ಜಿಲ್ಲಾ ವಕ್ಸ್ ಮಂಡಳಿ ಅಧಿಕಾರಿ ನಿರ್ಲಕ್ಷ ವಕ್ಫ ಆಸ್ತಿ ಮುತ್ತವಲ್ಲಿ ಗಳಿಂದ ಮಾರಾಟ

ರಾಯಚೂರು: ಜಿಲ್ಲೆ ಮಸ್ಕಿ ತಾಲೂಕಿನ ಬಳಗಾನೂರ ಗ್ರಾಮದ
ಸರ್ವೆ ನಂ.528 ಜಮೀನು ಮಾರಾಟ ಮಾಡಿ ಮತ್ತು ಮನೆಗಳನ್ನು ಕಟ್ಟಿಸುತ್ತಿದ್ದು ಕೂಡಲೇ ಮುತವಲ್ಲಿ ಎಸ್ ಶೇಷಾವಲಿ ಅವರಿಂದ ಆಸ್ತಿಯನ್ನು ಪಡೆದು ರಕ್ಷಿಸಬೇಕೆಂದು ಗ್ರಾಮಸ್ಥರ ಆಗ್ರಹವಾಗಿದೆ.

ಬಳಗನೂರು ಸೀಮಾಂತರದ ಸರ್ವೇ ನಂ.528// ವಿಸ್ತೀರ್ಣ 05 ಎಕರೆ 05 ಗುಂಟೆ ಜಮೀನು ವಕ್ಸ್ ಕಡೆಯಿಂದ ಎಸ್ ಶೇಕ್ಷಾವಲಿ ತಂದೆ ಅಬ್ದುಲ್ ಖಾದರಸಾಬ ಮುತ್ತವಲಿ ಇವರಿಗೆ ಕೃಷಿ ಮಾಡಿಕೊಂಡು ಜೀವನ ನಡೆಸಲು ನೀಡಿದ್ದು ಸದರಿ ಜಮೀನಿನಲ್ಲಿ ಈಗ ಎಸ್. ಶೇಕ್ಷಾವಲಿ ಮತ್ತು ಮಗ ಅಬ್ದುಲ್ ಖಾದರ್ ಭಾಷಾ ಮುತ್ತವಲಿ ಇವರು ಮನೆಗಳನ್ನು ಕಟ್ಟಿಸಿಕೊಳ್ಳಲು ಸದರಿ ಜಮೀನನ್ನು ಗುಂಟೆಯ ಲೆಕ್ಕದಲ್ಲಿ ಮಾರಾಟ ಮಾಡಿರುತ್ತಾರೆ ಹಾಗೂ ಸದರಿ ಜಮೀನಿನಲ್ಲಿ ಮನೆಗಳು ಸಹ ಕಟ್ಟಿಸಿರುತ್ತಾರೆ. ಇದರ ಬಗ್ಗೆ ಮುತ್ತವಲಿ ಬಳಿ ಹೋಗಿ ಕೇಳಿದರೆ ಈ ಜಮೀನು ನಮ್ಮದು ನಾನು ಏನಾದರೂ ಮಾಡಿಕೊಳ್ಳುತ್ತೇನೆಂದು ನಿರ್ಲಕ್ಷತನದಿಂದ ಮಾತನಾಡುತ್ತಿದ್ದಾರೆ. ಮತ್ತು ಇದರಲ್ಲಿ 04 ಗುಂಟೆ ಜಮೀನನ್ನು ನೀಲಮ್ಮ ಗಂಡ ಬಿ ನಾಗಲಿಂಗಪ್ಪ ಇವರಿಗೆ ಮಾರಾಟ ಮಾಡಿರುತ್ತಾರೆ ಸದರಿ ಜಮೀನು ವಕ್ಸ್ ಆಸ್ತಿಯಾಗಿದ್ದರಿಂದ ಯಾವುದೇ ಮನೆಗಳನ್ನು ನಿರ್ಮಿಸುವಂತಿಲ್ಲ ಹಾಗೂ ಜಮೀನನ್ನು ಮಾರಾಟ ಮಾಡುವಂತಿಲ್ಲ ಮುತ್ತವಲಿಗಳಾದ ಇವರು ಜಮೀನುಗಳನ್ನು ಮಾರಾಟ ಮಾಡಿ ಮನೆಗಳನ್ನು ಕಟ್ಟಿಸಿರುತ್ತಾರೆ.

ಕೂಡಲೇ ಜಿಲ್ಲಾ ವಕ್ಫ ಮಂಡಳಿ ಅಧಿಕಾರಿ ಜಮೀನನ್ನು ಪರಿಶೀಲಿಸಿ ಮುತ್ತವಲ್ಲಿ ಜಮೀನಿನಲ್ಲಿ ಕಟ್ಟಿರುವ ಮನೆಗಳನ್ನು ತೆರವುಗೊಳಿಸಿ ಜಮೀನನ್ನು ವಾಪಸ್ ಪಡೆಯಬೇಕು ಮತ್ತು ಇವರ ಕುಟುಂಬಕ್ಕೆ ನೀಡಿದ ಮುತ್ತವಲಿ ಜವಾಬ್ದಾರಿಯನ್ನು ವಜಾ ಮಾಡಬೇಕೆಂದು ಸಮುದಾಯ ಆಗ್ರಹಿಸಿದೆ.

ವರದಿ: ವಿಶ್ವನಾಥ್ ಸಾಹುಕಾರ್ tv8newskannada ರಾಯಚೂರು