BELAGAVI SESSION: ಕುತೂಹಲ ಕೆರಳಿಸಿದ ಯತ್ನಾಳ್ – ಜಮೀರ್ ಭೇಟಿ!

ಯಾವಾಗಲೂ ಒಬ್ಬರ ವಿರುದ್ಧ ಒಬ್ಬರು ಕಾದಾಡಿಕೊಳ್ಳುವಂತಹ ರಾಜಕೀಯ ನಾಯಕರಾದ ಜಮೀರ್ ಅಹಮದ್ ಖಾನ್ ಹಾಗೂ ಬಸನಗೌಡ ಪಾಟೀಲ್ ಯತ್ನಾಳ್ ಅವರು ಇಂದು ಪರಸ್ಪರ ಭೇಟಿಯಾಗಿ ಅಚ್ಚರಿ ಮೂಡಿಸಿದ್ದಾರೆ.
ಬೆಳಗಾವಿ: ಹೌದು, ವಕ್ಫ್ ಸಚಿವ ಜಮೀರ್ ಅವರನ್ನು ಶಾಸಕ ಯತ್ನಾಳ್ ಅವರು ಸುವರ್ಣಸೌಧಧ ಜಮೀರ್ ಅವರ ಕೊಠಡಿಗೆ ತೆರಳಿ ಭೇಟಿಯಾಗಿದ್ದಾರೆ.
ಇತ್ತೀಚೆಗಷ್ಟೇ ವಕ್ಫ್ ವಿರೋಧಿ ಪ್ರತಿಭಟನೆ ನಡೆಸಿದ್ದ ಯತ್ನಾಳ್ ಅವರು ಜಮೀರ್ ಅವರನ್ನು ಭೇಟಿಯಾಗಿ ಕ್ಷೇತ್ರದ ಅಭಿವೃದ್ಧಿ ವಿಚಾರದ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.
ಇದಕ್ಕೂ ಮುನ್ನ ಸದನದಲ್ಲಿ ಜಮೀರ್ ಹಾಗೂ ಯತ್ನಾಳ್ ಅವರು ಜಟಾಪಟಿ ನಡೆಸಿದ್ದರು. ಅಲ್ಪಸಂಖ್ಯಾತರ ಮೀಸಲಾತಿ ವಿಚಾರವಾಗಿ ಯತ್ನಾಳ್ ಮಾತನಾಡುತ್ತಿದ್ದಾಗ ಜಮೀರ್ ಮಧ್ಯೆ ಪ್ರವೇಶ ಮಾಡುತ್ತಿದ್ದರು. ಇದಕ್ಕೆ ಸಿಟ್ಟಾದ ಯತ್ನಾಳ್ ಜಮೀರ್ ವಿರುದ್ಧ ಕಿಡಿಕಾರಿ, ನಾನು ಮಾತನಾಡುವಾಗ ಸುಮ್ಮನೆ ಕೇಳಿ ಎಂದು ಹೇಳಿದರು.
ಅನಂತರ ಜಮೀರ್ ಮಾತನಾಡಿ, ನಾವು ಯಾವ ಸಮುದಾಯಕ್ಕೂ ಅನ್ಯಾಯ ಮಾಡಲು ಬಿಡಲ್ಲ. ಎಲ್ಲರೂ ಕುಳಿತುಕೊಂಡು ಮಾತನಾಡಿ ಬಗೆಹರಿಸಿಕೊಳ್ಳೋಣ. ನಮ್ಮ ಆಫೀಸ್‌ಗೆ ನಾಳೆಯೇ ಬನ್ನಿ ಎಂದು ಯತ್ನಾಳ್ ಅವರನ್ನು ಆಹ್ವಾನಿಸಿದ್ದರು.