ಇತ್ತೀಚಿನ ಸುದ್ದಿ

ತೀರ್ಪುಗಾರರು ನಿಜವಾದ ಕ್ರೀಡಾಪಟುಗಳಿಗೆ ತೀರ್ಪು ನೀಡಬೇಕು : ಮಹಮ್ಮದ್ ಅಜ್ಗರ್

ಚಾಮರಾಜನಗರ: ತೀರ್ಪುಗಾರರು ನಿಜವಾದ ಕ್ರೀಡಾಪಟುಗಳಿಗೆ ನಿಖರವಾದ ತೀರ್ಪು ನೀಡಬೇಕು ಎಂದು ಚುಡಾ ಅಧ್ಯಕ್ಷ
ಮಹಮ್ಮದ್ ಅಸ್ಗರ್ ಅವರು ತಿಳಿಸಿದರು.


ನಗರದ ಜೆಎಸ್ಎಸ್ ಶಿಕ್ಷಣ ಸಂಸ್ಥೆಯ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಉಪ ನಿರ್ದೇಶಕರ ಕಚೇರಿ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಶಾಲಾ ಶಿಕ್ಷಣ ಇಲಾಖೆ, ಜೆಎಸ್ ಎಸ್ ಶಿಕ್ಷಣ ಸಂಸ್ಥೆಗಳ , ವತಿಯಿಂದ ಇಂದು ನಡೆದ 14/17 ವರ್ಷ ವಯೋಮಿತಿಯ ಬಾಲಕ, ಬಾಲಕಿಯರ ಮೈಸೂರು ವಿಭಾಗ ಮಟ್ಟದ 2024-25 ನೇ ಸಾಲಿನ ಬಾಲ್ ಬ್ಯಾಡ್ಮಿಂಟನ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಕ್ರೀಡೆ ಎಂಬುದು ಆರೋಗ್ಯಕರ ಆಟವಾಗಿದೆ. ಕ್ರೀಡೆಗಳಲ್ಲಿ ಸೋಲು ಗೆಲುವು ಸಹಜ ಅದನ್ನು ವಿದ್ಯಾರ್ಥಿಗಳು ಸಮಾನವಾಗಿ ಸ್ವೀಕರಿಸಬೇಕು ಅಲ್ಲದೇ ತೀರ್ಪು ನೀಡುವ ತೀರ್ಪುಗಾರರು ಯಾವುದೇ ಗೊಂದಲಕ್ಕೀಡಾಗದೆ ತೀರ್ಪು ನೀಡಬೇಕು ಇಲ್ಲವಾದಲ್ಲಿ ವಿದ್ಯಾರ್ಥಿಗಳಿಗೆ ತುಂಬಾ ನೋವು ಉಂಟಾಗುತ್ತದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ನಗರಸಭಾ ಅಧ್ಯಕ್ಷ ಸುರೇಶ್, ಸದಸ್ಯರಾದ ಕುಮುದಾ ಕೇಶವಮೂರ್ತಿ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ರಾಮಚಂದ್ರರಾಜೇ ಅರಸ್, ಕರ್ನಾಟಕ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕ ಅಧ್ಯಕ್ಷೆ ಡಾಕ್ಟರ್.ರೇಣುಕಾದೇವಿ, ಖಜಾಂಚಿ ಶಿವಕುಮಾರಯ್ಯ, ಬಿಇಒ.ಹನುಮಶೆಟ್ಟಿ ಸಿ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಶಂಕರ್.ಆರ್, ದೈಹಿಕ ಶಿಕ್ಷಣ ಇಲಾಖೆ ಪರಶುರಾಮಪ್ಪ, ಪ್ರೌಢಶಾಲಾ ಶಿಕ್ಷಕ ಸಂಘದ ಜಿಲ್ಲಾ ಅಧ್ಯಕ್ಷ ವೀರಭದ್ರಸ್ವಾಮಿ, ಜೆ.ಎಸ್.ಎಸ್ ಕಾಲೇಜು ಪ್ರಾಂಶುಪಾಲ ಎನ್.ಮಹದೇವಸ್ವಾಮಿ, ಗ್ರೇಡ್-2 ರಾಜ್ಯ ಉಪಾಧ್ಯಕ್ಷ ಎನ್.ಜೋಸೆಫ್.ಎನ್, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಬಸವರಾಜು.ಎಸ್, ದೈಹಿಕ ಶಿಕ್ಷಕ ಜಿ.ಮಹದೇವ,ಮುಖ್ಯ ಶಿಕ್ಷಕ ಸಿದ್ದಪ್ಪ ಸೇರಿದಂತೆ ವಿವಿಧ ಶಾಲೆಯ ಶಿಕ್ಷಕರು, ಕ್ರೀಡಾಪಟುಗಳು ಇದ್ದರು.

ವರದಿ : ಇರಸವಾಡಿ ಸಿದ್ದಪ್ಪಾಜಿ, TV8 ನ್ಯೂಸ್ ಕನ್ನಡ, ಚಾಮರಾಜನಗರ

Related Articles

Leave a Reply

Your email address will not be published. Required fields are marked *

Back to top button