ದೇಶ

ಕಾಂಗ್ರೆಸ್ 60 ವರ್ಷಗಳಲ್ಲಿ ಮಾಡಿರುವುದಕ್ಕಿಂತ ಹೆಚ್ಚು ಕೆಲಸ ನಾವು 10 ವರ್ಷಗಳಲ್ಲೇ ಮಾಡಿದ್ದೇವೆ: ಪ್ರಧಾನಿ ಮೋದಿ

ಜೈಪುರ: ಕಾಂಗ್ರೆಸ್ ರಾಜ್ಯಗಳ ನಡುವಿನ ವಿವಾದಗಳನ್ನು ಉತ್ತೇಜಿಸಿತು ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದರು.

ರಾಜಸ್ಥಾನದಲ್ಲಿ ಆಯೋಜಿಸಿರುವ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಿಮ್ಮ ಜೀವನದಿಂದ ನೀರಿನ ಸಮಸ್ಯೆಯನ್ನು ಹೊರಹಾಕಲು ಕಾಂಗ್ರೆಸ್ ಎಂದೂ ಬಯಸಲಿಲ್ಲ ಎಂದೂ ದೂರಿದರು.

ಸ್ವಾತಂತ್ರ್ಯಾ ನಂತರ ಕಾಂಗ್ರೆಸ್ 60 ವರ್ಷಗಳಲ್ಲಿ ಮಾಡಿರುವುದಕ್ಕಿಂತ ಹೆಚ್ಚು ಕೆಲಸವನ್ನು ನಾವು ಕಳೆದ ಹತ್ತು ವರ್ಷಗಳಲ್ಲೇ ಮಾಡಿದ್ದೇವೆ ಎಂದು ಅವರು ಪ್ರತಿಪಾದಿಸಿದರು.

ಕಳೆದ ಹತ್ತು ವರ್ಷಗಳಿಂದ ನಾವು ಅಧಿಕಾರದಲ್ಲಿರಲು ರಾಜಸ್ಥಾನ ಪ್ರಮುಖ ಕಾರಣವಾಗಿದೆ ಎಂದು ಅವರು ಇದೇ ಸಂದರ್ಭದಲ್ಲಿ ಶ್ಲಾಘಿಸಿದರು.

ಬಿಜೆಪಿಯು ತ್ವರಿತವಾಗಿ ತನ್ನ ಭರವಸೆಗಳನ್ನು ಪೂರೈಸುತ್ತಿದೆ ಎಂದೂ ಅವರು ಹೇಳಿದರು.

Related Articles

Leave a Reply

Your email address will not be published. Required fields are marked *

Back to top button