ಕ್ರೀಡಾ ವಾರ್ಷಿಕೋತ್ಸವ ಉದ್ಘಾಟಿಸಿದ ಶಾಸಕ ಕೆ. ಗೋಪಾಲಯ್ಯ

ಮಹಾಲಕ್ಷ್ಮಿಪುರಂನ ರಾಣಿ ಅಬ್ಬಕ್ಕ ಆಟದ ಮೈದಾನದಲ್ಲಿ ಇಂದು ಶಿಕ್ಷಾ ನಿಕೇತನ ಶಾಲೆ ಆಯೋಜಿಸಿದ್ದ ಕ್ರೀಡಾ ವಾರ್ಷಿಕೋತ್ಸವ ಸಮಾರಂಭವನ್ನು ಸ್ಥಳೀಯ ಶಾಸಕರಾದ ಕೆ ಗೋಪಾಲಯ್ಯನವರು ಉದ್ಘಾಟಿಸಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶಾಸಕರು ನಮ್ಮ ಕ್ಷೇತ್ರದಲ್ಲಿ ಕ್ರೀಡಾಪಟುಗಳಿಗೆ ಹಾಗೂ ಶಾಲಾ ಮಕ್ಕಳಿಗೆ ಅನುಕೂಲವಾಗಲೆಂದು ಎರಡು ಕ್ರೀಡಾಂಗಳಿದ್ದು ಒಂದು ರಾಣಿ ಅಬ್ಬಕ್ಕ ಕ್ರೀಡಾಂಗಣ ಮತ್ತು ನಂದಿನಿ ಬಡಾವಣೆಯ ಕಿತ್ತೂರು ರಾಣಿ ಚೆನ್ನಮ್ಮ ಕ್ರೀಡಾಂಗಣ ಇದ್ದು ಈ ಭಾಗದ ಅನೇಕ ಸಾಂಸ್ಕೃತಿಕ ಮತ್ತು ಕ್ರೀಡೆಗಳು ಇಲ್ಲಿ ಜರಗುತ್ತವೆ , ಶಾಲೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಕ್ರೀಡೆಗಳಿಗೆ ಹೆಚ್ಚಿನ ಹೊತ್ತು ನೀಡಬೇಕಾಗುತ್ತದೆ ಪೋಷಕರು ಕೂಡ ತಮ್ಮ ಮಕ್ಕಳು ಯಾವ ಪ್ರತಿಭೆಯಲ್ಲಿ ಉತ್ಸಾಹ ಇದೆಯೋ ಅದಕ್ಕೆ ಪ್ರೋತ್ಸಾಹ ನೀಡಬೇಕು , ವಿದ್ಯಾರ್ಥಿಗಳು ದೇಶ ವಿದೇಶಗಳಿಗೆ ತೆರಳಿ ತಮ್ಮ ಪ್ರತಿಭೆಗಳಿಂದ ಪದಕಗಳನ್ನು ತಂದಿರುವುದನ್ನು ನಾವುಗಳು ನೋಡಿದ್ದೇವೆ ಮಕ್ಕಳುಗಳು ತಂದೆ-ತಾಯಿಯ ಆಸೆಯನ್ನು ಈಡೇರಿಸಬೇಕಾದರೆ ಉನ್ನತ ಮಟ್ಟದ ವ್ಯಾಸಂಗ ಮಾಡಬೇಕು ತಮ್ಮ ಗುರಿಯನ್ನು ಸಾಧಿಸಬೇಕು ಎಂದರು.
ಈ ರಾಣಿ ಅಬ್ಬಕ್ಕ ಮತ್ತು ನಂದಿನಿ ಬಡಾವಣೆಯ ಕಿತ್ತೂರು ಚೆನ್ನಮ್ಮ ಕ್ರೀಡಾಂಗಣ ಹಾಗೂ ಶಾಲೆಗಳನ್ನು 2023ರಲ್ಲಿ ಬಸವರಾಜ್ ಬೊಮ್ಮಾಯಿ ಯವರು ಮುಖ್ಯಮಂತ್ರಿಗಳಾಗಿದ್ದಾಗ ಉದ್ಘಾಟನೆ ಮಾಡಿದರು ಅಂದಿನಿಂದ ಇಲ್ಲಿಯವರೆಗೂ ಸುಮಾರು ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಕ್ರೀಡಾ ಕೂಟಗಳು ಇಲ್ಲಿ ಜರಗಿವೆ ಬೆಳಗಿನ ಸಮಯ ಇಲ್ಲಿ ನೂರಾರು ಸಾರ್ವಜನಿಕರು ವಾಕ್ ಮಾಡುತ್ತಾರೆ, ಇದು ಒಂದು ಒಳ್ಳೆಯ ಕಾರ್ಯಕ್ರಮ ಹೀಗೆ ಹೆಚ್ಚು ಹೆಚ್ಚು ನಡೆಯಬೇಕು ಎಂಬುದೇ ನನ್ನ ಆಶಯ ಎಂದು ಕ್ರೀಡಾಪಟುಗಳಿಗೆ ಶುಭಕೋರಿದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿಜೀ ಅವರ ಆಸೆಯಂತೆ 70 ವರ್ಷ ಮೇಲ್ಪಟ್ಟ ವಯಸ್ಕರಿಗೆ ಆರೋಗ್ಯ ಆಯುಷ್ಮಾನ್ ಕಾರ್ಡ್ ನಮ್ಮ ಗೃಹ ಕಚೇರಿ ಮತ್ತು ಶಾಸಕರ ಕಛೇರಿ ಸೇರಿದಂತೆ ಅಲ್ಲಲ್ಲಿ ಉದ್ಯಾನವನಗಳಲ್ಲಿಯೂ ನೋಂದಣಿ ಮಾಡಲಾಗುತ್ತಿದೆ ನಮ್ಮ ಕಚೇರಿಗಳಲ್ಲಿ ಬೆಳಗಿನ 9 ರಿಂದ ಸಂಜೆ 8 ವರೆಗೂ ನೊಂದಣಿ ಇರುತ್ತದೆ ತಮ್ಮ ಕುಟುಂಬ ಹಾಗೂ ಅಕ್ಕಪಕ್ಕದ ಜನರಿಗೂ ವಿಷಯ ತಿಳಿಸಿ ಹೆಸರು ನೊಂದಾಯಿಸಿಕೊಳ್ಳಬೇಕೆಂದು ತಿಳಿಸಿದರು.