ಇತ್ತೀಚಿನ ಸುದ್ದಿ

ಮಾಲಿ ಪಾಟೀಲ್ ಬಂಧುಗಳ ಮದುವೆ ಸಮಾರಂಭದಲ್ಲಿ 501ಸಸಿಗಳ ವಿತರಣೆ ಕಾರ್ಯ ಶ್ಲಾಘನೀಯ… ಚನ್ನಪ್ಪ ಕೆ ಹೊಸಹಳ್ಳಿ

ಲಿಂಗಸೂಗೂರು : ಪಟ್ಟಣದ ಸಾಯಿ ಮಂದಿರದಲ್ಲಿ ಹುಲಿಗುಡ್ಡ ಗ್ರಾಮದ ಪರಿಸರ ಪ್ರೇಮಿಗಳಾದ ಗಣೇಶ ಮಾಲಿ ಪಾಟೀಲ್ ಅವರ ಮದುವೆ ಸಮಾರಂಭದಲ್ಲಿ ಮಾಲಿ ಪಾಟೀಲ್ ಬಂಧುಗಳ ಮತ್ತು ವನಸಿರಿ ಫೌಂಡೇಶನ್ ತಾಲೂಕು ಘಟಕ ಲಿಂಗಸಗೂರು ಸಹಯೋಗದೊಂದಿಗೆ “ಮದುವೆ ಮಂಟಪದಲ್ಲಿ ಪರಿಸರ ಜಾಗೃತಿ”ಎಂಬ ದ್ಯೇಯ ವಾಕ್ಯದೊಂದಿಗೆ 501 ಉಚಿತ ಸಸಿ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಈ ಕಾರ್ಯಕ್ರಮ ತುಂಬಾ ಅರ್ಥಪೂರ್ಣವಾಗಿ ಜರಗಿತು. ಈ ಸಂಧರ್ಭದಲ್ಲಿ ಕುಟುಂಬದ ವತಿಯಿಂದ ವಿವಿಧ ತಳಿಗಳ 501 ಸಸಿಗಳನ್ನು ವಿತರಿಸಲಾಯಿತು.

ವೇದಿಕೆಯ ಮೇಲೆ ನೂತನ ವಧುವರರಿಗೂ ಸಸಿಗಳನ್ನು ಕೊಡುವುದರ ಮೂಲಕ ಶುಭ ಹಾರೈಸಲಾಯಿತು. ಮದುವೆಗೆ ಆಗಮಿಸಿದ ಬಂಧುಗಳು ತುಂಬಾ ಆಸಕ್ತಿ ವಹಿಸಿ ವಿವಿಧ ತಳಿಗಳ ಸಸಿಗಳ ಬಗ್ಗೆ ಮಾಹಿತಿ ತಿಳಿದುಕೊಂಡರು ಮತ್ತು ಕೊಂಡೋಯ್ದರು.

ಇದೇ ವೇಳೆ ವನಸಿರಿ ಪೌಂಡೇಶನ್ ವತಿಯಿಂದ ಸಸಿಗಳ ವಿತರಣೆಯ ಜೊತೆಗೆ ನೋಂದಣಿ ಕಾರ್ಯ ಕೂಡ ಯಶಸ್ವಿಯಾಗಿ ಜರುಗಿತು. ಕಾರ್ಯಕ್ರಮದ ನೇತೃತ್ವದವಹಿಸಿದ ವನಸಿರಿ ಜಾಲತಾಣದ ಅಧ್ಯಕ್ಷರಾದ ಚನ್ನಪ್ಪ ಕೆ ಹೊಸಹಳ್ಳಿ ಅವರು ಮಾತನಾಡಿ ಮಾಲಿ ಪಾಟೀಲ್ ಬಂಧುಗಳು ಮದುವೆ ಸಮಾರಂಭದಲ್ಲಿ”ಮದುವೆ ಮಂಟಪದಲ್ಲಿ ಪರಿಸರ ಜಾಗೃತಿ”ಎಂಬ ದ್ಯೇಯ ವಾಕ್ಯದೋದಿಗೆ 501 ಸಸಿಗಳ ಉಚಿತ ವಿತರಣೆ ಕಾರ್ಯಕ್ರಮ ಹಮ್ಮಿಕೊಡಿರುವುದು ತುಂಬಾ ಶ್ಲಾಘನೀಯ.ಈ ಪರಿಸರ ಜಾಗೃತಿ ಕಾರ್ಯಕ್ರಮ ಜನರಲ್ಲಿ ಪರಿಸರ ಸಂರಕ್ಷಣೆಯ ಅರಿವು ಮೂಡಿಸಲು,ಮನೆಯ ಆವರಣದಲ್ಲಿ ಅಂದವಾದ ಕೈತೋಟ ನಿರ್ಮಾಣ ಮಾಡಲು,ಶೋ ಪ್ಲಾಂಟ್, ಇನ್ನಿತರ ಹೂಗಳ ಸಸಿಗಳ ಬಗ್ಗೆ ಅರಿವನ್ನ ಮೂಡಿಸುವುದರ ಜೊತೆಗೆ ಸಸ್ಯ ಸಂರಕ್ಷಣೆಯ ಬಗ್ಗೆ ಅರಿವು ಮೂಡಿಸಲು ನಮಗೆ ಅನುಕೂಲ ಆಯಿತು. ಪ್ರತಿಯೊಂದು ಕಾರ್ಯಕ್ರಮದಲ್ಲಿ ನಮ್ಮ ವನಸಿರಿ ಪೌಂಡೇಶನ್ ಇನ್ನೊಬ್ಬರಿಗೆ ಮಾರ್ಗದರ್ಶನವಾಗಲೆಂದು ಇಂತಹ ಕಾರ್ಯಗಳನ್ನು ಮಾಡುತ್ತಾ ಬಂದಿದ್ದೇವೆ ಇಂದು ಈ ಕಾರ್ಯ ತುಂಬಾ ಅದ್ಭುತವಾಗಿ ನೆರವೇರಿತು. ಇದೀರೀತಿ ನಮ್ಮ ಮುಂದಿನ ಪಳಿಗೆಗೆ ಪರಿಸರ ಉಳಿಸುವ ನಿಟ್ಟಿನಲ್ಲಿ ಬರುವಂತಹ ನೂತನ ವಧು ವರರು ಇಂತಹ ಮಾದರಿಯಾದ ಪರಿಸರ ಕಾರ್ಯಕ್ರಮವನ್ನು ತಮ್ಮ ಮದುವೆ ಮಂಟಪದಲ್ಲಿ ಹಮ್ಮಿಕೊಳ್ಳುವುದರ ಜೊತೆಗೆ ಸಪ್ತಪದಿ ತುಳಿಯಬೇಕೆಂಬುದೇ ನಮ್ಮ ವನಸಿರಿಯ ಆಶಯ. ಕಾರ್ಯಕ್ರಮದ ಯಶಸ್ವಿಗೆ ಕಾರಣರಾದ ಮಾಲಿ ಪಾಟೀಲ್ ಕುಟುಂಬಕ್ಕೆ ಮತ್ತು ಇದಕ್ಕೆ ಸಹಕರಿಸಿದ ಕುಟುಂಬದ ವರ್ಗದವರು,ವಕೀಲರ ಸಂಘದ ಪದಾಧಿಕಾರಿಗಳಿಗೆ,ಸ್ನೇಹಿತರಿಗೆ ನಮ್ಮ ವನಸಿರಿ ಪೌಂಡೇಷನ್ ವತಿಯಿಂದ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಸ್ಕಿ ತಾಲೂಕ ಅಧ್ಯಕ್ಷರಾದ ರಾಜು ಬಳಗನೂರ,ವನಸಿರಿ ಪೌಂಡೇಷನ್ ದತ್ತು ಪುತ್ರ ಮುದಿಯಪ್ಪ ಹೊಸಳ್ಳಿ ಕ್ಯಾಂಪ್,ವನಸಿರಿ ಪೌಂಡೇಷನ್ ಒಡನಾಡಿ ಪರಿಸರ ಪ್ರೇಮಿ ಹುಸೇನ್ ಸಾಬ್ ಲಿಂಗಸೂರು,ವನಸಿರಿ ಪೌಂಡೇಷನ್ ಮಾರ್ಗದರ್ಶಕರಾದ ಸುರೇಶ ಕುಲಕರ್ಣಿ ಲಿಂಗಸೂರು, ಪರಿಸರ ಪ್ರೇಮಿ ತೋಷಿಪ್ ಪಾಷಾ ಮುದುಗಲ್ಲು,ಶಿವಾನಂದ ಹುಲಿಗುಡ್ಡ, ಹನುಮಗೌಡ ನಾಯಕ, ವೀರೇಶ ಹುಲಿಗುಡ್ಡ,ಕುಟುಂಬ ವರ್ಗದವರು,ವಕೀಲರ ಸಂಘದ ಸದಸ್ಯರು,ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ವರದಿ: ಮುಸ್ತಾಫಾ tv8newskannada ಲಿಂಗಸುಗೂರು

Related Articles

Leave a Reply

Your email address will not be published. Required fields are marked *

Back to top button