ಸುದ್ದಿ

ಸಿನಿಮಾ ಬಿಟ್ಟು ಸನ್ಯಾಸಿನಿಯಾದ ಸ್ಯಾಂಡಲ್‌ವುಡ್‌ ನಟಿ..!

ಪ್ರಯಾಗ್ರಾಜ್:1990ರದಶಕದಲ್ಲಿಹಲವಾರುಹಿಟ್ಸಿನಿಮಾಗಳಲ್ಲಿನಟಿಸಿದ್ದಬಾಲಿವುಡ್ಖ್ಯಾತನಟಿಮಮತಾಕುಲಕರ್ಣಿ (52ವರ್ಷ) ಅವರುಜನವರಿ 24ರಂದುಕಿನ್ನಾರ್ಅಖಾಡದಲ್ಲಿಮಹಾಮಂಡಲೇಶ್ವರ್ದೀಕ್ಷೆಸ್ವೀಕರಿಸಲಿದ್ದಾರೆಎಂದು ವರದಿ ತಿಳಿಸಿದೆ.

ಬಾಲಿವುಡ್ ನ ಮಾಜಿ ನಟಿ ಮಮತಾ ಕುಲಕರ್ಣಿ ಯಾರಿಗೆ ಗೊತ್ತಿಲ್ಲ?

90ರ ದಶಕದ ಹಿಂದಿ ಸಿನಿಮಾಗಳನ್ನು ನೋಡಿದವರಿಗೆ ಈ ಕಲರ್ ಫುಲ್ ಚಿಟ್ಟೆಯ ಹೆಸರನ್ನು ಕೇಳಿಯೇ ಇರುತ್ತಾರೆ. ಹದಿಹರೆಯದ ಹುಡುಗರ, ಸಿನಿಮಾ ರಸಿಕರ ನಿದ್ದೆಗೆಡಿಸಿದ್ದ ರೂಪವತಿ ಮಮತಾ ಕುಲಕರ್ಣಿ ಆ ಕಾಲದ ಸೂಪರ್ ಸ್ಟಾರ್.

ಸಿನಿಮಾಗಳಲ್ಲಿ ಹಾಟ್ ಅವತಾರಗಳಲ್ಲಿ ನಟಿಸಿದ್ದ ನಟಿ, ಜೀವನದಲ್ಲಿ ಸಾಕಷ್ಟು ಐಶಾರಾಮಿತನಗಳನ್ನು ಕಂಡಿದ್ದ ನಟಿ ಈಗ ಒಮ್ಮೆಲೆ ಅಧ್ಯಾತ್ಮದ ಹಾದಿ ಹಿಡಿದ್ದಾರೆ. ಎಲ್ಲ ವಿಷಯ ವಾಸನೆಗಳನ್ನು ತ್ಯಜಿಸಿ ಸನ್ಯಾಸಿನಿ ಆಗಿದ್ದಾರೆ. ಕನ್ನಡದ ‘ವಿಷ್ಣುವಿಜಯ’ ಸೇರಿದಂತೆ ಹಲವು ಹಿಂದಿ, ತೆಲುಗು, ಮಲಯಾಳಂ, ತಮಿಳು ಸಿನಿಮಾಗಳಲ್ಲಿ ನಟಿಸಿದ್ದ, 90ರ ದಶಕದಲ್ಲಿ ಹಾಟ್ ನಟಿಯಾಗಿ ಗುರುತಿಸಿಕೊಂಡಿದ್ದ ಮಮತಾ ಕುಲಕರ್ಣಿ ಈಗ ಸಾಧ್ವಿ ಆಗಿದ್ದಾರೆ. ಅವರು ಕಿನ್ನರ ಅಖಾಡದ ಮಹಾಮಂಡಲೇಶ್ವರಿ ಆಗಿ ನೇಮಕ ಆಗಿದ್ದಾರೆ.

ಕಿನ್ನರ್ ಅಖಾಡವು 2018ರಲ್ಲಿ ಸ್ಥಾಪನೆಯಾಗಿರುವ ಧಾರ್ಮಿಕ ಸಂಘಟನೆ. ಗಮನಾರ್ಹ ವಿಚಾರವೇನೆಂದರೆ, ಇದು ತೃತೀಯ ಲಿಂಗಿಗಳ ಅಧ್ಯಾತ್ಮಿಕ ಸಾಧನೆಗಾಗಿ ಹುಟ್ಟಿಕೊಂಡಿರುವ ಸಂಘಟನೆ. ಇದು ಪಂಚದಾಶನಾಮ್ ಜುನಾ ಅಖಾಡಾ ಎಂಬ (ಜುನಾ ಅಖಾಡಾ) ಎಂಬ ಧಾರ್ಮಿಕ ಸಂಘಟನೆಯ ಅಧೀನದಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಸಂಘಟನೆಯಲ್ಲಿ ತೃತೀಯ ಲಿಂಗಿಗಳಿಗೆ ಅಧ್ಯಾತ್ಮ ದೀಕ್ಷೆ ನೀಡುವುದು, ಅವರಿಗೆ ಜಪ ತಪಗಳನ್ನು ಕಲಿಸುವುದು ಇತ್ಯಾದಿ ಧಾರ್ಮಿಕ ಚಟುವಟಿಕೆಗಳನ್ನು ನಡೆಸುತ್ತದೆ. ಈ ಸಂಘಟನೆಯು ಹಿಂದು ಧರ್ಮ ಹಾಗೂ ತೃತೀಯ ಲಿಂಗಿಗಳ ಹಕ್ಕುಗಳ ಪರವಾಗಿ ನಿಲ್ಲುತ್ತದೆ.

ಈಗ ಮಮತಾ ಕುಲಕರ್ಣಿಯವರನ್ನು ತಮ್ಮ ಪೀಠಾಧ್ಯಕ್ಷೆಯನ್ನಾಗಿಸುವ ಮೂಲಕ ದೇಶದ ಅನೇಕ ತೃತೀಯ ಲಿಂಗಿಗಳನ್ನು ಅಧ್ಯಾತ್ಮಿಕ ದಾರಿಯತ್ತ ಆಕರ್ಷಿಸಲು ಕಿನ್ನರ್ ಅಖಾಡಾ ಯೋಜಿಸಿದೆ. ಅಲ್ಲದೆ, ಮಮತಾ ಅವರನ್ನು ತಮ್ಮ ಪೀಠಾಧ್ಯಕ್ಷೆಯನ್ನಾಗಿಸಿದರೆ ತಮ್ಮ ಅಧ್ಯಾತ್ಮಿಕ ಯೋಜನೆಗಳು ಜನರಿಗೆ ತಲುಪಲು ಹೆಚ್ಚಿನ ವೇಗ ಸಿಗುತ್ತದೆ ಎಂಬುದು ಅವರ ಆಲೋಚನೆ.

Related Articles

Leave a Reply

Your email address will not be published. Required fields are marked *

Back to top button