ಇತ್ತೀಚಿನ ಸುದ್ದಿ
ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಹುಟ್ಟುಹಬ್ಬದ ಪ್ರಯುಕ್ತ ಸರ್ಕಾರಿ ಶಾಲೆಗೆ ತಟ್ಟೆ, ಮಧ್ಯಾಹ್ನದ ಉಪಹಾರ ವಿತರಣೆ

ಚಾಮರಾಜನಗರ: ಮಾಜಿ ಸಚಿವರಾದ ದಿವಂಗತ ಹೆಚ್.ಎಸ್ ಮಹದೇವಪ್ರಸಾದ್ ಹಾಗೂ ಗೀತಾ ಮಹದೇವಪ್ರಸಾದ್ ಅವರ ಸುಪುತ್ರರಾದ ಗುಂಡ್ಲುಪೇಟೆ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಅವರ ಹುಟ್ಟುಹಬ್ಬದ ಪ್ರಯುಕ್ತ ತಾಲೂಕಿನ ಕುಲಗಾಣ ಸರ್ಕಾರಿ ಶಾಲೆಯ ಮಕ್ಕಳಿಗೆ ಉದ್ಯಮಿಗಳಾದ ಹರೀಶ್ ಕೆಬ್ಬೆಪುರ ಅವರು ತಟ್ಟೆ, ಲೋಟ ಹಾಗೂ ಮಧ್ಯಾಹ್ನದ ಉಪಹಾರದ ವ್ಯವಸ್ಥೆ ನೆರವೇರಿಸಿ ಹೆಚ್.ಎಂ.ಗಣೇಶ್ ಪ್ರಸಾದ್ ಅವರು ನಮ್ಮ ಗುಂಡ್ಲುಪೇಟೆ ಕ್ಷೇತ್ರಕ್ಕೆ ಉತ್ತಮ ಜನಪರ ಕೆಲಸಗಳನ್ನು ಮಾಡುತ್ತಿದ್ದಾರೆ ಅವರಿಗೆ ಇನ್ನು ಹೆಚ್ಚಿನ ಆಯಸ್ಸು ಆರೋಗ್ಯದ ಜೊತೆಗೆ ರಾಜ್ಯಮಟ್ಟದ ಸ್ಥಾನ ದೊರಕಲಿ ಎಂದು ಆಶಿಸುತ್ತೇವೆ ಎಂದರು.
ಈ ಸಂದರ್ಭದಲ್ಲಿ ಉದ್ಯಮಿ ಹರೀಶ್ ಸಹೋದರರಾದ ಕಾಂಗ್ರೆಸ್ ಪಕ್ಷದ ಕಾರ್ಮಿಕ ವಿಭಾಗದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಅಹಿಂದ ಘಟಕದ ಜಿಲ್ಲಾ ಖಜಾಂಚಿ ಮಧುಸೂದನ್ ಕೆಬ್ಬೆಪುರ, ಶಾಲೆಯ ಮುಖ್ಯ ಶಿಕ್ಷಕರು, ಶಿಕ್ಷಕ ವೃಂದ ಹಾಗೂ ಗ್ರಾಮಸ್ಥರು ಇದ್ದರು.
ವರದಿ : ಇರಸವಾಡಿ ಸಿದ್ದಪ್ಪಾಜಿ tv8newskannada ಚಾಮರಾಜನಗರ