ವಿದೇಶ

California Wildfire: ಮನೆ, ಕಾರು, ಊರು ಎಲ್ಲಾ ಭಸ್ಮ ಎಲ್ಲಾ ಬಿಟ್ಟು ಓಡಿ ಹೋಗುತ್ತಿರುವ ಜನ!

ಅಮೆರಿಕದಲ್ಲಿ ಪರಿಸ್ಥಿತಿ ಕೈಮೀರಿ ಹೋಗಿದೆ, ಹಾಲಿವುಡ್ ಸಿನಿಮಾಗಳಲ್ಲಿ ಹೀರೋ ಆಗಿದ್ದು ಕೋಟ್ಯಂತರ ಜನರನ್ನು ಕಾಪಾಡಿದಂತೆ ಡ್ರಾಮಾ ಮಾಡಿದವರು ತಮ್ಮ ಮನೆಯನ್ನೇ ಇದೀಗ ಕಳೆದುಕೊಂಡು ಓಡಿ ಹೋಗಿದ್ದಾರೆ. ಒಂದಲ್ಲ.. ಎರಡಲ್ಲ… ಸುಮಾರು 10,000ಕ್ಕೂ ಹೆಚ್ಚು ಮನೆಗಳು & ಕಟ್ಟಡಗಳು ಭಸ್ಮವಾಗಿವೆ, ಅಲ್ಲದೆ ಲೆಕ್ಕಕ್ಕೆ ಸಿಗದಷ್ಟು ಕಾರುಗಳು ಕೂಡ ಇದೀಗ ಕಾಡಿನ ಬೆಂಕಿಗೆ ನಾಶವಾಗಿವೆ.

ಕ್ಯಾಲಿಫೋರ್ನಿಯಾ ಅದ್ರಲ್ಲೂ ಲಾಸ್ ಏಂಜಲೀಸ್ ಈಗ ಬೆಂಕಿಯ ಕೂಪವಾಗಿ ಬದಲಾಗಿದ್ದು, ರಾತ್ರಿ ಕತ್ತಲೆಯಲ್ಲಿ ನೋಡಲು ಥೇಟ್ ನರಕದ ರೀತಿ ಭಾಸವಾಗುತ್ತಿದೆ. ಹಾಗೇ ಬೆಂಕಿ ಕಿಡಿಗೆ ಗಾಳಿ ಜೋರಾಗಿ ಬೀಸುತ್ತಾ ಕಾಡ್ಗಿಚ್ಚು ಮತ್ತಷ್ಟು ಸ್ಥಳಗಳಿಗೆ ಹಬ್ಬಿಕೊಳ್ಳುತ್ತಿದೆ. ಇದು ಭಾರಿ ಆತಂಕ ಸೃಷ್ಟಿ ಮಾಡುತ್ತಿದೆ. ಜನರು ಏನು ಮಾಡಬೇಕು? ಎಲ್ಲಿ ಹೋಗಬೇಕು? ಅನ್ನೋದನ್ನ ತಿಳಿಯದೆ ಸಮುದ್ರದ ತೀರಗಳಲ್ಲಿ ನಿಂತು ಕಣ್ಣೀರು ಹಾಕುತ್ತಿದ್ದಾರೆ. ಹಾಗೇ ಅಮೆರಿಕದ ಜನ ಇದೀಗ ಅಧ್ಯಕ್ಷ ಜೋ ಬೈಡನ್ & ಅವರ ಆಡಳಿತದ ವಿರುದ್ಧ ರೊಚ್ಚಿಗೆದ್ದಿದ್ದಾರೆ.

ಅಮೆರಿಕದ ಕ್ಯಾಲಿಫೋರ್ನಿಯಾ & ಲಾಸ್ ಏಂಜಲೀಸ್ ಭಾಗದಲ್ಲಿ ಹಬ್ಬಿರುವ ಕಾಡಿನ ಬೆಂಕಿ ಇದೀಗ ಎಲ್ಲವನ್ನೂ ಸರ್ವನಾಶ ಮಾಡುತ್ತಿದೆ. ಅದರಲ್ಲೂ ಕ್ಯಾಲಿಫೋರ್ನಿಯಾ ಸುತ್ತಮುತ್ತ ಇದೀಗ ಸುಮಾರು 10,000 ಮನೆಗಳು ಭಸ್ಮವಾಗಿ ಹೋಗಿದ್ದು, ಲಕ್ಷಾಂತರ ಜನಗಳ ಬದುಕು ಈ ಮೂಲಕ ಬೀದಿಗೆ ಬಿದ್ದಿದೆ. ಜನರು ಚಿಂತೆಯಲ್ಲೇ ನರಳುತ್ತಿದ್ದಾರೆ. ಮುಂದಿನ ಪರಿಸ್ಥಿತಿಗೆ ಹೆದರಿ ಕೆಲವರು ಊರು ಬಿಡುತ್ತಿದ್ದಾರೆ.

ನೀರಿನ ಕೊರತೆ & ಜನರ ಪರದಾಟ

ಅಮೆರಿಕದಲ್ಲಿ ಕಾಡ್ಗಿಚ್ಚು ಧಗಧಗ ಹೊತ್ತಿ ಉರಿದು, ಲಕ್ಷಾಂತರ ಜನರ ಜೀವನ ಬೀದಿಗೆ ಬೀಳುವ ರೀತಿ ಮಾಡಿದೆ. ಜಗತ್ತಿನ ದೊಡ್ಡಣ್ಣ ಅಂತಾ ಕರೆಸಿಕೊಳ್ಳುವ ಅಮೆರಿಕ ಈಗ ಕೇವಲ ಒಂದು ಕಾಡ್ಗಿಚ್ಚು ಕಂಟ್ರೋಲ್ ಮಾಡಲು ಆಗದೆ ಒದ್ದಾಡುತ್ತಿದೆ. ಲಕ್ಷಾಂತರ ಜನರು ಜೀವ ಭಯ & ಮನೆ ಕಳೆದುಕೊಳ್ಳುವ ಆತಂಕದಲ್ಲಿ ನರಳುತ್ತಿದ್ದಾರೆ. ಇಂತಹ ಸಮಯದಲ್ಲೇ ಬೆಂಕಿ ಆರಿಸಿ, ಪರಿಸ್ಥಿತಿ ಹಿಡಿತಕ್ಕೆ ತರಲು ನೀರಿನ ಕೊರತೆ ಎದುರಾಗಿದೆ.

2,00,000 ಜನ ಬೇರೆ ಕಡೆ ಶಿಫ್ಟ್

ಒಟ್ನಲ್ಲಿ ಪಶ್ಚಿಮ ಅಮೆರಿಕ ಕರಾವಳಿ ಭಾಗದ ಮರಳುಗಾಡು ಪ್ರದೇಶದಲ್ಲಿ ಭಾರೀ ದೊಡ್ಡ ಕಾಡ್ಗಿಚ್ಚು ಹಬ್ಬಿಕೊಂಡಿದೆ. ಹೀಗೆ ಕಾಡಿನ ಬೆಂಕಿ ಇದೀಗ ನಾಡನ್ನು ಸುಡುತ್ತಾ ಇದ್ದು, ಲಕ್ಷಾಂತರ ಜನರು ಜೀವ ಭಯದಲ್ಲಿ ಊರು ಬಿಡುತ್ತಿದ್ದಾರೆ. ಕ್ಯಾಲಿಫೋರ್ನಿಯಾ & ಲಾಸ್ ಏಂಜಲೀಸ್ ಭಾಗದಲ್ಲಿ ಕಾಡಿನ ಬೆಂಕಿ ತೀವ್ರವಾಗಿ ಹರಡುತ್ತಿದೆ. ಈಗಾಗಲೇ 2,00,000 ಜನರನ್ನ ಶಿಫ್ಟ್ ಮಾಡಲು ಆದೇಶ ನೀಡಲಾಗಿದೆ. ಇಂತಹ ಸಮಯದಲ್ಲೇ, ಹಾಲಿವುಡ್ ಹೃದಯಕ್ಕೂ ಬೆಂಕಿ ಬಿದ್ದಿದೆ.

Related Articles

Leave a Reply

Your email address will not be published. Required fields are marked *

Back to top button