ಅಂಬೇಡ್ಕರ್ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

ಚಾಮರಾಜನಗರ: ದ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಿಂದ ಹೊರಟು ಪಚ್ಚಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಯಿತು.
ಇದೆ ವೇಳೆ ಕಾಡ ಅಧ್ಯಕ್ಷರು ಹಾಗೂ ಕಾಂಗ್ರೆಸ್ ಸಮಿತಿ ಜಿಲ್ಲಾಧ್ಯಕ್ಷ ಪಿ.ಮರಿಸ್ವಾಮಿ ಮಾತನಾಡಿ,ಅಮಿತ್ ಶಾ ಅವರು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ಅವ್ಯಾಚ್ಯ ಶಬ್ದಗಳಿಂದ ಮಾತನಾಡಿರುವುದರಿಂದ ಅವರನ್ನು ದೇಶದ್ರೋಹಿ ಎನ್ನಬಹುದು,ಬಿಜೆಪಿಯವರಿಗೆ ಅಂಬೇಡ್ಕರ್ ರವರ ಬಗ್ಗೆ ಗೌರವವಿಲ್ಲ ಈ ರೀತಿ ಹೇಳಿಕೆ ಕೊಡುವ ಮೂಲ ಉದ್ದೇಶ ಸಂವಿಧಾನ ಬದಲಾವಣೆ ಮಾಡುವುದಾಗಿದೆ, ಅಲ್ಲದೆ ಬಿಜೆಪಿಯವರು ಮಾತನಾಡುವಾಗ ನಾವು ಮಹಿಳೆಯರ ಪರ ಎಂದು ಹೇಳುತ್ತಾರೆ ಆದರೆ ಮಹಿಳಾ ವಿರೋಧಿಗಳಾಗಿದ್ದಾರೆ ಆದ್ದರಿಂದ ಕೆಂದ್ರ ಗೃಹಮಂತ್ರಿ ಅಮಿತ್ ಶಾ ಹಾಗೂ ವಿಧಾನಪರಿಷತ್ ಸದಸ್ಯ ಸಿ.ಟಿ ರವಿ ಅವರನ್ನು ವಜಾ ಗೊಳಿಸಬೇಕು ಎಂದು ತಿಳಿಸಿದರು.
ಮುಖಂಡ ನಲ್ಲೂರು ಸೋಮೇಶ್ವರ ಮಾತನಾಡಿ, ಇಂತಹ ಹೇಳಿಕೆ ನೀಡಿರುವ ಅಮಿತ್ ಶಾ ಅವರು ಅನಾಗರಿಕ ಮಂತ್ರಿ ಎನ್ನಬಹುದು ಆದ್ದರಿಂದ ಅವರನ್ನು ದೇಶದಿಂದ ಗಡಿಪಾರು ಮಾಡಬೇಕು ಇಂಥವರಿಂದ ನಮ್ಮ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರಿಗೆ ಅವಮಾನವಾಗುತ್ತಿದೆ ಎಂದರು.
ನಂತರ ಜಿಲ್ಲಾಧಿಕಾರಿಗಳ ಭವನಕ್ಕೆ ತೆರಳಿ ಅಪರ ಜಿಲ್ಲಾಧಿಕಾರಿ ಗೀತಾ ಹುಡೇದ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿ ಪ್ರತಿಭಟನೆ ಕೈಬಿಟ್ಟರು.
ಪ್ರತಿಭಟನೆಯಲ್ಲಿ ಚುಡಾ ಅಧ್ಯಕ್ಷ ಮಹಮ್ಮದ್ ಅಜ್ಗರ್ (ಮುನ್ನಾ), ಕಾಂಗ್ರೇಸ್ ಸಮಿತಿಯ ಉಪಾಧ್ಯಕ್ಷ ಬಿ.ಕೆ.ರವಿಕುಮಾರ್, ಮಾಧ್ಯಮ ಕಾರ್ಯದರ್ಶಿ ಗೌಡಹಳ್ಳಿ ರಾಜೇಶ್, ಸಿದ್ದರಾಮಯ್ಯ ಅಭಿಮಾನಿ ಬಳಗದ ಜಿಲ್ಲಾಧ್ಯಕ್ಷ ಹಳೇಪುರ ಬೆಳ್ಳೇಗೌಡ, ಪ್ರಧಾನ ಕಾರ್ಯದರ್ಶಿ, ಕುದೇರು ಲಿಂಗಣ್ಣ, ಮುಖಂಡರಾದ ನವೀನ್ ಕೆರೆಹಳ್ಳಿ, ಸ್ವತ್ತನಹುಡಿ ಸೋಮಣ್ಣ, ಕೆಎಸ್.ರೇವಣ್ಣ ಎ.ಆರ್.ಬಾಲರಾಜು,ಲತಾ ಜತ್ತಿ, ಪದ್ಮ ಪುರುಷೋತ್ತಮ್, ಕಾವೇರಿ ಶಿವಕುಮಾರ್, ಪರಶಿವಮೂರ್ತಿ, ಅಶೋಕ್ ಇರಸವಾಡಿ,ಡಾ.ರತ್ನಮ್ಮ, ಜಯರಾಜ್, ನಲ್ಲೂರು ಪುಟ್ಟರಾಜು, ಬಸವನಪುರ ರಾಜಶೇಖರ್, ಶಿವಮೂರ್ತಿ,ಮಹೇಶ್ ಹಳೇಪುರ, ಮೋಹನ್ ನಗು ಸೇರಿದಂತೆ ಇತರರು ಭಾಗವಹಿಸಿದ್ದರು
ವರದಿ : ಇರಸವಾಡಿ ಸಿದ್ದಪ್ಪಾಜಿ, tv8newskannada ಚಾಮರಾಜನಗ