ಇತ್ತೀಚಿನ ಸುದ್ದಿ

ಕನ್ನಡ ಚಿತ್ರರಂಗದ ಹಿರಿಯ ಹಾಸ್ಯನಟ ಸರಿಗಮ ವಿಜಿ ಇನ್ನಿಲ್ಲ

ಕನ್ನಡ ಚಲನಚಿತ್ರ ನಟರಾದ ಹಿರಿಯ ಹಾಸ್ಯನಟ ಸರಿಗಮ ವಿಜಿ ಅವರು ಅನಾರೋಗ್ಯದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಕನ್ನಡದ ಹಲವು ಚಿತ್ರಗಳಲ್ಲಿ ಹಾಸ್ಯನಟರಾಗಿ ಅಭಿನಯಿಸಿ, ನೋಡುಗರನ್ನು ರಂಚಿಸುವ ಮೂಲಕ ಹಾಸ್ಯ ಚಕ್ರವರ್ತಿ ಎಂಬುದಾಗಿಯೂ ಕರೆಸಿಕೊಂಡಿದ್ದವರು ಸರಿಗಮ ವಿಜಿ ಅವರನ್ನು ಅನಾರೋಗ್ಯದ ಹಿನ್ನೆಲೆಯಲ್ಲಿ ಬೆಂಗಳೂರಿನ ಮಣಿಪಾಲ್ ಹಾಸ್ಪಿಟಲ್‌ಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.

ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಿಗ್ಗೆ 9:45ರ ಸುಮಾರಿಗೆ ಅವರು ನಿಧನ ಹೊಂದಿದ್ದಾರೆ.

ಸರಿಗಮ ವಿಜಿ ಅವರು 250ಕ್ಕೂ ಹೆಚ್ಚು ಸಿನಿಮಾಗಳು, ಹಲವಾರು ಧಾರಾವಾಹಿ ಹಾಗೂ ನಾಟಕಗಳಲ್ಲಿ ನಟಿಸಿದ್ದರು.ಸರಿಗಮ ವಿಜಿ ಎಂಬ ತಮ್ಮ ರಂಗನಾಮದಿಂದ ಕರೆಯಲ್ಪಡುವ ಆರ್ ವಿಜಯ್ ಕುಮಾರ್. ಕನ್ನಡದ ಜನಪ್ರಿಯ ಹಾಸ್ಯ ನಟ, ಬರಹಗಾರರಾಗಿದ್ದಾರೆ. ಸುಮಾರು 1390 ಪ್ರದರ್ಶನಗಳಲ್ಲಿ ‘ಸಂಸಾರದಲ್ಲಿ ಸರಿಗಮ’ ನಾಟಕ ಕಂಡಿತ್ತು. ಇದೇ ಕಾರಣಕ್ಕೆ ವಿಜಿ ಅವರ ಹೆಸರಿನ ಮುಂದೆ ‘ಸರಿಗಮ’ ಸೇರಿಕೊಂಡು ಸರಿಗಮ ವಿಜಿ ಎಂದೇ ಜನಪ್ರಿಯರಾದರು.ವಿಜಿ ನಟನಾಗಿ ಚೊಚ್ಚಲ ಕನ್ನಡ ಚಲನಚಿತ್ರ ಬೆಳುವಲದ ಮಡಿಲಲ್ಲಿ (1975) ಬಂದಿತು. 2018 ರ ಹೊತ್ತಿಗೆ ಅವರು ಕನ್ನಡದಲ್ಲಿ ಸುಮಾರು 269 ಚಿತ್ರಗಳಲ್ಲಿ ನಟಿಸಿದ್ದಾರೆ. 80 ಚಿತ್ರಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಸಂಸಾರದಲ್ಲಿ ಸರಿಗಮ , ಅವರು ನಿರ್ದೇಶಿಸಿದ ಮತ್ತು ನಟಿಸಿದ ರಂಗಭೂಮಿ ನಾಟಕ, 1390 ಕ್ಕೂ ಹೆಚ್ಚು ಬಾರಿ ಪ್ರದರ್ಶನಗೊಂಡಿದೆ.ಸರಿಗಮ ವಿಜಿ ಅವರನ್ನು ಅನಾರೋಗ್ಯದ ಹಿನ್ನೆಲೆಯಲ್ಲಿ ಬೆಂಗಳೂರಿನ ಮಣಿಪಾಲ್ ಹಾಸ್ಪಿಟಲ್ ಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ನಿಧನರಾಗಿದ್ದಾರೆ. ನಾಳೆ (ಜನವರಿ 16) ಬೆಳಿಗ್ಗೆ 10 ರಿಂದ 12 ಗಂಟೆ ಒಳಗೆ ಚಾಮರಾಜಪೇಟೆಯ ಟಿ ಆರ್ ಮಿಲ್ ಬಳಿ ಬರುವ ಚಿತಾಗಾರದಲ್ಲಿ ಹಾಸ್ಯನಟ ಸರಿಗಮ ವಿಜಿ ಅಂತ್ಯ ಕ್ರಿಯೆ ನಡೆಯಲಿದೆ.

Related Articles

Leave a Reply

Your email address will not be published. Required fields are marked *

Back to top button