ಇತ್ತೀಚಿನ ಸುದ್ದಿ

ಸಂಭ್ರಮದಿಂದ ಜರುಗಿದ ಕನ್ನಡ ಸಾಹಿತ್ಯ ಪರಿಷತ್ತಿನ 111ಸಂಸ್ಥಾನ ದಿನಾಚರಣೆ.

ಹೊಸಪೇಟೆ (ವಿಜಯನಗರ) :
ನಮ್ಮ , ನಾಡು, ನುಡಿ, ಸಂಗೀತ, ಸಾಹಿತ್ಯ ಸಂಸ್ಕೃತಿ ,ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಎಲ್ಲಾರು ಪ್ರೋತ್ಸಾಹಿಸುವ ನಿಟ್ಟಿನಲ್ಲಿ
ಮುಂದಾಗಬೇಕು ಎಂದು ಹಂಪಿ ವಿಶ್ವವಿದ್ಯಾಲಯದ
ಡಾ. ಅಮರೇಶ ಯತಗಲ್, ಪ್ರಾಧ್ಯಾಪಕರು ಹೇಳಿದರು
ಕನ್ನಡ ಸಾಹಿತ್ಯ ಪರಿಷತ್ತು, ಬಳ್ಳಾರಿ-ವಿಜಯನಗರ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ ಹಾಗೂ ತಾಲ್ಲೂಕು ಘಟಕ ಹೊಸಪೇಟೆ ಇವರ ಸಹಯೋಗದಲ್ಲಿ
ಕನ್ನಡ ಸಾಹಿತ್ಯ ಪರಿಷತ್ತಿನ ೧೧೧ ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಸೋಮವಾರ ಕಾರ್ಯಕ್ರಮ
ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಕಳೆದ ಇಪ್ಪತ್ತೈದು ವರ್ಷಗಳಿಂದ ಶ್ರೀಮತಿ ಎಸ್ ಅಂಜು ಭರತನಾಟ್ಯ ಗುರುಗಳಾಗಿ ಶ್ರೀ ಅಂಜಲಿ ಭರತನಾಟ್ಯ ಕಲಾ ಕೇಂದ್ರ ಹೊಸಪೇಟೆ ಅಧ್ಯಕ್ಷರಾಗಿ ನಿರಂತರವಾಗಿ ಸೇವಿಸುತ್ತಿರುವುದು ಶ್ಲಾಘನೀಯವಾಗಿದೆ .ತವು ಬೆಳೆದು ತಮ್ಮಂತೆ ಇತರೆ ಕಲಾವಿದರನ್ನು ಪೋತ್ಸಾಹಿಸುತ್ತಿರುವುದು.


ಇತರರಿಗೆ ಮಾರ್ಗದಶನವಾಗಿದ್ದಾರೆ ಎಂದರು.
ಜನಸಾಮಾನ್ಯರತ್ತ ಕನ್ನಡ ಸಾಹಿತ್ಯ ಪರಿಷತ್ತು ಕುರಿತು
ಡಾ. ಗಾದೆಪ್ಪ, ಸಹಾಯಕ ಪ್ರಾಧ್ಯಾಪಕರು ಉಪನ್ಯಾಸ ನೀಡಿದರು.ಕಲ್ಲುಡಿ ಮಂಜುನಾಥ, ಆಡಳಿತ ಮಂಡಳಿ ಅಧ್ಯಕ್ಷರು, ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯ ಇವರು ಕಾರ್ಯಕ್ರಮದ ಅದ್ಯಕ್ಷತೆ ವಹಿಸಿದರು.


ಡಾ. ರೋಹಿತ್ ಯು. ಎಂ. ಪ್ರಾಂಶುಪಾಲರು, ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯ, ಮಲ್ಲಿಕಾರ್ಜುನಗೌಡ ಜಿಲ್ಲಾ ಅಧ್ಯಕ್ಷರು ಸರ್ಕಾರಿ ನೌಕರರ ಸಂಘ,ಡಾ. ಶಿವನಗೌಡ ಎಸ್‌.ಸಾತ್ಕ‌ರ್, ಪ್ರಾಂಶುಪಾಲರು, ಎಸ್. ಬಿ. ಬಿ. ಎನ್ ಬಿ.ಎಡ್ ಕಾಲೇಜ್ , ಬಸವರಾಜ್‌ ಆರ್. ಎನ್.ಎಸ್.ಎಸ್.ಸಂಚಾಲಕರು, ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯ ಹೊಸಪೇಟೆ ವೇದಿಕೆಯಲ್ಲಿದ್ದರು.


ಈ ವೇಳೆ ವಿವಿಧ ರಂಗದಲ್ಲಿ ಸಾಧನೆ ಗೈದ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಎಸ್ ಅಂಜು . ಅದ್ಯಕ್ಷರು ಶ್ರೀ ಅಂಜಲಿ ಭರತನಾಟ್ಯ ಕಲಾ ಕೇಂದ್ರ ಹೊಸಪೇಟೆ ,ಸೇರಿದಂತೆ ಯಲ್ಲಪ್ಪ ಭಂಡಾರದಾರ್ ಜನಪದ ಗಾಯಕರು, ಕುಮಾರ್ ಪಾಲ್‌ರೆಚ್, ಮೆಂಬರ್ ಆಫ್ ಬಿ.ಚೇಂಜ್, ಎಂ. ಸುರೇಶ ಕುಮಾರ್ ವಕೀಲರು, ಬಂಡೆ ರಂಗಪ್ಪ, ಕೆ.ಬಿ.ಹೆಚ್. ಶಿವಶಂಕರ, ನಿವೃತ್ತ ಅಭಿಯಂತರರಿಗೆ ಶಾಲುವದಿಸಿ ಸನ್ಮಾನಿಸಲಾಯಿತು.

ವರದಿ : C ಕೊಟ್ರೇಶ್ tv8kannada ವಿಜಯನಗರ ಜಿಲ್ಲೆ

Related Articles

Leave a Reply

Your email address will not be published. Required fields are marked *

Back to top button