ಕ್ರೀಡೆ

IND vs AUS: ಸತತ ಮಳೆಯಿಂದಾಗಿ ಗಬ್ಬಾ ಟೆಸ್ಟ್ ಪಂದ್ಯ ಡ್ರಾ ದಲ್ಲಿ ಅಂತ್ಯ,

ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಬ್ರಿಸ್ಬೇನ್‌ನಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯ ಡ್ರಾ ಆಗಿದೆ. ಕೊನೆಯ ದಿನದಂದು ಪಂದ್ಯ ರೋಚಕ ತಿರುವನ್ನು ತಲುಪಿತು. ಆದರೆ ಮಳೆಯಿಂದಾಗಿ ಪಂದ್ಯವನ್ನು ರದ್ದುಗೊಳಿಸಲಾಯಿತು. ಐದು ಪಂದ್ಯಗಳ ಬಾರ್ಡರ್-ಗವಸ್ಕಾರ್ ಟ್ರೋಫಿ ಟೆಸ್ಟ್ ಸರಣಿ 1-1ರಲ್ಲಿ ಸಮಬಲಗೊಂಡಿದೆ.

ಮುಂದಿನ ಎರಡು ಪಂದ್ಯಗಳು ಮೆಲ್ಬೋರ್ನ್ ಮತ್ತು ಸಿಡ್ನಿಯಲ್ಲಿ ನಡೆಯಲಿವೆ.

ಗಬ್ಬಾ ಟೆಸ್ಟ್ ಪಂದ್ಯದ ಕೊನೆಯ ದಿನದಾಟದಲ್ಲಿ ಭಾರತ ತಂಡದ ಬೌಲರ್‌ಗಳ ಅದ್ಭುತ ಪ್ರದರ್ಶನದಿಂದಾಗಿ ಆಸ್ಟ್ರೇಲಿಯಾ ಎರಡನೇ ಇನ್ನಿಂಗ್ಸ್‌ನಲ್ಲಿ ಮಂಕಾಯಿತು. ಆಸ್ಟ್ರೇಲಿಯಾ ತನ್ನ ಎರಡನೇ ಇನ್ನಿಂಗ್ಸ್ ಅನ್ನು 7 ವಿಕೆಟ್ ಕಳೆದಕೊಂಡರು 89 ರನ್‌ಗಳಿಗೆ ತತ್ತರಿಸಿ ಡಿಕ್ಲೇರ್ ಮಾಡಿಕೊಂಡಿತು. ಭಾರತಕ್ಕೆ ಗೆಲ್ಲಲು 275 ರನ್‌ಗಳ ಗುರಿಯನ್ನು ನೀಡಿತು. ಆದರೆ, ಭಾರತ 8 ರನ್ ಕಲೆ ಹಾಕುವಷ್ಟರಲ್ಲೇ ಮಳೆರಾಯನ ದರ್ಶನವಾಯಿತು. ಹೀಗಾಗಿ ಪಂದ್ಯವನ್ನು ಮತ್ತೆ ನಿಲ್ಲಿಸಬೇಕಾಯಿತು.

ಆಸ್ಟ್ರೇಲಿಯಾ ವಿರುದ್ಧ ಎರಡನೇ ಇನ್ನಿಂಗ್ಸ್‌ನಲ್ಲಿ ಜಸ್ಪ್ರೀತ್ ಬುಮ್ರಾ ಗರಿಷ್ಠ ಮೂರು ವಿಕೆಟ್ ಪಡೆದರೆ, ಆಕಾಶದೀಪ್ ಮತ್ತು ಮೊಹಮ್ಮದ್ ಸಿರಾಜ್ ತಲಾ ಎರಡು ವಿಕೆಟ್ ಪಡೆದರು. ನಾಯಕ ಪ್ಯಾಟ್ ಕಮಿನ್ಸ್ 22 ರನ್ ಗಳಿಸಿದ ತಂಡದ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಅಲೆಕ್ಸ್ ಕ್ಯಾರಿ 20 ರನ್ ಗಳಿಸಿ ಅಜೇಯರಾಗಿ ಉಳಿದರು. ಗಬ್ಬಾ ಟೆಸ್ಟ್ ಪಂದ್ಯದ ಐದನೇ ಮತ್ತು ಕೊನೆಯ ದಿನದಲ್ಲಿ ಆಟ ಮುಂದುವರೆದಿತ್ತು. ಆಸ್ಟ್ರೇಲಿಯಾದ 445 ರನ್‌ಗಳಿಗೆ ಉತ್ತರವಾಗಿ ಭಾರತದ ಮೊದಲ ಇನ್ನಿಂಗ್ಸ್ 260 ರನ್‌ಗಳಿಗೆ ಆಲೌಟ್ ಆಗಿತ್ತು.

ವರದಿ : ಮೊಹಮ್ಮದ್ ಶಫಿ ಸ್ಪೋರ್ಟ್ಸ್ ಬ್ಯೂರೋ tv8newskannada ಬೆಂಗಳೂರು

Related Articles

Leave a Reply

Your email address will not be published. Required fields are marked *

Back to top button