ್ತ ಕೊಟ್ಟೂರಿಗೆ ಸಂಪರ್ಕ ಕಲ್ಪಿಸುವ ಎಲ್ಲಾ ರಸ್ತೆಗಳ ಅಭಿವೃದ್ಧಿಗೆ 35 ಕೋಟಿ ರೂ.ಗಳ ಅನುದಾನ ನೀಡಲಾಗಿದೆ. ರಥೋತ್ಸವದ ವೇಳೆ ಗುಣಮಟ್ಟದ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಸೂಚಿಸಲಾಯಿತು. ಜಾತ್ರೋತ್ಸವದಲ್ಲಿ ಸಂಪೂರ್ಣ ಬ್ಯಾನರ್ ನಿಷೇಧಗೊಳಿಸಬೇಕು ಇದಕ್ಕೆ ಪಟ್ಟಣ ಪಂಚಾಯ್ತಿಯಿಂದ ಕಟ್ಟುನಿಟ್ಟಿನ ಕ್ರಮವಹಿಸಬೇಕು. ಜಾತ್ರೆಗೆ ಆಗಮಿಸುವ ಕಾಲ್ನಡಿಗೆಯಲ್ಲಿ ಆಗಮಿಸುವ ಸಾವಿರಾರು ಭಕ್ತಾಧಿಗಳಿಗೆ ಮೂಲಭೂತ ಸೌಕರ್ಯಗಳ ಕೊರತೆಯಾಗದಂತೆ ಒದಗಿಸಬೇಕು. ಹಗರಿಬೊಮ್ಮನಹಳ್ಳಿಯಿಂದ ಕೊಟ್ಟೂರಿಗೆ ಕಾಲ್ನಡಿಗೆ ಮೂಲಕ ಆಗಮಿಸುತ್ತೇನೆ. ದಾರಿಯುದ್ದಕ್ಕೂ ಭಕ್ತರಿಗೆ ಅನುಕೂಲ ಕಲ್ಪಿಸುವ ಸ್ವಯಂಸೇವಕರಿಗೆ ಯಾವುದೇ ತೊಂದರೆ ಆಗದಂತೆ ಸಹಕಾರ ನೀಡಬೇಕು ಎಂದರು.

ಪೂರ್ವಸಿದ್ಧತೆಗೆ ಶೀಘ್ರ ಕ್ರಮ :

ಜಾತ್ರೋತ್ಸವದಲ್ಲಿ ಶುದ್ಧ ಕುಡಿಯುವ ನೀರು ಪೂರೈಕೆಗೆ ಆದ್ಯತೆ ನೀಡಿ ಮೂರು ಬಾರಿ ಪ್ರಯೋಗಾಲಯದಲ್ಲಿ ಪರೀಕ್ಷಿಸಿ ಪೂರೈಕೆಗೆ ಕ್ರಮ ವಹಿಸಬೇಕು. ಪಟ್ಟಣದಲ್ಲಿ ನೀರಿನ ಪೈಪ್‌ ಲೈನ್‌ಗಳು ದುರಸ್ಥಿಗೆ ಪರಿಶೀಲನೆ ನಡೆಸಿ. ತ್ಯಾಜ್ಯ ಸಂಗ್ರಹವಾಗದಂತೆ ನಿತ್ಯ ತ್ಯಾಜ್ಯ ಸಾಗಾಣಿಕೆಗೆ ಕ್ರಮ ವಹಿಸಬೇಕು. ರಸ್ತೆಗಳನ್ನು ಧೂಳುಮುಕ್ತವಾಗಿಸಲು ನೀರು ಸಿಂಪರಣೆ, ನಿತ್ಯ ಚರಂಡಿಗಳ ಸ್ವಚ್ಛತೆಗೆ ಸ್ಥಳೀಯ ಪಟ್ಟಣ ಪಂಚಾಯಿತಿ ಅಧಿಕಾರಿಗಳು ನಿಗಾ ವಹಿಸಲು ಸೂಚಿಸಲಾಯಿತು.

ಜಾತ್ರೋತ್ಸವದಲ್ಲಿ ನಾಟಕ ಕಂಪನಿ ಸೇರಿ ಮನೋರಂಜನಾತ್ಮಕ ಕೇಂದ್ರಗಳಿಂದತೆರಿಗೆಗಳನ್ನು ಸಂಗ್ರಹಿಸಿ ವಿಜೃಂಭಣೆಯಿಂದ ಆಚರಿಸಲು ಪಟ್ಟಣ ಪಂಚಾಯತಿ ಕಾರ್ಯ ನಿರ್ವಹಿಸಬೇಕು.

ಕಳ್ಳತನ ತಡೆಗೆ ಕಡಿವಾಣ :

ಹಿಂದಿನ ರಥೋತ್ಸವದಲ್ಲಿ ಸರಗಳ್ಳತನ, ಪಿಕ್ ಪ್ಯಾಕೆಟ್, ಮೊಬೈಲ್ ಕಳ್ಳತನಗಳ ಪ್ರಕರಣಗಳು ಹೆಚ್ಚಾಗಿರುವ ಹಿನ್ನಲೆಯಲ್ಲಿ ಈ ಬಾರಿ ವಿಶೇಷವಾಗಿ ಪೊಲೀಸ್ ಠಾಣೆಯಲ್ಲಿನ ಕಳ್ಳರ ಭಾವಚಿತ್ರಗಳನ್ನು ಬ್ಯಾನರ್‌ನಲ್ಲಿ ಮುದ್ರಣ ಮಾಡಿಸಿ ಸಾರ್ವಜನಿಕರ ಜಾಗೃತಿಗಾಗಿ ಕೊಟ್ಟೂರಿಗೆ ಆಗಮಿಸುವ ರಸ್ತೆ ಭಾಗದಲ್ಲಿ ಅಳವಡಿಸಲು ಕ್ರಮ ವಹಿಸಬೇಕು. ಹೆಚ್ಚು ಜನದಟ್ಟನೆಯ ಪ್ರಮುಖ ಸ್ಥಳಗಳನ್ನು ಗುರುತು ಮಾಡಿ ಸಿಸಿ ಕ್ಯಾಮೆರಾ ಅಳವಡಿಸಲು ಸಿದ್ಧತೆ ಕೈಗೊಳ್ಳುವಂತೆ ತಿಳಿಸಿದರು.ಜಾತ್ರೋತ್ಸವದಲ್ಲಿ ಆರೋಗ್ಯ ರಕ್ಷಣೆಯ ಹಿತದೃಷ್ಟಿಯಿಂದ ಒಟ್ಟು 6 ಅಂಬ್ಯುಲೆನ್ಸ್, 4 ಶಾತ್ಕಾಲಿಕ ಆರೋಗ್ಯ ಕೇಂದ್ರಗಳನ್ನು ತೆರೆಯಲಾಗುವುದು. ರಥೋತ್ಸವದ ವೇಳೆ ಕಾಲ್ತುಳಿತವಾಗದಂತೆ, ಜಾತ್ರೆಗೆ ಆಗಮಿಸುವ ವೇಳೆ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಆಗದಂತೆ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಬಂದೋಬಸ್ತ್ ನೀಡಲಾಗುವುದು. ಜಾತ್ರೆಗೆ ಬರುವ ಭಕ್ತಾಧಿಗಳಿಗೆ ಬಸ್‌ಗಳ ತೊಂದರೆಯಾಗದಂತೆ ಜಿಲ್ಲೆಯ ಎಲ್ಲಾ ಭಾಗದಿಂದಲೂ ಹೆಚ್ಚಿನ ಸಂಖ್ಯೆಗಳಲ್ಲಿ ಬಸ್‌ಗಳ ಸಂಪರ್ಕ ಕಲ್ಪಿಸಲಾಗುತ್ತದೆ. ಸ್ಥಳೀಯ ಬಸ್‌ಗಳು ಹೆಚ್ಚುವರಿ ಟ್ರಿಪ್‌ಗಳ ಮೂಲಕ ಭಕ್ತರು ಬರಲು, ಹೋಗಲು ತೊಂದರೆಯಾಗದಂತೆ ವ್ಯವಸ್ಥೆ ಕಲ್ಪಿಸುವಂತೆ ಸಾರಿಗೆ ಅಧಿಕಾರಿಗಳಿಗೆ ಸೂಚಿಸಲಾಯಿತು. ಜಾತ್ರೋತ್ಸವದಲ್ಲಿ ನಾಟಕ ಮತ್ತು ಮನೋರಂಜನಾ ಕೇಂದ್ರಗಳಿಗೆ ಮಾತ್ರ ಅವಕಾಶ ನೀಡಬೇಕು.

ಸ್ಥಳೀಯರ ಸಲಹೆಗಳು :

ಪಟ್ಟಣದಲ್ಲಿನ ಬಸ್ ಸ್ಟಾಂಡ್ ಬಳಿಯಿರುವ ನಿರುಪಯುಕ್ತ ವಿದ್ಯುತ್ ಕಂಬಗಳನ್ನು ಜೆಸ್ಕಾಂ ಇಲಾಖೆ ತೆರುವುಗೊಳಿಸಬೇಕು. ವಿವಿಧವಾರ್ಡಗಳಲ್ಲಿ ಜನರ ಒಡಾಟ ನಿಯಂತ್ರಿಸಲು ಅನಗತ್ಯವಾಗಿ ಬ್ಯಾರಿಕೇಡ್‌ಗಳನ್ನು ಅಳವಡಿಸದಂತೆ ಪೊಲೀಸ್ ಇಲಾಖೆ ಕ್ರಮ ವಹಿಸಬೇಕು. ದೇವಸ್ಥಾನ ಪಕ್ಕದಲ್ಲಿರುವ ನಿವೇಶನದಲ್ಲಿ ತಾತ್ಕಾಲಿಕವಾಗಿ ಮಹಿಳೆಯರಿಗೆ ಸ್ನಾನಗೃಹ ಶೀಘ್ರ ನಿರ್ಮಿಸಲು ಆದ್ಯತೆ ನೀಡಬೇಕು. ರಥೋತ್ಸವದ ದಿನ ರಥದ ಬಳಿ ಹೂ-ಹಣ್ಣು ಮಾರಾಟ ವ್ಯಾಪಾರಿಗಳಿಗೆ ತೊಂದರೆ ಆಗದಂತೆ, ಮಹಿಳೆಯರಿಗೆ ಶೌಚಾಲಯ ವ್ಯವಸ್ಥೆಗೆ ಮೊಬೈಲ್ ಟಾಯ್ಲೆಟ್ ಸಂಖ್ಯೆ ಹೆಚ್ಚಿಸುವಂತೆ, ರಥೋತ್ಸವದ ದಿನ ಯಾವುದಾದರೊಂದು ಮುಖ್ಯ ಟಿವಿ ವಾಹಿನಿಯಲ್ಲಿ ಲೈವ್ ಪ್ರಸಾರಕ್ಕೆ ಅನುಕೂಲ ಮಾಡಬೇಕು. ಡೋನ್ ಮೂಲಕ ಸ್ವಾಮಿಗೆ ಪುಷ್ಪಾರ್ಚನೆ ಮಾಡಲು ಅವಕಾಶ ನೀಡಿ, ಪಲ್ಲಕ್ಕಿ ಉತ್ಸವದ ವೇಳೆ ಜನರು ಮುಟ್ಟಿ ನಮಸ್ಕಾರ ಮಾಡಲು ಬರುವ ಜನರನ್ನು ಪೊಲೀಸ್ ಅಧಿಕಾರಿಗಳು ನಿಯಂತ್ರಣ ಮಾಡಬೇಕು. ಸಾರ್ವಜನಿಕರಿಗೆ 60 0 ಉಂಟಾಗುವ ಧ್ವನಿವರ್ಧಕಗಳು, ಪೀಪಿಗಳನ್ನು ನಿಷೇಧಿಸುವಂತೆ ಸ್ಥಳೀಯರು ಸಲಹೆಗಳನ್ನು ನೀಡಿದರು.ಈ ವೇಳೆ ಜಿಪಂ ಸಿಇಒ ನೊಂಗ್ಲಾಯ್ ಮೊಹಮ್ಮದ್ ಅಕ್ರಮ್ ಆಲಿ ಷಾ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಲೀಂ ಪಾಷಾ, ಮಹಲ್ ಮಠದ ಕೊಟ್ಟೂರು ದೇವರು, ಧರ್ಮಕರ್ತ ಶೇಖರಯ್ಯ ಪಟ್ಟಣ ಪಂಚಾಯತಿ ಅಧ್ಯಕ್ಷ ರೇಖಾ ರಮೇಶ್, ಉಪಾಧ್ಯಕ್ಷ ಸಿದ್ದಯ್ಯ ಸ್ವಾಮಿ, ಮುಖಂಡ ಹರ್ಷವರ್ಧನ್, ತಹಸೀಲ್ದಾರ ಅಮರೇಶ್, ತಾಪಂ ಇಒ ಡಾ.ಆನಂದ್ ಕುಮಾರ ವೇದಿಕೆಯಲ್ಲಿದ್ದರು. ಶ್ರೀಗುರುಬಸವೇಶ್ವರ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಹನುಮಂತಪ್ಪ, ಪ.ಪಂ. ಮುಖ್ಯಾಧಿಕಾರಿ ನಸೂರುಲ್ಲಾ, ಪಿಎಸ್‌ಐ ಗೀತಾಂಜಲಿ ಇದ್ದರು.

ವರದಿ : C ಕೊಟ್ರೇಶ್ tv8kannada ಬಳ್ಳಾರಿ

Related Articles

Leave a Reply

Your email address will not be published. Required fields are marked *

Back to top button