ಜ.10ರಂದು ಸೈಕಾಲಜಿಕಲ್ ಹಾರರ್, ಗ್ರಿಲ್ಲರ್ ಟೆಡ್ಡಿ ಬೇರ್ ರಾಜ್ಯಾದ್ಯಂತ ತೆರೆಗೆ,

ಸ್ಯಾಂಡಲ್‌ವುಡ್ ನಲ್ಲಿ ಸದ್ಯ ವಿಭಿನ್ನ ಕಥಾ ಹಂದರದ ಸಿನಿಮಾಗಳು ಹೆಚ್ಚಾಗಿ ಸೌಂಡ್ ಮಾಡುತ್ತಾ, ಪ್ರೇಕ್ಷಕರಿಂದ ಪ್ರಶಂಸೆ ಗಿಟ್ಟಿಸಿಕೊಂಡಿವೆ. ಸದ್ಯ ಆ ಸಾಲಿಗೆ ಸೇರುವ ಬರವಸೆ ಮೂಡಿಸಿರುವ ಚಿತ್ರ ಟೆಡ್ಡಿ ಬೇರ್, ಹೌದು ತನ್ನ ವಿಭಿನ್ನ ಕಂಟೆಂಟ್ ಮೂಲಕ ಗಮನ ಸೆಳೆಯುತ್ತಿರುವ ಟೆಡ್ಡಿ ಬೇರ್ ಈಗಾಗಲೇ ಸೆನ್ಸಾರ್‌ನಿಂದ ಯು/ಎ ಪ್ರಮಾಣಪತ್ರ ಪಡೆದು ಬಿಡುಗಡೆಗೆ ಸಿದ್ಧವಾಗಿದ್ದು, ಹೊಸ ವರ್ಷ (ಜನವರಿ 10) ತೆರೆಗೆ ಬರುತ್ತಿದೆ. ಇದೊಂದು ಸೈಕಾಲಜಿಕಲ್, ಹಾರರ್, ಡ್ರಿಲ್ಲರ್ ಕಥಾ ಹಂದರ ಒಳಗೊಂಡ ಹಾಲಿವುಡ್ ಮಾದರಿಯ ಸಿನಿಮಾ ಎನ್ನಬಹುದು. ಚಿತ್ರದ ನಾಯಕನಾಗಿ ಸುಪ್ರಿಂ ಸ್ಟಾರ್ ಭಾರ್ಗವ್ ಅಭಿನಯ ಮಾಡಿದ್ದು, ಇವರಲ್ಲಿ ಸೈಕಾಲಜಿಕಲ್ ಡಾಕ್ಟರ್ ಪಾತ್ರ ಮಾಡಿದ್ದಾರೆ. ತಮ್ಮ ಪಾತ್ರದ ಬಗ್ಗೆ ಮಾಹಿತಿ ನೀಡುವ ಭಾರ್ಗವ್ ಸಾಮಾನ್ಯವಾಗಿ ವಿಜ್ಞಾನ ನಂಬುವವರು ದೇವರನ್ನು ನಂಬಲ್ಲ, ದೇವರನ್ನು ನಂಬುವವರು ಸೈನ್ಸ್ ನಂಬಲ್ಲ. ಆದರೆ ನನ್ನ ಪಾತ್ರ ಭಗವದ್ಗೀತೆ ಓದಿಕೊಂಡಿರುತ್ತದೆ. ಜೊತೆಗೆ ಸೈನ್ಸ್‌ನಲ್ಲೂ ನಂಬಿಕೆ ಹೊಂದಿದೆ. ಈ ಎರಡು ವಿಚಾರವನ್ನು ಹೇಗೆ ಬ್ಯಾಲೆನ್ಸ್ ಮಾಡುತ್ತಾನೆ ಎಂಬುದೇ ಕಥಾ ನಾಯಕನ ಪಾತ್ರ ಎನ್ನುವರು.

ಈಗಾಗಲೇ ಪರಿಶುದ್ಧಂ ಸೇರಿದಂತೆ ಆರು ಸಿನಿಮಾಗಳಲ್ಲಿ ನಾಯಕನಾಗಿ ಆತೆಯ ಮಾಡಿರುವ ಭಾರ್ಗವ್‌ಗೆ ಟೆಡ್ಡಿ ಬೇರ್ ಹೊ ಬರವಸೆ ನೀಡಿರುವ ಪಾತ್ರ ಎನ್ನುವ ವಿಶೇಷ ಔವ್ಯಲಕ್ಷ್ಮೀ ಪ್ರೊಡಕ್ಷನ್ ಅಡಿಯಲ್ಲಿ ಜ್ಯೋತಿ ತಾರಕೇಶ್, ಭರತ್ ಮತ್ತು ನವೀನ್ ಜಂಟಿಯಾಗಿ ಬಂಡವಾಳ ಹೂಡಿರುವ ಈ ಚಿತ್ರಕ್ಕೆ ಟಾಲಿವುಡ್ ಪುರಿಜಗನ್ನಾಥ್ ಸಹಾಯಕರಾಗಿದ್ದ ಲೋಕೇಶ್.ಬಿ ಕಥೆ, ಚಿತ್ರಕಥೆ ಬರೆದು ಮೊದಲಬಾರಿ ನಿರ್ದೇಶನ ಮಾಡಿದ್ದಾರೆ. ಚಿತ್ರದ ನಾಯಕಿಯರಾಗಿ ಶೈಲಜ ಸಿಂಹ, ದೀನ ಪೂಜಾರಿ ನಟಿಸಿದ್ದಾರೆ. ಉಳಿದ ತಾರಾಗಣದಲ್ಲಿ ಸ್ಪರ್ಶ ರೇಖಾ, ದಿಶಾ ಪೂವಯ್ಯ, ಕಿಟ್ಟಿ ತಾಳಿಕೋಟೆ, ಮುತ್ತು, ಅರವಿಂದ್, ಬೇಬಿ ಅಕ್ಷರ ಮುಂತಾದವರು ಇದ್ದಾರೆ. ಚಿತ್ರಕ್ಕೆ వివరా ಜಂಗ್ಲಿ ಸಂಗೀತ, ದೀಪು-ಬೆನಕರಾಜ್ ಛಾಯಾಗ್ರಹಣ, ಸಂತೋಷ್ ಸಂಕಲನ, ಸ್ಟಂಟ್ ಶಿವ-ಗಣೇಶ್-ಚನ್ನಕೃಷ್ಣ ಸಾಹಸವಿದೆ.
ಅಂದಂಗೆ ಈ ಟೆಡ್ಡಿ ಬೇರ್‌ನಲ್ಲಿ ಮಧ್ಯಮ ಭಾಗದ ಕಥೆಯನ್ನು ಹೇಳಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಪ್ರಿಕ್ಸೆಲ್, ಸೀಕ್ಸಲ್ ಬರಲಿದೆ. ನಿರ್ದೇಶಕರು ಸಂಶೋಧನೆ ನಡೆಸಿ ಸನ್ನಿವೇಶಗಳನ್ನು ಸೃಷ್ಟಿಸಿರುವುದು ವಿಶೇಷ ಜೊತೆಗೆ ಕೈಮ್ಯಾಕ್ಸ್‌ನಲ್ಲಿ ಬರುವ ಕಾಲ ಭೈರವೇಶ್ವರ ಸ್ವಾಮಿಯ ಹಾಡು ಕೂಡ ಚಿತ್ರದ ಹೈಲೈಟ್ ಎನ್ನಬಹುದು.
ಬರಹ ಮತ್ತು ಸಂಗ್ರಹ : ಪುಣ್ಯ ಗೌಡ ಫಿಲಂ ಬ್ಯೂರೋ tv8newskannada ಬೆಂಗಳೂರು