ಇತ್ತೀಚಿನ ಸುದ್ದಿ
ರಾಯಚೂರು: ಕಲ್ಯಾಣ್ ಜ್ಯುವೆಲರ್ಸ್ ನ ನೂತನ ಮಳಿಗೆ ಉದ್ಘಾಟಿಸಿದ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ

ರಾಯಚೂರು: ನಗರದ ರೈಲ್ವೆ ನಿಲ್ದಾಣ ರಸ್ತೆಯ ರಾಮ ಮಂದಿರ ಸಮೀಪ ಆರಂಭಿಸಲಾದ ಕಲ್ಯಾಣ ಜ್ಯುವೆಲರ್ಸ್ 20ನೇ ಚಿನ್ನಾಭರಣ ಮಳಿಗೆಯನ್ನು ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಕುಂದ್ರಾ ಅವರು ಉದ್ಘಾಟಿಸಿದರು.
ಮುಂಬೈನಿಂದ ಹೈದರಾಬಾದ್ ಗೆ ವಿಮಾನದಲ್ಲಿ ಆಗಮಿಸಿ ರಸ್ತೆ ಮಾರ್ಗವಾಗಿ ರಾಯಚೂರಿಗೆ ಬಂದ ಕಾರಣ ಸಂಜೆ 6 ಗಂಟೆಗೆ ಆಯೋಜಿಸಲಾಗಿದ್ದ ಕಾರ್ಯಕ್ರಮ 7.30ಕ್ಕೆ ಆರಂಭವಾಯಿತು.
ಶಿಲ್ಪಾ ಶೆಟ್ಟಿ ಅವರನ್ನು ವೀಕ್ಷಿಸಲು ಭಾರೀ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದರು. ಹೀಗಾಗಿ ನಗರದಲ್ಲಿ ಸಂಚಾರ ಒತ್ತಡ ನಿಯಂತ್ರಿಸಲು ಭಾರಿ ಸಂಖ್ಯೆಯಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ವರದಿ : ವಿಶ್ವನಾಥ್ ಸಾಹುಕಾರ್ tv8kannada ರಾಯಚೂರು