ದೇಶರಾಜಕೀಯ

ಅಮಿತ್ ಶಾ ನಿಂದನೆಗೆ ಪ್ರತಿಯಾಗಿ ಅಂಬೇಡ್ಕರ್ ವಿದ್ಯಾರ್ಥಿ ವೇತನ ಯೋಜನೆ ಘೋಷಿಸಿದ ಆಪ್ ಸರಕಾರ

ನವದೆಹಲಿ : ಬಾಬಾಸಾಹೇಬ್ ಡಾ. ಬಿ.ಆರ್ ಅಂಬೇಡ್ಕರ್ ಅವರ ಹೆಸರಿನ ವಿದ್ಯಾರ್ಥಿ ವೇತನ ಯೋಜನೆಯೊಂದನ್ನು ಎಎಪಿ ಮುಖ್ಯಸ್ಥ ಮಾಜಿ ಮುಖ್ಯಮಂತ್ರಿ ಅರವಿಂದ ಕೇಬ್ರಿವಾಲ್ ಘೋಷಿಸಿದ್ದಾರೆ.

ಮುಂಬರುವ ವಿಧಾನಸಭೆ ಚುನಾವಣೆಗೆ ಈಗಾಗಲೇ ಪ್ರಚಾರ ಆರಂಭಿಸಿರುವ ಕೇಜಿವಾಲ್ ಹೊಸ ಯೋಜನೆ ಘೋಷಿಸಿದರು. ಸಂವಿಧಾನದ ಪಿತಾಮಹ ಬಾಬಾ ಸಾಹೇಬರ ವಿರುದ್ಧ ಅಮಿತ್ ಶಾ ಅವರ ನಿಂದನಾ ಹೇಳಿಕೆಗೆ ಪ್ರತಿಯಾಗಿ ಡಾ.ಅಂಬೇಡ್ಕರ್ ಸಮ್ಮಾನ್ ವಿದ್ಯಾರ್ಥಿ ವೇತನವನ್ನು ಪ್ರಾರಂಭಿಸಲಾಗುತ್ತಿದೆ ಎಂದು ಕೇಜಿವಾಲ್ ಪ್ರಕಟಿಸಿದ್ದಾರೆ.

ವಿಧಾನಸಭಾ ಚುನಾವಣೆಯಲ್ಲಿ ಎಎಪಿ ಗೆಲುವು ದಾಖಲಿಸಿದರೆ ವಿದೇಶಿ ವಿಶ್ವವಿದ್ಯಾಲಯಗಳಿಗೆ ಪ್ರವೇಶ ಪಡೆದ ದಲಿತ ವಿದ್ಯಾರ್ಥಿಗಳಿಗೆ ದೆಹಲಿ ಸರ್ಕಾರ ಧನಸಹಾಯ ನೀಡಲಿದೆ. ದೆಹಲಿಯ ಯಾವುದೇ ದಲಿತ ವಿದ್ಯಾರ್ಥಿಯು ಹಣದ ಕೊರತೆಯಿಂದಾಗಿ ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ತಮ್ಮ ಅಧ್ಯಯನವನ್ನು ಕೈಬಿಡುವಂತಾಗಬಾರದು ಎಂದು ಅವರು ಘೋಷಿಸಿದ್ದಾರೆ.

ಅಂಬೇಡ್ಕರ್ ಅವರು ಲಂಡನ್ ಸ್ಕೂಲ್ ಆಫ್ ಎಕನಾವಿ ಎಕ್ಸ್ ನಲ್ಲಿ ಓದುವಾಗ ಹಣದ ಕೊರತೆಯಿಂದ ತಮ್ಮ ಶಿಕ್ಷಣ

ವನ್ನು ಮಧ್ಯದಲ್ಲಿಯೇ ನಿಲ್ಲಿಸಬೇಕಾಯಿತು. ಅವರು ಮನೆಗೆ ಹಿಂದಿರುಗಿ ಹಣದ ವ್ಯವಸ್ಥೆ ಮಾಡಿಕೊಂಡು ಹಿಂತಿರುಗಿ ಶಿಕ್ಷಣವನ್ನು ಪೂರ್ಣಗೊಳಿಸಿದ್ದನ್ನು ನೆನಪಿಸಿಕೊಂಡಿದ್ದಾರೆ.

ಅಮಿತ್ ಶಾ ಅವರು ಅಂಬೇಡ್ಕರ್ ಅವರನ್ನು ಅಪಹಾಸ್ಯ ಮಾಡುತ್ತಿದ್ದಾರೆ. ಅವರ ಹೇಳಿಕೆಯಿಂದ ಕೋಟ್ಯಂತರ ಅನುಯಾಯಿಗಳಿಗೆ ನೋವಾಗಿದೆ. ಸ್ವತಂತ್ರ ಭಾರತದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಯಾರಾದರೂ ಸಂಸತ್ತಿನಲ್ಲಿ ಅಪಹಾಸ್ಯ ಮಾಡುತ್ತಾರೆಂದು ಯಾರೂ ಊಹಿಸಿರಲಿಲ್ಲ. ಅಮಿತ್ ಶಾ ಅವರ ಅಗೌರವದ ಹೇಳಿಕೆಗೆ ಪ್ರತಿಕ್ರಿಯೆಯಾಗಿ ನಾನು ಈ ಘೋಷಣೆ ಮಾಡುತ್ತಿದ್ದೇನೆ. ಯೋಜನೆಯಲ್ಲಿ ಸರ್ಕಾರಿ ನೌಕರರ ಮಕ್ಕಳನ್ನೂ ಸೇರಿ ಸಲಾಗುವುದು ಎಂದು ತಿಳಿಸಿದರು.

Related Articles

Leave a Reply

Your email address will not be published. Required fields are marked *

Back to top button