ಇತ್ತೀಚಿನ ಸುದ್ದಿ
ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ಚಂದಕವಾಡಿ ಹೋಬಳಿ ಘಟಕದಿಂದ ಇರಸವಾಡಿ ಸಿದ್ದಪ್ಪಾಜಿಗೆ ಸನ್ಮಾನ

ಚಾಮರಾಜನಗರ: ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಚಂದಕವಾಡಿ ಹೋಬಳಿ ಘಟಕ ವತಿಯಿಂದ ಡಾ.ಬಿ.ಆರ್ ಅಂಬೇಡ್ಕರ್ ಕ್ರಾಂತಿ ಸೇನೆ (ಮಾಧ್ಯಮ ವಿಭಾಗ) ರಾಜ್ಯಾಧ್ಯಕ್ಷರಾದ ಇರಸವಾಡಿ ಸಿದ್ದಪ್ಪಾಜಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಇದೆ ವೇಳೆ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ಚಂದಕವಾಡಿ ಹೋಬಳಿ ಘಟಕದ ಅಧ್ಯಕ್ಷರಾದ ಮಂಜುನಾಥ್ ವಿಶ್ವಕರ್ಮ ಮಾತನಾಡಿ, ಇದೇ ರೀತಿ ನಿಮಗೆ ಇನ್ನೂ ಉತ್ತಮ ಸ್ಥಾನಮಾನ ದೊರೆತು ಎಲ್ಲಾ ಸಮುದಾಯಗಳ ಪರ ಉತ್ತಮ ಕೆಲಸ ಮಾಡಿ ಎಂದು ಆಶಿಸಿದರು

ಈ ಸಂದರ್ಭದಲ್ಲಿ ಕಟ್ಟಡ ಕಾರ್ಮಿಕರ ಸಂಘದ ಜಿಲ್ಲಾ ಕಾರ್ಯದರ್ಶಿ ನಾಗೇಂದ್ರ ಸೋಮವಾರಪೇಟೆ, ಉಪಾಧ್ಯಕ್ಷ ಮರಿಸ್ವಾಮಿ, ಖಜಾಂಚಿ ನಾಗವಳ್ಳಿ ಕುಮಾರ್, ಮುಖಂಡರಾದ ಕೆಂಪರಾಜು, ರವಿಚಾರಿ, ಸಿದ್ದಲಿಂಗಚಾರ್, ರವಿಕುಮಾರ್, ನಾಗರಾಜ ಚಾರ್, ಸಿದ್ದರಾಜು, ನಾಗರಾಜಚಾರ್, ಡಾ.ಎಸ್.ಪಿ ಬಾಲಸುಬ್ರಮಣ್ಯಂ ಗಾನ ಗಂಧರ್ವ ಸಾಂಸ್ಕೃತಿಕ ಕಲಾ ವೇದಿಕೆಯ ಜಿಲ್ಲಾ ಅಧ್ಯಕ್ಷ ಹೆಚ್.ಎಂ. ಶಿವಣ್ಣ ಮಂಗಲ ಹೊಸೂರು ಭಾಗವಹಿಸಿದ್ದರು.
