ಇತ್ತೀಚಿನ ಸುದ್ದಿ
ಮೈಸೂರು ಪಟ್ಟಣದಲ್ಲಿ ಗೋ ಸದನ್ ಉದ್ಘಾಟನೆ

ಮೈಸೂರು: ಸಮಾಜ ಸೇವಕ ಹಾಗೂ ಪರಿಸರ ಜಾಗೃತಿ ವೇದಿಕೆ ಅಧ್ಯಕ್ಷ ಡಾ.ಮಹೇಂದ್ರ ಸಿಂಗ್ ಕಾಳಪ್ಪರವರ ಜನ್ನಮದಿನವನ್ನು ಮೈಸೂರು ನಗರದ ಪಿಂಜರೋಪೋಲ್ ನಲ್ಲಿ ಗೋಪಾಲಕರಿಗೆ ನಿರ್ಮಿಸಿದ್ದ ನೂತನ ಮನೆವ ಗೋ ಸದನ್ ಉದ್ಘಾಟಿಸುವ ಆಚರಿಸಲಾಯಿತು.

ಪಿಂಜರಾಪೋಲ್ ನಲ್ಲಿ ಸಮುರು ನಾಲ್ಕುಸಾಚಿರದ ಎಂಟು ನೂರು ಗೋವುಗಳನ್ನು ಸಂರಕ್ಷಣೆ ಮಾಡಲಾಗುತ್ತಿದ್ದು ಅವುಗಳ ಪಾಲನೆಗೆ ಸುಮಾರು 22 ಮನೆಗಳನ್ನು ದಾನಿಗಳಿಂದ ನೆರವು ಪಡೆದು ನಿರ್ಮಿಸಲಾಗಿದೆ ಇದರಲ್ಲಿ ಸದಾ ಜನಪರ ಕಾಳಜಿಯುಳ್ಳ ಸಮಾಜ ಸೇವಕ ಮಹೇದ್ರ ಸಿಂಗ್ ಕಾಳಪ್ಪ ಮೊದಲಿಗರಾಗಿದ್ದು ಇಂದು ಅವರ ಹಣದಿಂದ ನಿರ್ಮಿಸಿದ್ದ ಗೊಪಾಲಕರ ಮನೆಯನ್ನು ಉದ್ಘಾಟಿಸಿದರು..ಬಳಿಕ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಧನ ಸಹಾಯ ಮಾಡಿದರು.ಈ ವೇಳೆ ಡಾ.ಮಹೇಂದ್ರ ಸಿಂಗ್ ಕಾಳಪ್ಪರವರ ತಾಯಿ ಗೌರಿದೇವಿ ಹಾಗೂ ಪತ್ನಿ ಸಂತೋಷ್ ಕುಮಾರಿ ಸಹೋದರ ರಾಜೇಶ್ ಕುಮಾರ್ ,ಮುಖಂಡರುಗಳಾದ ಬನ್ನಿಮಂಟಪ ರಾಜಣ್ಣ,ಸಂತೋಷ್ ತುಮಕೂರು ಹಾಗೂ ಅವರ ಹಿತಹಿಶಿಗಳು ಉಪಸ್ಥಿತರಿದ್ದರು.