ಸುದ್ದಿ
PUNEETH KEREHALLI : ನಿಮಗೆ ತಾಕತ್ ಇದ್ರೆ. ಮುಸ್ಲಿಂ ಸಮುದಾಯಕ್ಕೆ ಸವಾಲು ಹಾಕಿದ ಪುನೀತ್ ಕೆರೆಹಳ್ಳಿ!

ಬೆಂಗಳೂರು: ಸದಾ ಒಂದಿಲ್ಲೊಂದು ವಿವಾದಗಳ ಮೂಲಕ ಸುದ್ದಿಯಲ್ಲಿರೋ ಹಿಂದೂ ಪರ ಹೋರಾಟಗಾರ ಪುನೀತ್ ಕೆರೆಹಳ್ಳಿ ಮತ್ತೆ ತಮ್ಮ ವಿವಾದಾತ್ಮಕ ಭಾಷಣ ಮೂಲಕ ಸದ್ದು ಮಾಡ್ತಿದ್ದಾರೆ.
ತಾಕತ್ ಇದ್ರೆ ಕುರಾನ್ ನನ್ನ ಕನ್ನಡಕ್ಕೆ ಅನುವಾದ ಮಾಡಿ. ಆಜಾನ್ ಕೂಗುವುದನ್ನ ಕನ್ನಡದಲ್ಲಿ ಕೂಗಿ ಎಂದು ಮುಸ್ಲಿಂ ಸಮುದಾಯಕ್ಕೆ ಸವಾಲು ಹಾಕಿದ್ದಾರೆ.
ಸಂಸ್ಕೃತ ಈ ನೆಲದ ಭಾಷೆ. ಭಗವದ್ಗೀತೆಯನ್ನ ಕನ್ನಡದಲ್ಲಿ ತರ್ಜುಮೆ ಮಾಡಿ ಪ್ರಕಟಿಸುತ್ತೇವೆ. ಕನ್ನಡದಲ್ಲಿ ಶ್ಲೋಕ ಹೇಳಿ ಸಾರುತ್ತೇವೆ. ಆದ್ರೆ ನಿಮಗೆ ಕುರಾನ್ ನನ್ನ ಕನ್ನಡದಲ್ಲಿ ಪ್ರಕಟಿಸಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ.
ಸಂಸ್ಕೃತ ಹಾಗೂ ಕುರಾನ್ ಬಗ್ಗೆ ತುಲನೆ ಬೇಡ . ಕನ್ನಡದಲ್ಲಿ ಆಜಾನ್ ಕೂಗಿ ಎಂದು ಕನ್ನಡದಲ್ಲೇ ಹೇಳ್ತಿದ್ದೇನೆ. ನಮ್ಮ ಸವಾಲನ್ನ ಸ್ವೀಕರಿಸಿ ಎಂದು ಪುನೀತ್ ಕೆರೆಹಳ್ಳಿ ಸವಾಲು ಹಾಕಿದ್ದಾರೆ..