ಮತ್ತಹಳ್ಳಿ ಗ್ರಾಮದೇವತೆಗಳ ಭಕ್ತಿ ಭಾವದಿಂದ ಕಾರ್ತಿಕೋತ್ಸವ ಆಚಾರಣೆ

ವಿಜಯನಗರ: ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಮತ್ತಿಹಳ್ಳಿ ಗ್ರಾಮದಲ್ಲಿ ಕಾರ್ತಿಕಮಾಸ ನಿಮಿತ್ತ ದೇವಾಲದಲ್ಲಿ ವಿಶೇಷ ಪೂಜೆ ಧಾರ್ಮಿಕ ವಿಧಿ ವಿಧಾನಗಳಿಂದ ಜರುಗಿತು.
ಗ್ರಾಮದೇವತೆಯಾದ ಶ್ರೀ ಮಾರಿಕಾಂಭ ,ಕಾಳಿಕಾಂಬ,
ದುರ್ಗಂಬಿಕಾ,ಊರಮ್ಮ ದೇವಿಗೆ ಭಕ್ತರು ಸರತಿಸಾಲಿನಲ್ಲಿ ನಿಂತು ಹೂ,ಬಾಳೆಹಣ್ಣು,ತೆಂಗಿನ ಕಾಯಿ ,ನೈವೇದ್ಯವನ್ನು ಶ್ರೀ ದೇವಿಯ ದರ್ಶನ ಆಶೀರ್ವಾದ ಪಡೆದರು.
ಇಳೆ ಸಂಜೆವೇಳೆಗೆ ಪ್ರತಿ ಮನೆಯ ಗೃಹಿಣಿಯರು
ಕಳಸವನ್ನು ಹಿಡಿದು ಕೊಂಡು ಬರುವುದು ವಿಶೇಷ.
ಸಕಲವಾದ್ಯ ಮೇಳ ವಾದ್ಯ ವಿನೋದೊಂದಿಗೆ ,
ಬಾರಿ ಸದ್ದು ಮಾಡುವ ಸಮಾಳ ಅದರ ತಾಳಕ್ಕೆ ತಕ್ಕಂತೆ ನಂದಿಕೋಲು ಕುಣಿತ ನೋಡುಗರನ್ನು ರಂಜಿಸುತ್ತಾರೆ.
ಅರೆವಾದ್ಯ, ಉರುಮೆ ವಾದ್ಯ ಭಕ್ತಿಯ ಸಂಕೇತದಂತೆ ಕಂಗೊಳಿಸುತ್ತದೆ.

ಎಣ್ಣೆ ಬತ್ತಿ ದೀಪ ಹಚ್ಚುವ ಮೂಲಕ
ಕತ್ತಲನ್ನು ನಿರ್ಮಾಲನೆ ಮಾಡಿ .ದೀಪದ ಬೆಳಕಿನಂತೆ ಎಲ್ಲಾರಿಗೂ ಒಳ್ಳಿಯದಾಗಲಿ.
ಈ ಎಲ್ಲಾ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿ ದೇವಿಯ ಕೃಪೆಗೆ ಪಾತ್ರರಾಗಿ ಎಂದು ದೇವಾಲಯ ಸಮಿತಿಯವರು ,ದೈವದವರು ಕೊರಿದ್ದಾರೆ.