ಯಳಂದೂರು ಪಟ್ಟಣದ ಬಿ ಆರ್ ಸಿ ಕೇಂದ್ರದಲ್ಲಿ ಶಿಕ್ಷಕರಿಗೆ ಐದು ದಿನದ ನಲಿ ಕಲಿ ತರಬೇತಿ ಕಾರ್ಯಗಾರ

ಯಳಂದೂರು: ಪಟ್ಟಣದ ಕ್ಷೇತ್ರ ಸಂಪನ್ಮೂಲ ಕೇಂದ್ರಲ್ಲಿ ಸೋಮವಾರ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರ ಯಳಂದೂರು ಸಂಯುಕ್ತಾಶ್ರಯದಲ್ಲಿ ತಾಲೂಕಿನ ಪ್ರಾಥಮಿಕ ಶಾಲೆಯ ಶಿಕ್ಷಕರಿಗೆ 5 ದಿನಗಳ ಕಾಲ ನಲಿ-ಕಲಿ ಪರಿಷ್ಕರಣೆಯ ಸಂಭ್ರಮ ತರಬೇತಿ ಕಾರ್ಯಾಗಾರವನ್ನು ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಆರ್. ನಂಜುಂಡಯ್ಯ ರವರು ಗಿಡಕ್ಕೆ ನೀರೇರಿರುವ ಮೂಲಕ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿ, ಶಿಕ್ಷಣ ಇಲಾಖೆ ನೀಡುವ ತರಬೇತಿ ಮತ್ತು ಕಾರ್ಯಾಗಾರಗಳು ವೃತ್ತಿ ಜೀವನದ ಅವಿಭಾಜ್ಯ ಅಂಗಗಳಾಗಿವೆ.ಶಿಕ್ಷಕರು ತರಬೇತಿಯ ಸದುಪಯೋಗಪಡಿಸಿಕೊಂಡು ತಮ್ಮ ವೃತ್ತಿಪರತೆಯನ್ನು ಹೆಚ್ಚಿಸಿಕೊಳ್ಳಬೇಕು ಎಂದು ಪ್ರಾಥಮಿಕ ಶಿಕ್ಷಣ ಹಂತ ಮಕ್ಕಳಿಗೆ ಬಹು ಅಮೂಲ್ಯವಾಗಿದ್ದು, ಅವರ ಶೈಕ್ಷಣಕ ಜೀವನಕ್ಕೆ ಭದ್ರ ಬುನಾದಿ ಹಾಕುವ ಹಂತವಾಗಿದೆ. ಶಿಕ್ಷಕರು ಕಾಲ ಕಾಲಕ್ಕೆ ಇಲಾಖೆ ನೀಡುವ ಎಲ್ಲ ಶೈಕ್ಷಣಿಕ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಮೂಲಕ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಕಾರಣವಾಗುವ ಜತೆಗೆ ತಮ್ಮ ವೃತ್ತಿ ಕೌಶಲ್ಯಗಳನ್ನು ವೃದ್ಧಿಸಿಕೊಳ್ಳಬೇಕು. ಒಂದು,ಎರಡನೇ ಹಾಗೂ ಮೂರನೇ ತರಗತಿಗೆ ನಲಿ-ಕಲಿ ಬೋಧಿಸುವ ಶಿಕ್ಷಕರಿಗೆ ಐದು ದಿನಗಳ ತರಬೇತಿ ಹಮ್ಮಿಕೊಂಡಿದ್ದು ತರಬೇತಿಯ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ನಂತರ ತಾಲೂಕು ನೌಕರ ಸಂಘದ ಅಧ್ಯಕ್ಷರಾದ ಅಮ್ಮನಪುರ ಮಹೇಶ್ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು ಶಿಕ್ಷಕರು ಒತ್ತಡಕ್ಕೆ ಒಳಗಾಗದೆ ಗುಣಮಟ್ಟ ಶಿಕ್ಷಣ ನೀಡುವ ಮೂಲಕ ಪ್ರಜೆಗಳನ್ನು ರೂಪಿಸುವ ಜವಾಬ್ದಾರಿ ನಿರ್ವಹಿಸಿ ತರಬೇತಿಯಲ್ಲಿ ಪಡೆದಂತ ಮಾಹಿತಿಗಳನ್ನು ಮಕ್ಕಳಿಗೆ ತಿಳಿಸುವ ಮೂಲಕ ಶೈಕ್ಷಣಿಕ ಅಭಿವೃದ್ಧಿ ಕೆಲಸಗಳಲ್ಲಿ ಹೆಚ್ಚು ಗಮನ ಹರಿಸಿ ಎಂದು ಸಲಹೆ ನೀಡಿದರು.
ಈ ತರಬೇತಿ ಕಾರ್ಯಕ್ರಮದಲ್ಲಿಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಆರ್. ನಂಜುಂಡಯ್ಯ,ತಾಲೂಕು ನೌಕರ ಸಂಘದ ಅಧ್ಯಕ್ಷರಾದ ಅಮ್ಮನಪುರ ಮಹೇಶ್, ರೇಚಣ್ಣ, ಬಿಆರ್ ಪಿ.ಗಳಾದ ಪುಷ್ಪಲತಾ, ನಂಜುಂಡಸ್ವಾಮಿ,ಸತೀಶ್,ಸಿ ಆರ್ ಪಿ ಗಳಾದ ದೊರೆಸ್ವಾಮಿ, ಭಾರತಿ, ಶಶಿರೇಖಾ, ತರಬೇತಿ ಸಂಪನ್ಮೂಲ ವ್ಯಕ್ತಿಗಳಾದ ವಿಶಾಲಾಕ್ಷಿ, ಹೋಮ ಅಗ್ನಿಹೋತ್ರ, ವಿನುತ, ಸುಮಿತ್ರ, ಹಾಗೂ ತಾಲೂಕಿನ ವಿವಿಧ ಶಾಲೆಯ ಶಿಕ್ಷಕರು ಶಿಕ್ಷಕಿಯರು ಭಾಗವಹಿಸಿದರು.
ವರದಿ: ಎಸ್. ಪುಟ್ಟಸ್ವಾಮಿಹೊನ್ನೂರು
tv8newskannada ಯಳಂದೂರು