ದೇಶಸುದ್ದಿ

ನೋಡ ನೋಡುತ್ತಿದ್ದಂತೆ ಜನರ ಮೇಲೆ ಹರಿದ Audi ಕಾರು: ಓರ್ವ ಸಾವು, 9 ಮಂದಿಗೆ ಗಾಯ..!

ರಸ್ತೆಯಲ್ಲಿ ನಾವು ಎಷ್ಟೇ ಜಾಗೃತರಾಗಿದ್ದಾರೂ, ಇತರರ ತಪ್ಪಿನಿಂದ ನಮಗೂ ತೊಂದರೆಯಾಗುತ್ತೆ. ಎಷ್ಟೇ ನಿಧಾನ(Slow)ವಾಗಿ ಚಲಿಸುತ್ತಿದ್ದರು, ನಮ್ಮ ಅಕ್ಕ ಪಕ್ಕದ ವಾಹನಗಳ ಯಡವಟ್ಟನಿಂದ ಅಪಘಾತ(Accident) ಸಂಭವಿಸುತ್ತದೆ. ಅತಿ ವೇಗವಾಗಿ ಚಾಲನೆ(Fast Driving) ಮಾಡಿ , ನಿಯಂತ್ರಣ ತಪ್ಪಿ ಅಪಘಾತವಾಗಿರುವುದುನ್ನು ನಾವು ನೋಡಿದ್ದೇವೆ. ಅದು ಐಷಾರಾಮಿ ಕಾರುಗಳ(Luxury Cars) ಅಬ್ಬರ ರಸ್ತೆಗಳಲ್ಲಿ ಜೋರಾಗಿರುತ್ತೆ.

ಐಷಾರಾಮಿ ಕಾರುಗಳ ಮಾಲೀಕರು ಯಾವುದಕ್ಕೂ ಕೇರ್​ ಮಾಡದೇ ತಮಗಿಷ್ಟ ಬಂದ ಹಾಗೇ ರಸ್ತೆಯಲ್ಲಿ ಕಾರು ಚಲಾಯಿಸುತ್ತಾರೆ.  ರಾಜಸ್ಥಾನ(Rajasthan)ದ ಜೋಧ್‌ಪುರದಲ್ಲಿ (Jodhpur) ಐಷಾರಾಮಿ ಆಡಿ (Luxury Audi Car) ಕಾರೊಂದು ಬೈಕ್ ಸವಾರರ ಮೇಲೆ ಹರಿದ ಪರಿಣಾಮ ಓರ್ವ ಸಾವನ್ನಪ್ಪಿದ್ದು, 9 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಭೀಕರ ಅಪಘಾತದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್(Viral) ಆಗಿದೆ. ಈ ವಿಡಿಯೋ ನೋಡಿದವರ ಎದೆ ಝಲ್​ ಎನಿಸುವುದು ಗ್ಯಾರಂಟಿ. ಯಾಕಂದರೆ ಅಷ್ಟರ ಮಟ್ಟಿಗೆ ಭೀಕರವಾಗಿ ಅಪಘಾತವಾಗಿದೆ. 

ಮೇಲಕ್ಕೆ ಹಾರಿ ಕೆಳಗೆ ಬಿದ್ದ ಸವಾರರು, ಪಾದಾಚಾರಿಗಳು!

ಈ ಭಯಾನಕ ಘಟನೆಯ ವಿಡಿಯೋದಲ್ಲಿ ಅಪಘಾತದ ಸಂಪೂರ್ಣ ದೃಶ್ಯ ದಾಖಲಾಗಿದೆ. ಟ್ರಾಫಿಕ್ ಇರುವ ರಸ್ತೆಯಲ್ಲಿ ಬರುತ್ತಿದ್ದ ಐಷಾರಾಮಿ ಕಾರು ಎದುರು ಹೋಗುತ್ತಿದ್ದ ಬೈಕ್ ಸವಾರನಿಗೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಆತನ ಬೈಕ್ ಮೇಲಕ್ಕೆ ಹಾರಿ ಕೆಳಗೆ ಬಿದ್ದಿದೆ. ಇದರಿಂದ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಬೈಕ್ ಡಿಕ್ಕಿ ಹೊಡೆಯುತ್ತಿದ್ದಂತೆ ನಿಯಂತ್ರಣ ತಪ್ಪಿದ ಕಾರು ಬಳಿಕ ಇನ್ನೂ ಕೆಲವು ಬೈಕ್​ಗಳಿಗೆ ಡಿಕ್ಕಿ ಹೊಡೆದು, ಅಂಗಡಿಗೆ ಗುದ್ದಿದೆ. ಅಲ್ಲೇ ಪಕ್ಕದಲ್ಲೇ ನಡೆದು ಹೊಗುತ್ತಿದ್ದವರ ಮೇಲೂ ಹರಿದಿದೆ. ಕಾರು ಗುದ್ದಿದ ರಭಸಕ್ಕೆ ಪಾದಾಚಾರಿಗಳು ಮೇಲಕ್ಕೆ ಹಾರಿ ಕೆಳಗೆ ಬಿದ್ದಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button