ಕಿರುತೆರೆಯಿಂದ ಬೆಳ್ಳಿತೆರೆಗೆ ಬಂದು ಯಶಸ್ಸು ಕಂಡ ನಂತರ ಮತ್ತೆ ಹಿಂದೆ ತಿರುಗಿ ನೋಡ ನಟರಲ್ಲಿ ಗಣೇಶ್ ಸಹ ಒಬ್ಬರು. ಕಾಮಿಟಿ ಟೈಮ್ ಗಣೇಶ್ ಎಂದೇ ಕನ್ನಡಿಗರಿಗೆ ಚಿರಪರಿತರಾಗಿದ್ದವರು ಈಗ ಗೋಲ್ಡನ್ ಸ್ಟಾರ್ ಆಗಿ ಮುಂಗಾರುಗ ಮಳೆ ಹುಡುಗನಾಗಿ ಪ್ರೇಕ್ಷಕರ ಮನಸ್ಸಿನಲ್ಲಿ ನೆಲೆಯೂರಿದ್ದಾರೆ. ಇಂತಹ ನಟನ ಬಹುನಿರೀಕ್ಷಿತ ಸಿನಿಮಾ ಸಖತ್. ಚಿತ್ರೀಕರಣ ಬಹುತೇಕ ಪೂರ್ಣಗೊಳಿಸಿರುವ ಚಿತ್ರತಂಡ ಈಗಾಗಲೇ ಪ್ರಚಾರ ಕಾರ್ಯ ಆರಂಭಿಸಿದೆ. (ಚಿತ್ರಗಳು ಕೃಪೆ: ಇನ್ಸ್ಟಾಗ್ರಾಂ)
2019ರಲ್ಲಿ ತೆರೆ ಕಂಡ ‘ಬಜಾರ್’ ಸಿನಿಮಾದ ನಂತರ ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ನಿರ್ದೇಶಕ ಸಿಂಪಲ್ ಸುನಿ ‘ಸಖತ್’ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಗಣೇಶ್ ವಿಭಿನ್ನವಾದ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ನಿನ್ನೆಯಷ್ಟೆ ಈ ಸಿನಿಮಾದ ಪ್ರೇಮಕ್ಕೆ ಕಣ್ಣಿಲ್ಲ ಹಾಡು ರಿಲೀಸ್ ಆಗಿದೆ. ಜಯಂತ್ ಕಾಯ್ಕಿಣಿ ಅವರ ರಚನೆಯಲ್ಲಿ ಮೂಡಿಬಂದಿರುವ ಹಾಡಿಗೆ ಮುಂದಿನ ಪ್ರಸಿದ್ಧ ಗಾಯಕ ಪಂಚಮ್ ಅವರು ದನಿಯಾಗಿದ್ದಾರೆ.