Vijay Hazare Trophy: ಅತಿ ಹೆಚ್ಚು ವಿಜಯ್ ಹಜಾರೆ ಟ್ರೋಫಿ ಗೆದ್ದ ತಂಡ ಯಾವುದು? 22 ಆವೃತ್ತಿಗಳ ವಿಜೇತ ತಂಡಗಳು ಇವೇ ನೋಡಿ

ಹಜಾರೆ ಟ್ರೋಫಿ 2024-25 ರ ಫೈನಲ್ನಲ್ಲಿ ಶನಿವಾರ ಕರ್ನಾಟಕ ತಂಡ ವಿದರ್ಭ ತಂಡವನ್ನು36ರನ್ಗಳಿಂದ ಮಣಿಸುವ ಮೂಲಕ ದಾಖಲೆಯ 5ನೇ ಟ್ರೋಫಿಯನ್ನು ಎತ್ತಿ ಹಿಡಿದಿದೆ. ಇದೇ ಮೊದಲ ಬಾರಿಗೆ ಫೈನಲ್ ತಲುಪಿದ್ದ ವಿದರ್ಭ ತಂಡವೂ ರನ್ನರ್ ಅಪ್ಗೆ ತೃಪ್ಟಿಪಟ್ಟುಕೊಂಡಿದೆ.
ಕರ್ನಾಟಕ ತಂಡವನ್ನು ಮಯಾಂಕ್ ಅಗರ್ವಾಲ್ ಮುನ್ನಡೆಸಿದರೆ, ವಿದರ್ಭ ತಂಡವನ್ನು ಕನ್ನಡಿಗ ಕರುಣ್ ನಾಯರ್ ಮುನ್ನಡೆಸಿದ್ದರು. ಕರುಣ್ ನಾಯರ್ ಟೂರ್ನಿಯಲ್ಲಿ 779 ರನ್ಗಳಿಸಿ ಟೂರ್ನಿಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು.
ಮಯಾಂಕ್ ಅಗರವಾಲ್ ನೇತೃತ್ವದ ಕರ್ನಾಟಕವು ಸೆಮಿಫೈನಲ್ನಲ್ಲಿ ಹಾಲಿ ಚಾಂಪಿಯನ್ ಹರಿಯಾಣವನ್ನು ಐದು ವಿಕೆಟ್ಗಳಿಂದ ಸೋಲಿಸಿತು. ಇತ್ತ ವಿದರ್ಭ ಸೆಮಿಫೈನಲ್ ಹಂತದಲ್ಲಿ ಮಹಾರಾಷ್ಟ್ರ ವಿರುದ್ಧ 69 ರನ್ಗಳ ಗೆಲುವು ದಾಖಲಿಸಿ ಅಜೇಯವಾಗಿ ಫೈನಲ್ ಪ್ರವೇಶಿಸಿತ್ತು. ಆದರೆ ಪ್ರಶಸ್ತಿ ಸುತ್ತಿನಲ್ಲಿ ರೋಚಕ ಫೈಟ್ ನೀಡಿ ಕರ್ನಾಟಕ ವಿರುದ್ಧ ಸೋಲು ಕಂಡಿತು.
ಹೆಚ್ಚು ಬಾರಿ ಟ್ರೋಫಿ ಗೆದ್ದ ತಂಡಗಳು
ಕರ್ನಾಟಕ ತಂಡ ವಿಜಯ್ ಹಜಾರೆ ಟ್ರೋಫಿ ಇತಿಹಾಸದಲ್ಲಿ 5 ಟ್ರೋಫಿ ಗೆದ್ದ ಮೊದಲ ತಂಡವಾಗಿದೆ. ತಮಿಳುನಾಡು ಕೂಡ 5 ಬಾರಿ ಟ್ರೋಪಿ ಎತ್ತಿ ಹಿಡಿದಿದೆ. ಆದರೆ ಒಮ್ಮೆ ಉತ್ತರ ಪ್ರದೇಶದೊಂದಿಗೆ ಟ್ರೋಫಿಯನ್ನ ಹಂಚಿಕೊಂಡಿದೆ. ಏಕಾಂಗಿಯಾಗಿ 5 ಬಾರಿ ಚಾಂಪಿಯನ್ ಆದ ತಂಡ ಎಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಿದೆ.
ಕರ್ನಾಟಕ ತಂಡ
2013-14ರ ಋತುವಿನಲ್ಲಿ ಕರ್ನಾಟಕ ತಂಡ ತನ್ನ ಮೊದಲ ಪ್ರಶಸ್ತಿಯನ್ನು ಗೆದ್ದಿತ್ತು. ನಂತರದ ಋತುವಿನಲ್ಲಿ ಚಾಂಪಿಯನ್ ಆಗುವ ಮೂಲಕ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. 2017-18ರ ಋತುವಿನಲ್ಲಿ ಕರ್ನಾಟಕ ತಂಡ ಮೂರನೇ ಪ್ರಶಸ್ತಿ ಮುಡಿಗೇರಿಸಿಕೊಂಡಿತ್ತು. ಅಗರವಾಲ್ ಗರಿಷ್ಠ ರನ್ ಸಿಡಿಸಿದವರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರು. 2019-20ರ ಋತುವಿನಲ್ಲಿ ಕರ್ನಾಟಕ ತಂಡವು ತಮಿಳುನಾಡನ್ನು ಸೋಲಿಸಿ ನಾಲ್ಕನೇ ಸ್ಥಾನ ಪಡೆದಿತ್ತು. ಪಡಿಕ್ಕಲ್ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿ ಹೊರಹೊಮ್ಮಿದ್ದರು. ಇದೀಗ 5ನೇ ಬಾರಿ ಚಾಂಪಿಯನ್ ಆಗಿದೆ.
ತಮಿಳುನಾಡು 2002, 2004 (ಜಂಟಿ ವಿಜೇತ), 2008, 2009, 2016ರಲ್ಲಿ ಚಾಂಪಿಯನ್ ಆಗಿತ್ತು. 3ನೇ ಸ್ಥಾನದಲ್ಲಿರುವ ಮುಂಬೈ 4 ಬಾರಿ, ಸೌರಾಷ್ಟ್ರ 2 ಬಾರಿ, ರೈಲ್ವೇಸ್, ಜಾರ್ಖಂಡ್, ದೆಹಲಿ, ಗುಜರಾತ್, ಹರಿಯಾಣ ತಂಡಗಳು ತಲಾ ಒಂದು ಬಾರಿ ವಿಜಯ್ ಹಜಾರೆ ಟ್ರೋಫಿ ಗೆದ್ದಿವೆ
ವಿಜಯ್ ಹಜಾರೆ ಟ್ರೋಫಿ ಗೆದ್ದ ತಂಡಗಳ ವಿವರ
2002-03 – ತಮಿಳುನಾಡು
2003-04 – ಮುಂಬೈ
2004-05 – ತಮಿಳುನಾಡು ಮತ್ತು ಉತ್ತರ ಪ್ರದೇಶ ಹಂಚಿಕೊಂಡಿದ್ದು
2005-06 – ರೈಲ್ವೇಸ್
2006-07 – ಮುಂಬೈ
2007-08 – ಸೌರಾಷ್ಟ್ರ
2008-09 – ತಮಿಳುನಾಡು
2009-10 – ತಮಿಳುನಾಡು
2010-11 – ಜಾರ್ಖಂಡ್
2011-12 – ಬೆಂಗಾಲ್ಸ್
2012-13 – ದೆಹಲಿ
2013-14 – ಕರ್ನಾಟಕ
2014-15 – ಕರ್ನಾಟಕ
2015-16 – ಗುಜರಾತ್
2016-17 – ತಮಿಳುನಾಡು
2017-18 – ಕರ್ನಾಟಕ
2018-19 – ಮುಂಬೈ
2019-20 -ಕರ್ನಾಟಕ
2020-21 – ಮುಂಬೈ
2021-22 – ಹಿಮಾಚಲ ಪ್ರದೇಶ
2022-23 – ಸೌರಾಷ್ಟ್ರ
2023-24 – ಹರಿಯಾಣ2
024-25-ಕರ್ನಾಟಕ
ವರದಿ ಹಾಗೂ ಮಾಹಿತಿ : ಮೊಹಮ್ಮದ್ ಶಫಿ ಸ್ಪೋರ್ಟ್ಸ್ tv8kannada ಬ್ಯೂರೋ ಬೆಂಗಳೂರು