ಇತ್ತೀಚಿನ ಸುದ್ದಿ
BREAKING : ಲಕ್ಷ್ಮೀ ಹೆಬ್ಬಾಳ್ಕರ್ ಬೆಂಬಲಿಗರಿಂದ ಸಿಟಿ ರವಿ ಮೇಲೆ ಹಲ್ಲೆಗೆ ಯತ್ನ!

ಬೆಳಗಾವಿ: ಸುವರ್ಣಸೌಧದಲ್ಲಿ ಇಂದು ಎಂಎಲ್ಸಿ ಸಿ.ಟಿ.ರವಿ ಅವರು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ವಿರುದ್ಧ ಅಶ್ಲೀಲ ಪದ ಬಳಕೆ ಆರೋಪ ಪ್ರಕರಣವು ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ.
ಹೆಬ್ಬಾಳ್ಕರ್ ಅವರ ಬೆಂಬಲಿಗರು ಎನ್ನಲಾದವರಿಂದ ಸುವರ್ಣ ಸೌಧದ ಒಳಗೆಯೇ ಹಲ್ಲೆಗೆ ಯತ್ನಿಸಿರುವ ಘಟನೆ ನಡೆದಿದೆ.
ಪೊಲೀಸರು, ಮಾರ್ಷಲ್ಗಳು ಎದುರಲ್ಲೇ ಸುವರ್ಣಸೌಧದ ಗೇಟ್ ಒದ್ದು ಬಾರೋ ಹೊರಗೆ ಎಂದು ರವಿಯವರನ್ನು ಅವಾಜ್ ಹಾಕಲಾಗಿದೆ.
ಗೇಟ್ಗೆ ಕಾಲಿನಿಂದ ಒದ್ದು ಕೆಲವರು ಉದ್ಧಟತನ ತೋರಿದ್ದಾರೆ. ರವಿ ಅವರನ್ನು ಸುಮಾರು 15 ಜನರಿಂದ ಮುತ್ತಿಗೆ ಹಾಕಿದಾಗ, ಅವರ ವಿರುದ್ಧ ಘೋಷಣೆ ಕೂಗುವುದಲ್ಲದೇ ಹಲ್ಲೆಗೆ ಯತ್ನಿಸಿರುವ ಆರೋಪವಿದೆ. ಈ ಹೈಡ್ರಾಮದ ಘಟನೆ ಸಂಬಂಧ 15 ಜನರನ್ನೂ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.