Breaking News: ಬಾಲಿವುಡ್ ಖ್ಯಾತ ನಟ ಸೈಫ್ ಅಲಿ ಖಾನ್‌ಗೆ ಮನೆಯಲ್ಲೇ ಚಾಕು ಇರಿತ

ಮುಂಬೈ : ಬಾಲಿವುಡ್‌ನ ಖ್ಯಾತ ನಟ ಸೈಫ್ ಅಲಿ ಖಾನ್ ಮೇಲೆ ಮನೆಯಲ್ಲೇ ಚಾಕು ಇರಿತ ನಡೆದಿದೆ. ನಗರದ ಭಾಂದ್ರಾದಲ್ಲಿನ ತಮ್ಮ ನಿವಾಸದಲ್ಲಿ ಕುಟುಂಬದದೊಂದಿಗೆ ಮಗಲಿದ್ದಾಗ ಸೈಫ್ ಅಲಿ ಖಾನ್ ಮನೆಗೆ ಮಧ್ಯರಾತ್ರಿ 2.30ರ ಸಮಯಕ್ಕೆ ಅಪರಿಚತರು ನುಗ್ಗಿದ್ದರು.
ಈ ಸಮಯದಲ್ಲಿ ಮನೆಯಲ್ಲಿದ್ದ ಎಲ್ಲರಿಗೂ ಎಚ್ಚರವಾಯಿತು.
ಮನೆಗೆ ನುಗ್ಗಿದವರನ್ನು ತಡೆಯಲು ಯತ್ನಿಸಿದ ಕಾರಣ ಸೈಫ್ ಅಲಿ ಖಾನ್‌ಗೆ ದರೋಡೆಕೋರರು ಚಾಕು ಇರಿದಿದ್ದಾರೆ. ಗಾಯಕ್ಕೊಳಗಾದ ಸೈಫ್ ಅಲಿ ಖಾನ್ ಅವರನ್ನು ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ಸೈಫ್ ಅಲಿ ಖಾನ್ ಅವರು ಶ್ರೀಮಂತ ಎಂಬ ಕಾರಣಕ್ಕೆ ದರೋಡೆಕೋರರು ಕಳ್ಳತನಕ್ಕೆಂದು ಮನೆಗೆ ನುಗ್ಗಿರಬಹುದು ಎನ್ನಲಾಗುತ್ತಿದ್ದು, ಪೊಲೀಸ್ ತನಿಖೆಯಲ್ಲಿ ಸತ್ಯಾಂಶ ಹೊರಬರಬೇಕಿದೆ.
ನಟ ಸೈಫ್ ಅಲಿ ಖಾನ್‌ಗೆ ಚೂರಿ ಇರಿತ; ಪೊಲೀಸ್ ಅಧಿಕಾರಿ ಹೇಳಿದ್ದಿಷ್ಟು
ಹಿರಿಯ ಐಪಿಎಸ್ ಅಧಿಕಾರಿಯೊಬ್ಬರು ಈ ಘಟನೆಯನ್ನು ದೃಢಪಡಿಸಿದ್ದು, ಸೈಫ್ ಅಲಿಖಾನ್ ಅವರನ್ನು ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಿದ್ದಾರೆ. ದರೋಡೆಕೋರನೊಂದಿಗಿನ ಸಂಘರ್ಷದಲ್ಲಿ ಅವರು ಇರಿದಿದ್ದಾರೆಯೇ ಅಥವಾ ಗಾಯಗೊಂಡಿದ್ದಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈ ಬಗ್ಗೆ ತನಿಖೆ ನಡೆಸಿದ್ದೇವೆ. ಮುಂಬೈ ಕ್ರೈಂ ಬ್ರಾಂಚ್ ಕೂಡ ಘಟನೆಯ ಬಗ್ಗೆ ಸಮಾನಾಂತರ ತನಿಖೆ ನಡೆಸುತ್ತಿದೆ ಎಂದು ಅವರು ವಿವರಿಸಿದರು. ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ತಂಡಗಳನ್ನು ರಚಿಸಿ ತನಿಖೆ ನಡೆಸುತ್ತಿದ್ದು ಆರೋಪಿ ಪತ್ತೆಗಾಗಿ ಶೋಧ ನಡೆಸಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ಪ್ರಾಥಮಿಕ ಮಾಹಿತಿ ಪ್ರಕಾರ, ಕಳ್ಳನೊಬ್ಬ ತಡ ರಾತ್ರಿ – ನಸುಕಿನ ವೇಳೆ ಬಾಂದ್ರಾದಲ್ಲಿರುವ ಕರೀನಾ ಕಪೂರ್ ಅವರ ಐಷಾರಾಮಿ ಮನೆಗೆ ನುಗ್ಗಿದ್ದಾನೆ. ಇದೇ ವೇಳೆ ಮನೆಯ ಕಾವಲು ಸಿಬ್ಬಂದಿ ಕಳ್ಳ, ಕಳ್ಳ ಎಂದು ಕೂಗಿಕೊಂಡ ಕಾರಣ ಸೈಫ್ ಅಲಿ ಖಾನ್ ಎಚ್ಚರಗೊಂಡಿದ್ದರು. ಕಳ್ಳ ಸಿಕ್ಕಿ ಬೀಳುವ ಭಯದಲ್ಲಿದ್ದಾಗ ಸಂಘರ್ಷ ಸಂಭವಿಸಿದ್ದು, ಚೂರಿ ಇರಿತಕ್ಕೆ ಒಳಗಾಗಿ ಗಾಯಗೊಂಡರು. ಕೂಡಲೇ ಅವರನ್ನು ಲೀಲಾವತಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಮನೆ ಕೆಲಸದವರು ಹೇಳಿದ್ದಾಗಿ ವರದಿಯಾಗಿದೆ.