ಡಿ.31 ರಂದು ಚಾಮರಾಜನಗರ ಬಂದ್ ಗೆ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಕರೆ

ಇದೆ 31 ರಂದು ದಲಿತ, ರೈತ, ಕನ್ನಡಪರ ಹಾಗೂ ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ನಡೆಯುವ ಚಾಮರಾಜನಗರ ಬಂದ್ ಗೆ ಅಹಿಂದ ಘಟಕ ಚಾಮರಾಜನಗರ ವತಿಯಿಂದ ಸಂಪೂರ್ಣ ಬೆಂಬಲ ನೀಡಲಾಗುತ್ತದೆ ಎಂದು ಜಿಲ್ಲಾಧ್ಯಕ್ಷ ಮಹೇಶ್ ಹಳೆಪುರ ಹಾಗೂ ಅಹಿಂದ ಮಹಿಳೆ ಘಟಕದ ರಾಜ್ಯ ಉಪಾಧ್ಯಕ್ಷೆ ಹಾಗೂ ಜಿ. ಪಂ. ಮಾಜಿ ಅಧ್ಯಕ್ಷೆ ಕಾವೇರಿ ಶಿವಕುಮಾರ್ ನಗರದ ಪ್ರವಾಸಿ ಮಂದಿರದಲ್ಲಿ ಇಂದು ನಡೆದ ಪೂರ್ವಭಾವಿ ಸಭೆಯಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ಮಹಿಳಾ ಘಟಕದ ಜಿಲ್ಲಾಧ್ಯಕ್ಷರು ಹಾಗೂ ಗುಂಡ್ಲುಪೇಟೆ ಮಾಜಿ ಪುರಸಭಾ ಅಧ್ಯಕ್ಷರಾದ ಭಾಗ್ಯಮ್ಮ, ಜಿಲ್ಲಾ ಕಾರ್ಯಾದ್ಯಕ್ಷ ರಾಜಕುಮಾರ್ ಕೆರೆಹಳ್ಳಿ, ಯಳಂದೂರು ತಾಲೂಕು ಅಧ್ಯಕ್ಷ ಶ್ರೀನಿವಾಸ್ ಗಣಿಗನೂರು, ಎಂ.ರವಿ ಕುಮಾರ್, ಅಹಿಂದ ಘಟಕದ ಪದಾಧಿಕಾರಿಗಳಾದ ರತ್ನಮ್ಮ ಹೊಂಗಹಳ್ಳಿ, ವಿ.ರವಿ, ಉಡಿಗಾಲ ಮಾದೇವ್, ಪಿ.ಬಸವಣ್ಣ ಹೊನ್ನಹಳ್ಳಿ,ರತ್ನಮ್ಮ ಹೊಂಗಹಳ್ಳಿ, ಮಧುಸೂದನ್ ರೇಚಂಬಳ್ಳಿ, ಪ್ರಕಾಶ್ ಉಡಿಗಾಲ, ರೇಖಾ ಕೆಂಗಾಕಿ, ತಾಲೂಕು ಪಂಚಾಯತಿ ಮಾಜಿ ಅಧ್ಯಕ್ಷೆ ಕೋಮಲ ಅಗತ ಗೌಡನಹಳ್ಳಿ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ದುಂಡಮ್ಮ ಸೇರಿದಂತೆ ಇತರರು ಭಾಗವಹಿಸಿದ್ದರು.
ವರದಿ:ಇರಸವಾಡಿ ಸಿದ್ದಪ್ಪಾಜಿ tv8kannada ಚಾಮರಾಜನಗರ