ಕ್ರೀಡೆ

ಗುಕೇಶ್​ ಗುಣಗಾನ ಮಾಡುವ ಸಮಯ; 18ರ ಪೋರ ವಿಶ್ವವನ್ನೇ ಗೆದ್ದಿದ್ದು ಹೇಗೆ ಗೊತ್ತಾ?

ಧೋಮ್ಮರಾಜು ಗುಕೇಶ್ ಗುರುವಾರ (ಡಿಸೆಂಬರ್ 12) ಸಿಂಗಾಪುರದಲ್ಲಿ ನಡೆದ ಚೆಸ್​ ವಿಶ್ವ ಚಾಂಪಿಯನ್​ಶಿಪ್​ ಗೆಲ್ಲುವ ಮೂಲಕ ಈ ಸಾಧನೆ ಮಾಡಿದ ಅತ್ಯಂತ ಕಿರಿಯ ಸ್ಪರ್ಧಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ವಿಶ್ವ ಚಾಂಪಿಯನ್​ ಹಣಾಹಣಿಯು ಟೈ-ಬ್ರೇಕರ್​ನತ್ತ ಸಾಗುತ್ತಿದ್ದ ನಡುವೆ ಗುಕೇಶ್ ಹಾಕಿದ ಸತತ ಪರಿಶ್ರಮವು 14ನೇ ಮತ್ತು ಫೈನಲ್​ ಕ್ಲಾಸಿಕಲ್​ ಆಟದಲ್ಲಿಆಟದಲ್ಲಿ ಫಲ ನೀಡಿತು, ಚೀನಾದ ಡಿಂಗ್ ಲಿರೆನ್ ದೊಡ್ಡ ತಪ್ಪು ಎಸೆಗಿ ಸೋಲು ಕಂಡರು.

https://x.com/TheFederal_News/status/1867275729349558500?ref_src=twsrc%5Etfw%7Ctwcamp%5Etweetembed%7Ctwterm%5E1867275729349558500%7Ctwgr%5E47d81caa939025c6e54e3ef1e9cc35172286b22b%7Ctwcon%5Es1_c10&ref_url=https%3A%2F%2Fapi-news.dailyhunt.in%2F

ಗುಕೇಶ್ 7.5-6.5 ಅಂತರದಲ್ಲಿ ಜಯ ಸಾಧಿಸಿದರು. ಕುತೂಹಲಕಾರಿ ಸಂಗತಿಯೆಂದರೆ ಗುಕೇಶ್ 18 ನೇ ವಯಸ್ಸಿನಲ್ಲಿ 18ನೇ ವಿಶ್ವ ಚಾಂಪಿಯನ್​ಶಿಪ್​ ಗೆದ್ದಿದ್ದಾರೆ. ಅವರು ಈ ಹಿಂದೆ ಗ್ಯಾರಿ ಕಾಸ್ಪರೋವ್ (22 ವರ್ಷಗಳು) ಹೊಂದಿದ್ದ ಅತ್ಯಂತ ಕಿರಿಯ ಚಾಂಪಿಯನ್ ಎಂಬ ಕಿರೀಟವನ್ನುತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಅದೇ ರೀತಿ ಚೆನ್ನೈ ಮೂಲದ ಆಟಗಾರ ತಮ್ಮ ಮೆಂಟರ್​ ವಿಶ್ವನಾಥನ್ ಆನಂದ್ ಅವರ ಹಾದಿಯನ್ನೇ ವಿಶ್ವ ಚಾಂಪಿಯನ್ ಆಗುವಲ್ಲಿಯೂ ಅನುಸರಿಸಿದರು. ಗುಕೇಶ್​ ಅವರು ಭಾರತದಿಂದ ಎರಡನೇ ವಿಶ್ವ ಚಾಂಪಿಯನ್ ಎನಿಸಿಕೊಂಡರು. ಈ ಎಲ್ಲ ಸಾಧನೆ ಮಾಡಿದ ಬಳಿಕ ಗುಕೇಶ್ ಅವರಿಗೆ ಆನಂದಬಾಷ್ಪಗಳನ್ನು ತಡೆದುಕೊಳ್ಳುವುದಕ್ಕೆ ಆಗಲೇ ಇಲ್ಲ. ಎಲ್ಲದಕ್ಕಿಂತ ಮಿಗಿಲಾಗಿ ಇದು ಭಾರತೀಯ ಚೆಸ್​ ಕ್ಷೇತ್ರಕ್ಕೆ ಸುವರ್ಣಾಕ್ಷರಗಳಲ್ಲಿ ಬರೆದಿಡಬಹುದಾದ ದಿನವಾಯಿತು.

ಕೊನೆ ಕ್ಷಣದ ಬುದ್ಧಿವಂತಿಕೆ

ಪಂದ್ಯದ ಬಗ್ಗೆ ಹೇಳುವುದಾದರೆ, ಗುಕೇಶ್ ಅವರ ಅದ್ಭುತ ಫಾರ್ಮ್ ಹೊಂದಿದ್ದರೆ ಎದುರಾಳಿ ಡಿಂಗ್ 2024ಕ್ಕಿಂತ ಕಡಿಮೆ ರೇಟಿಂಗ್ ಅಂಕಗಳನ್ನು ಹೊಂದಿದ್ದರು. ಹೀಗಾಗಿ ಗುಕೇಶ್​ ವಿಶ್ವ ಚಾಂಪಿಯನ್ ಆಗುವ ನೆಚ್ಚಿನ ಆಟಗಾರ ಎಂದು ಚೆಸ್​ ತಜ್ಞರು ಸುಳಿವು ನೀಡಿದ್ದರು. ಆದರೆ, ಡಿಂಗ್​ ವಿಶ್ವ ಚಾಂಪಿಯನ್​ ಆಗಿದ್ದವರನ್ನು ಎಂಬುದನ್ನು ಇಲ್ಲಿ ಸ್ಮರಿಸಲೇಬೇಕು. ಡಿಂಗ್​ ಮೊದಲ ಪಂದ್ಯವನ್ನು ಸಲೀಸಾಗಿ ಗೆದ್ದರು. ವಿಶ್ವದ 5ನೇ ಶ್ರೇಯಾಂಕಿತ ಡಿಂಗ್​ ಮೂರನೇ ಗೇಮ್ ಗೆದ್ದು ಸಮಬಲ ಸಾಧಿಸಿದರು. ನಂತರ ಏಳು ಡ್ರಾಗಳು ಆದವು. ಯಾಕೆಂದರೆ ಗುಕೇಶ್ ಏಳನೇ ಮತ್ತು ಎಂಟನೇ ಪಂದ್ಯಗಳಲ್ಲಿ ಗೆಲುವುಗಳನ್ನು ಕಳೆದುಕೊಂಡರು. ಡಿಂಗ್​ 11ನೇ ಗೇಮ್ ಗೆದ್ದು ಮುನ್ನಡೆ ಸಾಧಿಸಿದರು. , ಮುಂದಿನ ಗೇಮ್ ನಲ್ಲಿ ಗುಕೇಶ್ ಅವರನ್ನು ಸೋಲಿಸಿ 6-6 ರಿಂದ ಸಮಬಲ ಸಾಧಿಸಿತು. 13ನೇ ಪಂದ್ಯದಲ್ಲಿ ಗುಕೇಶ್​ ಚಾಣಾಕ್ಷತನ ತೋರಿದರು. ಎದುರಾಳಿಗೆ ಬಲವಂತದ ಡ್ರಾಗೆ ಮಾಡಲು ಅವಕಾಶ ಕೊಡಲಿಲ್ಲ. ಪರಿಣಾಮವಾಗಿ ಡಿಂಗ್ 55 ನೇ ನಡೆಯಲ್ಲಿ (ಆರ್‌ಎಫ್ 2) ತಪ್ಪು ಮಾಡಿದರು ಮತ್ತು 58 ನೇ ನಡೆಯಲ್ಲಿ ನಿರ್ಗಮಿಸಿದರು.

“ಅಭಿನಂದನೆಗಳು! ಇದು ಭಾರತೀಯ ಚೆಸ್ ಹೆಮ್ಮೆಯ ಕ್ಷಣ. ನನಗೆ ಸಂತೋಷದ ವೈಯಕ್ತಿಕ ಸಂದರ್ಭ. . ಡಿಂಗ್ ಬಹಳ ರೋಮಾಂಚಕಾರಿ ಪಂದ್ಯ ಆಡಿದರು ಮತ್ತು ಅವರು ಚಾಂಪಿಯನ್ ಎಂದು ತೋರಿಸಿದರು” ಎಂದು ಆನಂದ್ ಎಕ್ಸ್ (ಹಿಂದೆ ಟ್ವಿಟರ್) ನಲ್ಲಿ ಗುಕೇಶ್​ ಗುಣಗಾನ ಮಾಡಿದರು.

17ನೇ ವಿಶ್ವ ಚಾಂಪಿಯನ್ ಡಿಂಗ್ ತಮ್ಮ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ವಿಶ್ವ ಪ್ರಶಸ್ತಿ ಕಳೆದುಕೊಂಡಿರುವುದನ್ನುಸಂತೋಷದಿಂದ ಒಪ್ಪಿಕೊಂಡರು: “ನಾನು ವರ್ಷದ ನನ್ನ ಅತ್ಯುತ್ತಮ ಪಂದ್ಯಾವಳಿಯನ್ನು ಆಡಿದ್ದೇನೆ ಎಂದು ನಾನು ಭಾವಿಸುತ್ತೇನೆ. ಆದರೆ ಅದೃಷ್ಟವನ್ನು ಪರಿಗಣಿಸಿದರೆ ಕೊನೆಯಲ್ಲಿ ಸೋಲುವುದು ನ್ಯಾಯಯುತ ಫಲಿತಾಂಶವಾಗಿತ್ತು. ನನಗೆ ಯಾವ ಪಶ್ಚಾತ್ತಾಪವೂ ಇಲ್ಲ ಎಂದು ಹೇಳಿದ್ದಾರೆ.

“ಐತಿಹಾಸಿಕ ಕ್ಷಣ. ಭಾರತೀಯ ಚೆಸ್ ಕನಸು ನನಸಾಗಿದೆ. ವಿಶ್ವನಾಥ್​ ಆನಂದನ್​ ಹೊಂದಿದ್ದ ಕಿರೀಟವನ್ನು ಮತ್ತೊಬ್ಬ ಭಾರತೀಯ ಮುಡಿಗೇರಿಸಿಕೊಳ್ಳುತ್ತಾರೆ ಎಂದು ಎಂದಿಗೂ ಭಾವಿಸಿರಲಿಲ್ಲ” ಎಂದು ಗ್ರ್ಯಾಂಡ್​ಮಾಸ್ಟರ್​ ಸುಂದರರಾಜನ್ ಕಿಡಂಬಿ ಹೇಳಿದ್ದಾರೆ.

ಗುಕೇಶ್ ವಿಶ್ವ ಪ್ರಶಸ್ತಿ ಗೆಲ್ಲಲು ಕಾರಣವೇನು ಎಂಬ ಪ್ರಶ್ನೆಗೆ ಉತ್ತರಿಸಿದ ಕಿಡಂಬಿ, “ಹೋರಾಟದ ಮನೋಭಾವ, ದೃಢನಿಶ್ಚಯ ಮತ್ತು ಆಶಾವಾದ ಅವರ ಪ್ರಮುಖ ಶಕ್ತಿ” ಎಂದು ಹೇಳಿದರು.

ವಿಶ್ವನಾಥನ್​ ಆನಂದ್ ಸ್ಫೂರ್ತಿ

ತನ್ನ ಅದ್ಭುತ ಸಾಧನೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಗುಕೇಶ್ ತನ್ನ ಹೆತ್ತವರು, ತರಬೇತುದಾರರು ಮತ್ತು ಮೆಂಟಲ್​ ಸ್ಟ್ರೆಂಥನಿಂಗ್​​ ತರಬೇತುದಾರರಿಗೆ ಧನ್ಯವಾದ ಅರ್ಪಿಸಿದರು.

ಚೆನ್ನೈನಲ್ಲಿ (2013) ಮ್ಯಾಗ್ನಸ್​​ ಕಾರ್ಲ್ಸನ್​ ವಿರುದ್ಧ ವಿಶ್ವನಾಥನ್​ ಆನಂದ್ ಗೆದ್ದು ವಿಶ್ವ ಚಾಂಪಿಯನ್​ಪಟ್ಟ ಮುಡಿಗೇರಿಸಿಕೊಂಡಿದ್ದು ಗುಕೇಶ್ ಪಾಲಿಗೆ ಸ್ಫೂರ್ತಿಯ ಕ್ಷಣ. ಆಗ ಅವರಿಗೆ ಕೇವಲ ಏಳು ವರ್ . 2019ರಲ್ಲಿ ಗುಕೇಶ್​ ಗ್ರ್ಯಾಂಡ್ ಮಾಸ್ಟರ್ ಆದರು. ಇದು ಅವರ ಮೊದಲ ಸಾಧನೆ ಹಾಗೂ ಅಪರೂಪದ ಗರಿಮೆ. ಯಾಕೆಂದರೆ ಗ್ರ್ಯಾಂಡ್ ಮಾಸ್ಟರ್ ಆದ, ವಿಶ್ವದ ಎರಡನೇ ಕಿರಿಯ ಎಂಬ ಹೆಗ್ಗಳಿಕೆ ಅವರಿಗೆ ಸಿಕ್ಕಿತು. ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಹೆಚ್ಚಿನ ಸಮಯ ಮನೆಯಲ್ಲಿ ಉಳಿದಿದ್ದ ಅವರು 2020 ಮತ್ತು 2021 ರಲ್ಲಿ ತಮ್ಮ ಚೆಸ್​ ಸಾಧನೆಗಾಗಿ ಸತತವಾಗಿ ಶ್ರಮಿಸಿದ್ದರು. ಇದು 2022 ರಲ್ಲಿ ಅದ್ಭುತ ಫಲಿತಾಂಶಗಳನ್ನು ನೀಡಿತು. ಎರಡು ವರ್ಷಗಳ ಹಿಂದೆ ಚೆನ್ನೈ ಚೆಸ್ ಒಲಿಂಪಿಯಾಡ್​ನಲ್ಲಿ ವೈಯಕ್ತಿಕ ಚಿನ್ನ ಗೆದ್ದಿದ್ದ ಗುಕೇಶ್, ಭಾರತಕ್ಕೆ 2 ಕಂಚಿನ ಪದಕವನ್ನೂ ಗೆದ್ದುಕೊಟ್ಟಿದ್ದರು.

ಅವರು ತಮ್ಮ ಸಾಧನೆಯನ್ನು ಮುಂದುವರಿಸಿದರು. 2023ರಲ್ಲಿ ಚೆನ್ನೈ ಗ್ರ್ಯಾಂಡ್​ ಮಾಸ್ಟರ್​ ಈವೆಂಟ್ ಗೆದ್ದು ಕ್ಯಾಂಡಿಡೇಟ್ಸ್​ ಟೂರ್ನಿಗೆ ಅರ್ಹತೆ ಪಡೆದರು. ಯಾವುದೇ ಚೆಸ್ ತಜ್ಞರು ಊಹಿಸಲು ಸಾಧ್ಯವಾಗದ ಹಂತದಲ್ಲಿಯೇ ಗುಕೇಶ್ ಟೊರೊಂಟೊ ನಡೆದ ಕ್ಯಾಂಡಿಡೇಟ್ಸ್ ಸ್ಪರ್ಧೆಯಲ್ಲೂ ಚಾಂಪಿಯನ್ ಆಗಿ ಮಿಂಚಿದರು.

ಆರಂಭಿಕ ಸಿದ್ಧತೆ, ಸಂಕೀರ್ಣ ಸಂದರ್ಭಗಳಲ್ಲಿ ಕಠಿಣ ನಡೆಗಳನ್ನು ಕಂಡುಕೊಳ್ಳುವ ಸಾಮರ್ಥ್ಯ, ಅತ್ಯುತ್ತಮ ಕಾರ್ಯತಂತ್ರಮತ್ತು ನಂಬಲಾಗದ ಹೋರಾಟದ ಮನೋಭಾವವು ಅವರ ಗೆಲುವಿನ ಶಕ್ತಿ .

ಗುಕೇಶ್ ತಂಡದ ಶಕ್ತಿ

ಗ್ರೆಜೆಗೊರ್ಜ್ ಗಾಜೆವ್ಸ್ಕಿ, ರಾಡೋಸ್ಲಾವ್ ವೊಜ್ಟಾಸ್ಜೆಕ್, ಪೆಂಟಾಲ ಹರಿಕೃಷ್ಣ, ಜಾನ್-ಕ್ರಿಸ್ಟೋಫ್ ಡುಡಾ ಮತ್ತು ವಿನ್ಸೆಂಟ್ ಕೀಮರ್ ಗುಕೇಶ್​ಗೆ ಇತ್ತೀಚಿನ ಕೆಲವು ಸಾಧನೆಗಳ ಹಿಂದೆ ತರಬೇತಿ ನೀಡಿದವರು. ಅವರೆಲ್ಲವೂ ಈ ವಿಶ್ವ ಚಾಂಪಿಯನ್​ಶಿಪ್ ಯಶಸ್ಸಿನಲ್ಲಿ ಪಾಲು ಪಡೆಯಲು ಅರ್ಹರು ಎಂಬುದನ್ನು ಗುಕೇಶ್​ ಪತ್ರಿಕಾಗೋಷ್ಠಿಯಲ್ಲಿ ಹೇಳಿಕೊಂಡಿದ್ದಾರೆ.

ಪ್ಯಾಡಿ ಅಪ್ಟಾನ್​

2011ರಲ್ಲಿ ಭಾರತ ವಿಶ್ವಕಪ್ ಗೆದ್ದಾಗ ಮೆಂಟಲ್ ಕಂಡೀಷನಿಂಗ್ ಕೋಚ್ ಆಗಿದ್ದ ಪ್ಯಾಡಿ ಅಪ್ಟನ್, ಗುಕೇಶ್ ಅವರ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂಬುದು ಗಮನಾರ್ಹ. . ಪಂದ್ಯದ ಮೊದಲು ಮತ್ತು ಸಮಯದಲ್ಲಿ ಅಪ್ಟನ್ ನೀಡಿದ ಸಲಹೆಗಳು ಗುಕೇಶ್ ನಿಸ್ಸಂದೇಹವಾಗಿ ಪ್ರಯೋಜನ ಕೊಟ್ಟಿದೆ.

ಗುಕೇಶ್ ಕುರಿತು ಇನ್ನಷ್ಟು ಮಾಹಿತಿ

ಹೆಸರು: ಡಿ ಗುಕೇಶ್

ವಯಸ್ಸು : 18

ದೇಶ: ಭಾರತ

ಶ್ರೇಯಾಂಕ: ವಿಶ್ವ ನಂ.5

ರೇಟಿಂಗ್: 2783

ಅತ್ಯುತ್ತಮ ಸಾಧನೆಗಳು: ವಿಶ್ವ ಚಾಂಪಿಯನ್ಶಿಪ್​. ಭಾರತೀಯ ತಂಡದೊಂದಿಗೆ ಕ್ಯಾಂಡಿಡೇಟ್ಸ್ ಮತ್ತು ಚೆಸ್ ಒಲಿಂಪಿಯಾಡ್ (2024ರಲ್ಲಿ)

Related Articles

Leave a Reply

Your email address will not be published. Required fields are marked *

Back to top button