ದೇಶ

ಕೊಟ್ಟೂರು: ಭಕ್ತರ ಧಾರ್ಮಿಕ ನಂಬಿಕೆ ಗೌರವಿಸದ, ಹಿಂದೂ ಧಾರ್ಮಿಕ ದತ್ತಿ ಇಲಾಖೆ

ಕೊಟ್ಟೂರು : ನಾಡಿನ ಆರಾಧ್ಯ ದೈವ, ಪವಾಡ ಪುರುಷ ಶ್ರೀ ಗುರು ಬಸವೇಶ್ವರ ಸ್ವಾಮಿ ದೇವಸ್ಥಾನಕ್ಕೆ ನಾಡಿನಾದ್ಯಂತ ಲಕ್ಷಾಂತರ ಭಕ್ತರು ಹಲವು ಹರಕೆಗಳನ್ನು ಹೊತ್ತು ಪಾದಯಾತ್ರೆ ಬರುತ್ತಾರೆ. ಪಾದಯಾತ್ರೆ ಬಂದು ಭಕ್ತರ, ಬಯಕೆ ಈಡೇರಿದ ಮೇಲೆ ಭಕ್ತಿ ಭಾವದಿಂದ ಜನರು ಹರಕೆ ತೀರಿಸುವುದುವುಂಟು, ಆ ರೀತಿ ಹರಕೆಗಳಲ್ಲಿ ಬಸವ (ಎತ್ತು) ಗೋವುಗಳನ್ನು (ಕರುಗಳು) ಶ್ರೀಗುರು ಕೊಟ್ಟೂರೇಶ್ವರ ಸ್ವಾಮಿ ಹೆಸರು ಹೇಳಿ ದೇವಸ್ಥಾನಕ್ಕೆ ಬಿಡುವುದು ಭಕ್ತರ ಧಾರ್ಮಿಕ ನಂಬಿಕೆಯಾಗಿದೆ.

ಈ ನಂಬಿಕೆಗೆ ದೇವಸ್ಥಾನದ ಧರ್ಮಕರ್ತರಾಗಲಿ, ದೇವಸ್ಥಾನದ , ಧಾರ್ಮಿಕ ದತ್ತಿ ಇಲಾಖೆ ಸಿಬ್ಬಂದಿಯಾಗಲಿ ಭಕ್ತರು ದೇವಸ್ಥಾನಕ್ಕೆ ಬಿಟ್ಟ ಗೋವುಗಳ ರಕ್ಷಣೆಗೆ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳದಿರುವುದು ಭಕ್ತರ ಧಾರ್ಮಿಕ ನಂಬಿಕೆಗೆ ಮಾಡಿದ ಅಪಚಾರವಾಡಗಿದೆ ಎಂದ ಭಕ್ತರು.

ಶ್ರೀಗುರು ಬಸವೇಶ್ವರ ದೇವಸ್ಥಾನಕ್ಕೆ ನಾಡಿನ ಭಕ್ತರು ಜೀವಂತ ಕರುಗಳನ್ನು ಬಿಡುವುದು ಹಿಂದು ಸಂಸ್ಕೃತಿ ಹಾಗೂ ಧಾರ್ಮಿಕ ನಂಬಿಕೆಯಾಗಿದೆ.ಹಾಗಿದ್ದಾಗ ಧಾರ್ಮಿಕ ದತ್ತಿ ಇಲಾಖೆ ಕೇವಲ ಭಕ್ತರು ಹಾಕುವ ಕಾಣಿಕೆ ಸಂಗ್ರಹಿಸುವಲ್ಲಿರುವಷ್ಟು ಶ್ರದ್ಧಾಭಕ್ತಿ, ಭಕ್ತರು ಬಿಡುವ ಜೀವಂತ ಪ್ರಾಣಿಗಳ ರಕ್ಷಣೆ ಬಗ್ಗೆ ಸ್ವಲ್ಪವೂ ಕಾಳಜಿಯಿಲ್ಲಾ ಎನ್ನುವುದು ಭಕ್ತರ ಪ್ರಶ್ನೆಯಾಗಿದೆ.

ಶ್ರೀಗುರು ಕೊಟ್ಟೂರೇಶ್ವರ ಸ್ವಾಮಿಗೆ ಹರಕೆ ತೀರಿಸಲು ಭಕ್ತರು ಬಿಟ್ಟ ಹಸುಗಳ ಪಾಲನೆ ಪೋಷಣೆಯಿಲ್ಲದೆ. ಹಸುಗಳು ರಸ್ತೆ, ವಿವಿಧ ಬಡಾವಣೆ, ಬೀದಿಗಳಲ್ಲಿ, ಅಂಗಡಿ ಮುಂಭಾಗದಲ್ಲಿ ನಿಂತು ಮಾಲೀಕರು ಕೊಡುವ ಬೆಲ್ಲ, ಅಕ್ಕಿ, ತಿಂದು ಜೀವಿಸುವುದರ ಜೊತೆ ರಸ್ತೆಗಳೆ ವಾಸಸ್ಥಳವಾಗಿವೆ. ಕೆಲವೊಮ್ಮೆ ಜೀರ್ಣಕ್ರಿಯೆಯಾಗದ ವಸ್ತುಗಳನ್ನು ತಿಂದು ಅನಾರೋಗ್ಯಕ್ಕೆ ಎಷ್ಟೋ ಹಸುಗಳು ಮರಣ ಹೊಂದಿವೆ. ದೇವರ ಗೂಳಿಗಳು ಭಕ್ತರು ನೀಡುವ ಆಹಾರ ಸೇವನೆಗೆ ಸಾರ್ವಜನಿಕರ ಆಕ್ಷೇಪವೇನು ಇಲ್ಲ, ಆದರೆ ದೇವಸ್ಥಾನ ಹಸುಗಳು ಹಾಗೂ ಬೀದಿ ಹಸುಗಳು ಸೇರಿ ಒಮ್ಮೊಮ್ಮೆ ರಸ್ತೆಗಳಲ್ಲಿ ಸಂಚರಿಸುವ ವಾಹನಗಳ ಅಡ್ಡಗಟ್ಟಿ ತೊಂದರೆ ಕೊಡುತ್ತವೆ. ಮತ್ತೊಮ್ಮೆ ಗೂಳಿಗಳು ಹೊಡೆದಾಟದಿಂದ ಬೈಕ್ ಸವಾರರು ಬಿದ್ದು ಪ್ರಾಣ ಕಳೆದುಕೊಂಡಿದ್ದ ಉದಾಹರಣೆ ಸಹ ನಮ್ಮ ಕಣ್ಮುಂದೆ ಇದೆ. ಇತ್ತಿಚೆಗೆ ಉಜ್ಜಿನಿ ರಸ್ತೆಯ ಹಳೆ ಪಿ ಎಲ್ ಡಿ ಬ್ಯಾಂಕ್ ಬಳಿ ಗೂಳಿಗಳು ಹೊಡದಾಟಕ್ಕೆ ಬಿದ್ದು ಉಜ್ಜಿನಿ ರಸ್ತೆಯಲ್ಲಿ ಸುಮಾರು 1 ಗಂಟೆಗೂ ಹೆಚ್ಚು ಕಾಲ ಟ್ರಾಫಿಕ್ ಜಾಮ್ ನಿಂದಾಗಿ ಜನರಿಗೆ ತೊಂದರೆಯಾಗಿದ್ದಂತು ಹೇಳತೀರದು. ದೇವಸ್ಥಾನದ ಅಧಿಕಾರಿಗಳು ಆ ಹಸುಗಳಿಗೂ ನಮಗೂ ಸಂಬಂಧವಿಲ್ಲ ಭಕ್ತರು ಹಾಕುವ ಕಾಣಿಕೆ ಮಾತ್ರ ನಮಗೂ ನಮ್ಮ ಸರ್ಕಾರಕ್ಕೂ ಸೇರಿದ್ದು ಎನ್ನುವಂತೆ ವರ್ತಿಸುತ್ತಾರೆ. ಅದಲ್ಲದೆ ಶ್ರೀಗುರು ಕೊಟ್ಟೂರೇಶ್ವರ ದೇವಸ್ಥಾನದಲ್ಲಿ ಭಕ್ತರು ದೇವರ ದರ್ಶನ ಪಡೆಯಲು ಸ್ಥಳವಿಲ್ಲದೆ ಹರಸಹಸ ಪಡುತ್ತಿರುವಾಗ ಈ ರೀತಿಯ ದೊಡ್ಡ ದೊಡ್ಡ ಹುಂಡಿ ಪೆಟ್ಟಿಗೆಗಳ ಅವಶ್ಯಕತೆಯಿತ್ತಾ ? ಈ ಮಧ್ಯೆ ಹಿಂ.ಧಾ‌.ದ.ಇ 3 ಹೊಸ ದೊಡ್ಡ ದೊಡ್ಡ ಕಾಣಿಕೆ ಪೆಟ್ಟಿಗೆ ಇರಿಸಿದ್ದು ಎಷ್ಟು ಸರಿ ? ವಿಪರ್ಯಾಸವೆನೆಂದರೆ ಗೋವುಗಳು ದೇವಸ್ಥಾನದ ಆಸ್ತಿಯಾಗಿದ್ದರು. ಅವುಗಳ ರಕ್ಷಣೆ ಮಾತ್ರ ದೇವಸ್ಥಾನಕ್ಕೆ ಬೇಡವಾಗಿದೆ. ಭಕ್ತರು ಹರಕೆ ಫಲವಾಗಿ ಬಿಟ್ಟ ಗೋವುಗಳು ದೇವಸ್ಥಾನಕ್ಕೆ ಸೇರಿದ್ದರು ಕೂಡ, ಅಧಿಕಾರಿಗಳು ಸಂಬಂಧವಿಲ್ಲದಂತೆ ವರ್ತಿಸುವುದನ್ನು ಕಂಡು ದೇವಸ್ಥಾನದ ಧರ್ಮಾಧಿಕಾರಿಗಳಿಗೆ ಹಾಗೂ ದೇವಸ್ಥಾನ ಕಾರ್ಯನಿರ್ವಾಹಕ ಅಧಿಕಾರಿಗಳ ವರ್ತನೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.

ಎಷ್ಟೊ ಬಾರಿ ಗೋ ರಕ್ಷಣೆ ಕುರಿತು ಮತ್ತು ಅವುಗಳಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ಕುರಿತು ಹಲವು ಬಾರಿ ಪತ್ರಿಗಳಲ್ಲಿ ವರದಿಯಾದರು ಅಧಿಕಾರಿಗಳು ಮಾತ್ರ ಕ್ಯಾರೆ ಎನ್ನುತ್ತಿಲ್ಲ ,ಅಧಿಕಾರಿಗಳ ಚರ್ಮ ಸ್ವಲ್ಪ ದಪ್ಪನೆ ಅನಿಸುತ್ತದೆ. ಅವರಿಗೆ ಹುಂಡಿ ಕಾಸು ಬಿಟ್ಟರೆ ಜೀವಂತ ಪ್ರಾಣಿಗಳ ರಕ್ಷಣೆ ಹೇಗೆ ನೆನಪಿಗೆ ಬರುತ್ತದೆ. ಎಂದು ಜನರು ಮಾತನಾಡಿಕೊಳ್ಳುತ್ತಿರುವರಂತೆ. ಶ್ರೀ ಮಠದಿಂದ 3 ಜನ ಇಓ ಬದಲಾದರು, ಒಬ್ಬ ಪ್ರಧಾನ ಧರ್ಮಕರ್ತರು ತಮ್ಮ 6 ವರ್ಷಗಳ ಅವಧಿ ಪೂರೈಸಿದರು ಆದರೆ ಭಕ್ತರ ಧಾರ್ಮಿಕ ನಂಬಿಕೆಯಂತೆ ದೇವರ ಹೆಸರಿಗೆ ಬಿಡುವ ಹಸುಗಳ ರಕ್ಷಣೆ ಮಾತ್ರ ಸರ್ಕಾರದಿಂದ ಆಗಲಿ ಮಠದಿಂದಾಗಲಿ ರಕ್ಷಣೆ ಯಾಗುತ್ತಿಲ್ಲ ಎಂಬುದು ಜನರ ಧಾರ್ಮಿಕ ನಂಬಿಕೆಗೆ ಗೌರವವಿಲ್ಲದಂತಾಗಿದೆ. ಉಜ್ಜಿನಿ ರಸ್ತೆಯಲ್ಲಿ ಹಸುಗಳ ಹಿಂಡು ಹಾಗೂ ಅವುಗಳಿಂದ ಆಗುವ ತೊಂದರೆಗೆ ಜನರು ರೋಷಿಹೋಗಿದ್ದಾರೆ ಎಂದು ಜನರು ಮಾತನಾಡಿಕೊಳ್ಳುವರು.

Related Articles

Leave a Reply

Your email address will not be published. Required fields are marked *

Back to top button