ಇಂದು ರವಿಂದ್ರ ಕಲಾ ಕ್ಷೇತ್ರದಲ್ಲಿ “ಶಿರಡಿಗೆ ಹೋಗೋಣ ಸಾಯಿ ದರ್ಶನ ಮಾಡೋಣ” ನಾಟಕ ಪ್ರದರ್ಶನ,

ಬೆಂಗಳೂರು: ಎಂ.ಎಸ್.ಮಿತ್ರಕೋಟ ಬೆಂಗಳೂರು ಇವರಿಂದ ಖ್ಯಾತ ಸಾಹಿತಿ ಎಂ.ಎಸ್.ರಮೇಶ್ ‘ಶಿರಡಿಗೆ ಹೋಗೋಣ ಸಾಯಿಯ ದರ್ಶನ’ ಎಂಬ ಪೌರಾಣಿಕ ನಾಟಕ ರಚನೆ ಮತ್ತು ಸಾಯಿಬಾಬಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪೂರ್ಣಿಮಾ ಪವಾರ್ ಅವರು ನಿರ್ದೇಶಿಸಿ ನಟಿಸುತ್ತಿರುವ ನಾಟಕ ಪ್ರದರ್ಶನ ಗುರುವಾರ(ಜನವರಿ 16) ಸಂಜೆ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರಪ್ರಥಮ ಬಾರಿಗೆ ಪ್ರದರ್ಶನವಾಗಲಿದೆ.
ಕಾರ್ಯಕ್ರಮವನ್ನು ಚಲನಚಿತ್ರ ನಿರ್ದೇಶಕ ಬಿ.ರಾಮಮೂರ್ತಿ ಉದ್ಘಾಟಿಸುವರು. ಆರ್.ಅಶೋಕ್ ವಿರೋಧ ಪಕ್ಷದ ನಾಯಕ, ಪದ್ಮನಾಭನಗರ ವಿಧಾನಸಭಾ ಕ್ಷೇತ್ರ ಶಾಸಕರು ಅಧ್ಯಕ್ಷತೆ ವಹಿಸಿಲಿದ್ದಾರೆ.
ವಿಶೇಷ ಆಹ್ವಾನಿತರಾಗಿ ಎ.ಹೆಚ್.ಬಸವರಾಜ್-ಮಾಜಿ ವಿರೋಧ ಪಕ್ಷದ ನಾಯಕ, ಬೃ.ಬೆಂ.ಮ. ಪಾಲಿಕೆ, ನಟರಾಜ್.ಎಸ್.ಕೆ-ಮಾಜಿ ಮೇಯರ್, ಬೃ.ಬೆಂ. ಮ. ಪಾಲಿಕೆ, ಬಿಜೆಪಿ ಮುಖಂಡರಾದ ಆಂಜಿನಪ್ಪ, ಲಕ್ಷ್ಮೀಕಾಂತ್, ವೆಂಕಟೇಶ್ ಹಾಗೂ ಪದ್ಮನಾಭನಗರ ಮಂಡಲ ಬಿಜೆಪಿ ಅಧ್ಯಕ್ಷ ಸಿ.ರವಿ, ಬಿಜೆಪಿ ಅಧ್ಯಕ್ಷ ಮೋಹನ್ ಕುಮಾರ್ ಹಾಗೂ ಸಮಾಜ ಸೇವಕ ಡಾ|ವಿಜಯ್ ಕುಮಾರ್ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ.
