ಆರ್.ಉಮೇಶ್ ಅಭಿಮಾನಿ ಬಳಗದಿಂದ ಹುಟ್ಟುಹಬ್ಬ ಆಚರಣೆ

ಚಾಮರಾಜನಗರ : ತಾಲೂಕು ಕುರುಬರ ಸಂಘದ ಅಧ್ಯಕ್ಷ ಹಾಗೂ ಕನಿಷ್ಠ ವೇತನ ಸಲಹಾ ಮಂಡಳಿಯ ಮಾಜಿ ಅಧ್ಯಕ್ಷರಾದ ಆರ್.ಉಮೇಶ್ ಅವರ ಹುಟ್ಟುಹಬ್ಬವನ್ನು ಅಭಿಮಾನಿಗಳು ಇಂದು ಆಚರಿಸಿದರು.
ನಗರದ ಶ್ರೀಚಾಮರಾಜೇಶ್ವರ ದೇವಾಲಯಕ್ಕೆ ತೆರಳಿ ಅವರ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸಿ ನಂತರ ಅಹಿಂದ ಘಟಕದ ಜಿಲ್ಲಾ ಅಧ್ಯಕ್ಷ ಮಹೇಶ್ ಹಳೆಪುರ ಮಾತನಾಡಿ, ಆರ್.ಉಮೇಶ್ ದೀನದಲಿತರ, ಹಿಂದುಳಿದ ವರ್ಗದ ಹಾಗೂ ಕೂಲಿ ಕಾರ್ಮಿಕರ ಪರವಾಗಿ ಜನಪರ ಕೆಲಸ ಮಾಡಿದ್ದಾರೆ ಅವರ 45ನೇ ವರ್ಷದ ಹುಟ್ಟು ಹಬ್ಬದ ಅಂಗವಾಗಿ ಇಂದು ಶ್ರೀ ಚಾಮರಾಜೇಶ್ವರಸ್ವಾಮಿಗೆ ಪೂಜೆ ಸಲ್ಲಿಸಿ ಉಮೇಶ್ ಅವರಿಗೆ ಆರೋಗ್ಯ ಕೀರ್ತಿ ರಾಜಕೀಯ ಅಧಿಕಾರ ನೀಡಲೆಂದು ಪ್ರಾರ್ಥಿಸಲಾಯಿತು ಎಂದರು. ಮುಂದಿನ ದಿನಗಳಲ್ಲಿ ಅವರಿಗೆ ಇನ್ನು ಹೆಚ್ಚಿನ ರಾಜಕೀಯ ಸ್ಥಾನಮಾನ ದೊರೆಯಲಿ ಎಂದು ಆಶಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ ಕಾವೇರಿ ಶಿವಕುಮಾರ್, ಮುಖಂಡರಾದ ಪುನೀತ್ ಕುಮಾರ್ ಕೆರೆಹಳ್ಳಿ, ಪುನೀತ್ ಕುಮಾರ್, ಮಂಜುನಾಥ್ ಕೆ.ಪಿ, ಬೋರೇಗೌಡ, ಎಂ.ಸಿ.ರಾಜು, ಹೊನ್ನಹಳ್ಳಿ ಶಿವಕುಮಾರ್, ಗಣಿಗನೂರು ಶ್ರೀನಿವಾಸ್, ಬಸವಣ್ಣ,ಕೋಟಂಬಳ್ಳಿ ಸಿದ್ದು, ಕಾವುದವಾಡಿ ಶಿವರಾಜು, ಶಿವಕುಮಾರ್ ಮಲ್ಲಯ್ಯನಪುರ, ರೇವಣ್ಣ ಮಾದಾಪುರ, ನಗರಸಭಾ ಮಾಜಿ ಸದಸ್ಯ ಪದ್ಮ ಪುರುಷೋತ್ತಮ್,ಶಿವಕುಮಾರ್ ಮಾದಲವಾಡಿ, ಗೌಡಹಳ್ಳಿ ಸುನಿಲ್,ರೆಚಂಬಳ್ಳಿ ಮಧುಸೂದನ್, ದಡದಹಳ್ಳಿ ನಂಜುಂಡೇಗೌಡ ಸೇರಿದಂತೆ ಇತರರಿದ್ದರು.
ವರದಿ: ಇರಸವಾಡಿ ಸಿದ್ದಪ್ಪಾಜಿ tv8newskannada ಚಾಮರಾಜನಗರ