Saif Ali Khan Attacker Arrested: ಸೈಫ್ ಅಲಿ ಖಾನ್ ಮೇಲೆ ಹಲ್ಲೆ ನಡೆಸಿದ ವ್ಯಕ್ತಿ ಬಂಧನ, ಕೇಸ್‌ಗೆ ಬಿಗ್ ಟ್ವಿಸ್ಟ್

ನಟ ಸೈಫ್ ಅಲಿ ಖಾನ್ ಮೇಲೆ ಹಲ್ಲೆ ನಡೆಸಿದ ವ್ಯಕ್ತಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಬಂಧನದ ನಂತರ ಅವರನ್ನು ಬಾಂದ್ರಾ ಪೊಲೀಸ್ ಠಾಣೆಗೆ ಕರೆತರಲಾಗಿದೆ. ಆರೋಪಿಗಾಗಿ ಪೊಲೀಸರು ಕಳೆದು 30 ಗಂಟೆಯಿಂದ ತೀವ್ರ ಶೋಧ ನಡೆಸಿದ್ದರು. ಆರೋಪಿ ಬಂಧನ ಇದೀಗ ಕೇಸ್‌ಗೆ ಹೊಸ ಟ್ವಿಸ್ಟ್ ಸಿಕ್ಕಂತಾಗಿದೆ.
ಆರೋಪಿಗಳ ವಿಚಾರಣೆ ಬಳಿಕ ಎಲ್ಲ ಪ್ರಶ್ನೆಗಳಿಗೂ ಉತ್ತರ ಸಿಗಲಿದೆ. ಆರೋಪಿಗಳ ದಾಳಿಯಲ್ಲಿ ಗಾಯಗೊಂಡ ನಟ ಸೈಫ್ ಚಿಕಿತ್ಸೆಗಾಗಿ ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈಗಾಗಲೇ ನಟನಿಗೆ ಶಸ್ತ್ರಚಿಕಿತ್ಸೆ ನಡೆದಿದೆ. ಅಲ್ಲದೇ ಸೈಫ್ ಸಹ ಆರೋಗ್ಯದಲ್ಲಿ ಸ್ಥಿರವಾಗಿದ್ದಾರೆ ಎಂದು ಹೇಳಲಾಗುತ್ತಿದೆ. ವಿಶೇಷವೆಂದರೆ ಬಾಂದ್ರಾ ವೆಸ್ಟ್‌ನಲ್ಲಿರುವ ಸೈಫ್ ಅಲಿ ಖಾನ್ ಅವರ ಅಪಾರ್ಟ್‌ಮೆಂಟ್ ಸಂಕೀರ್ಣದಲ್ಲಿ ಮುಂಬೈ ಪೊಲೀಸ್ ಅಧಿಕಾರಿಗಳು ಕಳೆದೊಂದು ದಿನದಿಂದ ತನಿಖೆ ನಡೆಸುತ್ತಿದ್ದು, ಸದ್ಗುರು ಶರಣ್ ಅಪಾರ್ಟ್‌ಮೆಂಟ್‌ಗೆ ಭೇಟಿ ನೀಡಿದ ಅಧಿಕಾರಿಗಳಲ್ಲಿ ಖ್ಯಾತ ಎನ್‌ಕೌಂಟರ್ ಸ್ಪೆಷಲಿಸ್ಟ್ ದಯಾ ನಾಯಕ್ ಕೂಡ ಇದ್ದರು. ಅವರೂ ಸಹ ಈ ಕೇಸ್‌ನಲ್ಲಿ ತೊಡಗಿದ್ದಾರೆ ಎನ್ನಲಾಗುತ್ತಿದ್ದು, ಇದೀಗ ಮೊದಲ ಆರೋಪಿ ಸಹ ಸಿಕ್ಕಿಬಿದ್ದಿದ್ದಾನೆ.
ಇಂದೇ ನ್ಯಾಯಾಲಯಕ್ಕೆ ಆರೋಪಿ ಹಾಜರು:
ಹದು, ಮೂಲಗಳ ಪ್ರಕಾರ ಪೊಲೀಸರು ಆರೋಪಿಯನ್ನು ಅಜ್ಞಾತ ಸ್ಥಳದಿಂದ ಬಂಧಿಸಿದ್ದಾರೆ. ಆರೋಪಿಯನ್ನು ಬಾಂದ್ರಾ ಪೊಲೀಸ್ ಠಾಣೆಯ ಮೊದಲ ಮಹಡಿಯಲ್ಲಿ ಇರಿಸಲಾಗಿದೆ. ಇಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಅವರನ್ನು ವಿಚಾರಣೆ ನಡೆಸುತ್ತಿದ್ದಾರೆ ಎಂದು ಟೈಮ್ಸ್ ನೌ ವರದಿ ಮಾಡಿದೆ. ಇದೀಗ ವಿಚಾರಣೆ ಬಳಿಕ ಇಂದು ಮಧ್ಯಾಹ್ನ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಅಲ್ಲದೇ ಈ ವೇಳೆ ನ್ಯಾಯಾದೀಶರ ಬಳಿ ಪೊಲೀಸರು ಆರೋಪಿಯನ್ನು ವಶಕ್ಕೆ ಕೇಳಲಿದ್ದಾರೆ ಎಂದು ಮೂಲಗಳು ತಿಳಿಸಿದೆ.ಈ ವಿಚಾರಣೆಯಲ್ಲಿ ಪೊಲೀಸರು ದಾಳಿಯ ಬಗ್ಗೆ ಸಂಪೂರ್ಣ ವಿವರ ಕಲೆಹಾಕಬೇಕಿದೆ. ಈ ದಾಳಿಯಲ್ಲಿ ಆತನೊಬ್ಬನೇ ಭಾಗಿಯಾಗಿದ್ದಾನೋ ಅಥವಾ ಈ ಸಂಚಿನಲ್ಲಿ ಬೇರೆ ಯಾರೋ ಇದ್ದಾರೆಯೇ ಎಂಬುದು ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಅಪಾರ್ಟ್‌ಮೆಂಟ್‌ಗೆ ಹೇಗೆ ಪ್ರವೇಶಿಸಿದನು, ಇತರ ಬಾಲಿವುಡ್ ಸೆಲೆಬ್ರಿಟಿಗಳು ಇವರ ಗುರಿಯಾಗಿದ್ದಾರೆಯೇ ಎಂಬುದನ್ನು ಸಹ ಪೊಲೀಸರು ಪತ್ತೆ ಮಾಡಲಿದ್ದಾರೆ ಎಂದು ವರದಿಯಾಗಿದೆ.ಯಾಕೆ ಈ ಕೃತ್ಯ ಎಸಗಿದನು ಎಂಬ ಬಗ್ಗೆ ತನಿಖೆ:ಸದ್ಯ ಸೈಫ್ ಮೇಲೆ ಹಲ್ಲೆ ಮಾಡಿದ ವ್ಯಕ್ತಿಯನ್ನು ಬಂಧಿಸಲಾಗಿದ್ದರೂ ಸಹ ಈ ವ್ಯಕ್ತಿ ಯಾರು ಎಂಬುದು ಇನ್ನೂ ತಿಳಿದುಬಂದಿಲ್ಲ. ಆದರೆ ಈಗ ಅವರ ಗುರುತು ಬಹಿರಂಗವಾಗಿದೆ ಹೊರತು ಹೆಸರು ತಿಳಿದುಬಂದಿಲ್ಲ. ದಾಳಿಕೋರ ಸೈಫ್ ಮನೆಯಿಂದ ಪರಾರಿಯಾಗಿ ನೇರವಾಗಿ ಬಾಂದ್ರಾ ಸ್ಟೇಷನ್ ಕಡೆಗೆ ಹೋಗಿದ್ದಾನೆ ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ. ಮುಂಬೈ ಪೊಲೀಸರು ಬಾಂದ್ರಾ ನಿಲ್ದಾಣದ ಸಿಸಿಟಿವಿ ದೃಶ್ಯಗಳಲ್ಲಿ ದಾಳಿಕೋರನನ್ನು ನೋಡಿದ್ದಾರೆ.ಆರೋಪಿಗಳ ಬಂಧನದ ನಂತರ ಈಗ ಅನೇಕ ಪ್ರಶ್ನೆಗಳಿಗೆ ಉತ್ತರ ಲಭ್ಯವಾಗಲಿದೆ. ಇನ್ನು, ದಾಳಿಕೋರನು ಬಲವಂತವಾಗಿ ಪ್ರವೇಶಿಸಲು ಅಥವಾ ನಟನ ಫ್ಲ್ಯಾಟ್‌ಗೆ ನುಗ್ಗಲು ಪ್ರಯತ್ನಿಸಲಿಲ್ಲ, ಆದರೆ ಬಹುಶಃ ರಾತ್ರಿಯಲ್ಲಿ ಕಳ್ಳತನ ಮಾಡುವ ಉದ್ದೇಶದಿಂದ ಪ್ರವೇಶಿಸಿರಬಹುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ದಾಳಿಕೋರನು ಮೆಟ್ಟಿಲುಗಳ ಮೂಲಕ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ.