ಬಿಗ್‌ಬಾಸ್ ಗೆದ್ದ ಹನುಮಂತಗೆ ಸಿಕ್ಕಿದ್ದು ₹50 ಲಕ್ಷ ಮಾತ್ರವಲ್ಲ, ನಿಜವಾಗಿಯೂ ಸಿಕ್ಕಿದ್ದೆಷ್ಟು ಮೊತ್ತ?

ಬೆಂಗಳೂರು : ಬಿಗ್‌ಬಾಸ್ ಕನ್ನಡ ಸೀಸನ್ 11ರ ವಿನ್ನರ್ ಆಗಿರುವ ಹಳ್ಳಿ ಹೈದ, ಸಿಂಗರ್ ಹನುಮಂತ್ ಲಮಾಣಿ ಅವರಿಗೆ ಲಕ್ಷ ಲಕ್ಷ ಹಣ ಬಹುಮಾನವಾಗಿ ಸಿಕ್ಕಿದೆ. ರಿಯಾಲಿಟಿ ಶೋ ಮೊದಲೇ ಹೇಳಿದಂತೆ ವಿನ್ನರ್ ಹನುಮಂತ ಅವರಿಗೆ 50 ಲಕ್ಷ ರೂಪಾಯಿ ನೀಡಲಾಗಿದೆ. ಇದರ ಜೊತೆಯಲ್ಲಿಯೇ ಇತರೆ ಬಹುಮಾನ ಹನುಮಂತ ಅವರ ಪಾಲಾಗಿದೆ.
ಕೊನೆಯ ಮೂರು ಫೈನಲಿಸ್ಟ್‌ಗಳಾಗಿದ್ದ ರಜತ್ ಕಿಶನ್, ತ್ರಿವಿಕ್ರಮ್ ಮತ್ತು ಹನುಮಂತ ಅವರನ್ನು ಸುದೀಪ್ ಅವರೇ ಬಿಗ್‌ಬಾಸ್ ಮನೆಯೊಳಗೆ ಹೋಗಿ ಕರೆದುಕೊಂಡು ಬಂದಿದ್ದರು. ವೇದಿಕೆ ಮೇಲೆ ಮೂರ ರ ಪೈಕಿ ರಜತ್ ಮೊದಲನೇಯದಾಗಿ ಔಟ್ ಆದ್ರು. ನಂತರ ಸುದೀಪ್ ಅವರ ಪಕ್ಕದಲ್ಲಿ ಹನುಮಂತ ಮತ್ತು ತ್ರಿವಿಕ್ರಮ್ ನಿಂತುಕೊಂಡಿದ್ದರು. ತ್ರಿವಿಕ್ರಮ್ ನಾನು ಸುದೀಪ್ ಅವರೇ ಎಡಭಾಗದಲ್ಲಿ ನಿಲ್ಲಬೇಕೆಂದು ಹೇಳಿ ಲೆಫ್ಟ್ ನಿಂತುಕೊಂಡರು. ಸುದೀಪ್ ಅವರ ಬಲಭಾಗದಲ್ಲಿ ಹನುಮಂತ್ ನಿಂತುಕೊಂಡಿದ್ದರು.
ಈ ಬಾರಿ ಪ್ರೇಕ್ಷಕರನ್ನು ಹೆಚ್ಚು ಕಾಯಿಸದೇ ಕೆಲವೇ ನಿಮಿಷದಲ್ಲಿಯೇ ವಿನ್ನರ್ ಹೆಸರು ಪ್ರಕಟಿಸಿದರು. ಬಿಗ್‌ಬಾಸ್ ಸೀಸನ್ 11ರ ವಿನ್ನರ್ ಆಗಿರುವ ಹನುಮಂತ 5.23 ಕೋಟಿ ಮತಗಳನ್ನು ಪಡೆದುಕೊಂಡಿದ್ದಾರೆ. ಮೊದಲ ರನ್ನರ್ ಅಪ್ ತ್ರಿವಿಕ್ರಮ್ 2 ಕೋಟಿಗೂ ಹೆಚ್ಚು ಮತಗಳನ್ನು ಪಡೆದುಕೊಂಡಿದ್ದಾರೆ. ವಿಜೇತ ಹನುಮಂತ ಅವರು 50 ಲಕ್ಷ ರೂಪಾಯಿ ಜೊತೆಯಲ್ಲಿ ಇನ್ನಿತರ ನಗದು ಬಹುಮಾನ ಪಡೆದುಕೊಂಡಿದ್ದಾರೆ. ಇನ್ನು ತ್ರಿವಿಕ್ರಮ್ ಅವರು ರನ್ನರ್ ಅಪ್ ಆಗಿ ಒಟ್ಟು 15 ಲಕ್ಷ ರೂ ನಗದು ಬಹುಮಾನ ಗೆದ್ದುಕೊಂಡಿದ್ದಾರೆ.
ಹನುಮಂತಗೆ ಸಿಕ್ಕ ಹಣವೆಷ್ಟು?
Indus Tmt Steelವತಿಯಿಂದ ಹನುಮಂತ ಅವರಿಗೆ 10 ಲಕ್ಷ ರೂಪಾಯಿ ನೀಡಲಾಯ್ತು. ನಂತರ ಲಕ್ಷುರಿ ಪಾಯಿಂಟ್ಸ್ ನೀಡುತ್ತಿದ್ದ ಜಾರ್ ಆಪ್ ವತಿಯಿಂದ ವಿನ್ನರ್ ಆಗಿರುವ ಹನುಮಂತರಿಗೆ 5 ಲಕ್ಷ ರೂಪಾಯಿ ನೀಡಲಾಯ್ತು, ಇದಾದ ಬಳಿಕ ಕಾನ್ಫಿಡೆಂಟ್ ಗ್ರೂಪ್‌ನಿಂದ 50 ಲಕ್ಷ ರೂಪಾಯಿ ಕೊಡಲಾಗಿದೆ. ಬಹುಮಾನವಾಗಿ ಒಟ್ಟು 65 ಲಕ್ಷ ರೂಪಾಯಿ ಹಣ ಹನುಮಂತ ಅವರಿಗೆ ಸಿಕ್ಕಿದೆ.
ಬಿಗ್‌ಬಾಸ್ ಮನೆಯಲ್ಲಿ ಹನುಮಂತನ ಭಜನಾ ಮಂಡಳಿ
ಹನುಮಂತ ಅವರ ಗ್ರಾಮದ ಭಜನಾ ಮಂಡಳಿ ತಂಡದ ಸದಸ್ಯರು ಬಿಗ್‌ಬಾಸ್ ಮನೆಯೊಳಗೆ ಸಂಗೀತ ಕಾರ್ಯಕ್ರಮ ನೀಡಿದರು. ಸುದೀಪ್ ಅವರ ಸಮ್ಮುಖದಲ್ಲಿಯೇ ಈ ಭಜನಾ ಕಾರ್ಯಕ್ರಮ ನಡೆದಿದ್ದು ವಿಶೇಷವಾಗಿತ್ತು. ಹನುಮಂತ ಹೆಸರು ಘೋಷಣೆಯಾಗುತ್ತಿದ್ದಂತೆ ಅವರ ಗೆಳೆಯರು ವೇದಿಕೆ ಮೇಲೆ ಬಂದು ಸ್ನೇಹಿತನನ್ನು ಹೆಗಲ್ಮೇಲೆ ಹೊತ್ತುಕೊಂಡು ಕುಣಿದು ಕುಪ್ಪಳಿಸಿದರು.
https://x.com/ColorsKannada/status/1883581243662709156?ref_src=twsrc%5Etfw%7Ctwcamp%5Etweetembed%7Ctwterm%5E1883581243662709156%7Ctwgr%5E33d0e6b2838d56d874b215843a6d39bd715815a1%7Ctwcon%5Es1_c10&ref_url=https%3A%2F%2Fapi-news.dailyhunt.in%2F