ನಲಿಕಲಿ ತರಬೇತಿ ಕಾರ‌್ಯಾಗಾರದ ಸಂಪನ್ಮೂಲ ವ್ಯಕ್ತಿಗಳಿಗೆ ಇಲಾಖೆ ವತಿಯಿಂದ ಸನ್ಮಾನ..

ಯಳಂದೂರು : ಪಟ್ಟಣದ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದ ತಾಲೂಕಿನ ಪ್ರಾಥಮಿಕ ಶಾಲೆಯ ಶಿಕ್ಷಕರಿಗೆ 5 ದಿನಗಳ ಕಾಲ ನಲಿ-ಕಲಿ ಪರಿಷ್ಕರಣೆಯ ಸಂಭ್ರಮ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿ ತರಬೇತಿಯನ್ನು ಯಶಸ್ವಿಗೊಳಿಸಿದ ಸಂಪನ್ಮೂಲ ಶಿಕ್ಷಕರುಗಳಾದ ವಿಶಾಲಾಕ್ಷಿ, ಸುಮಾ ಅಗ್ನಿಹೋತ್ರ, ವಿನುತ, ಸುಮಿತ್ರ, ರವರಿಗೆ ಇಲಾಖೆ ಪರವಾಗಿ ಶಾಲು ಹೊದಿಸಿ ನೆನಪಿನ ಕಾಣಿಕೆ ನೀಡಿ ಗೌರವ ಸಲ್ಲಿಸಲಾಯಿತು .
ಈ ಸಂದರ್ಭದಲ್ಲಿ ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಆರ್. ನಂಜುಂಡಯ್ಯ ರವರು ಮಾತನಾಡಿ ಶಿಕ್ಷಣ ಇಲಾಖೆಯಲ್ಲಿ ವಿಶೇಷ ಅನುಭವವುಳ್ಳ ಸಂಪನ್ಮೂಲ ಶಿಕ್ಷಕರು ನಲಿಕಲಿ ತರಬೇತಿ ಕಾರ್ಯಕ್ರಮದಲ್ಲಿ ಉತ್ತಮವಾದ ತಮ್ಮ ಅನುಭವದ ಮೂಲಕ ಶಿಕ್ಷಕರಿಗೆ ತರಬೇತಿ ನೀಡಿ ಶೈಕ್ಷಣಿಕ ಅಭಿವೃದ್ಧಿಗೆ ಶ್ರಮಿಸಿರುವುದು ಉತ್ತಮವಾದ ಬೆಳವಣಿಗೆಯಾಗಿದೆ ಇಂತಹ ಸಂಪನ್ಮೂಲ ಶಿಕ್ಷಕರ ಅನುಭವವನ್ನು ಪಡೆದು ತರಬೇತಿ ಪಡೆದ ಶಿಕ್ಷಕರು ತಮ್ಮ ತಮ್ಮ ಶಾಲೆಯಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕೆಂದು ಸಲಹೆ ನೀಡಿದರು. ಈ ಸನ್ಮಾನ ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಮಾರಯ್ಯ . ತಾಲೂಕು ನೌಕರ ಸಂಘದ ಅಧ್ಯಕ್ಷರಾದ ಅಮ್ಮನಪುರ ಮಹೇಶ್, ಬಿಆರ್ ಪಿ.ಗಳಾದ ಪುಷ್ಪಲತಾ, ನಂಜುಂಡಸ್ವಾಮಿ,ಸತೀಶ್,ಸಿ ಆರ್ ಪಿ ಗಳಾದ ರೇಚಣ್ಣ,ದೊರೆಸ್ವಾಮಿ, ಭಾರತಿ, ಶಶಿರೇಖಾ, ತರಬೇತಿ ಸಂಪನ್ಮೂಲ ವ್ಯಕ್ತಿಗಳಾದ ವಿಶಾಲಾಕ್ಷಿ, ಸುಮಾ ಅಗ್ನಿಹೋತ್ರ, ವಿನುತ, ಸುಮಿತ್ರ, ಹಾಗೂ ತಾಲೂಕಿನ ವಿವಿಧ ಶಾಲೆಯ ಶಿಕ್ಷಕರು ಶಿಕ್ಷಕಿಯರು ಭಾಗವಹಿಸಿದರು.
ವರದಿ: ಎಸ್. ಪುಟ್ಟಸ್ವಾಮಿಹೊನ್ನೂರು tv8newskannada ಯಳಂದೂರು