ಮಾವನಿಂದಲೇ ಸೊಸೆ ಮೇಲೆ ಅತ್ಯಾಚಾರಕ್ಕೆ ಯತ್ನ: ನಿರಾಕರಿಸಿದ್ದಕ್ಕೆ ಕಬ್ಬಿಣದ ಸಲಾಕೆ ಯಿಂದ ಕೊಂದ ದುರುಳ

ರಾಯಚೂರು,ಡಿ.15 : ಅತ್ಯಾಚಾರಕ್ಕೆ ಒಪ್ಪದ ಸೊಸೆಯನ್ನು ಬರ್ಬರವಾಗಿ ಕೊಲೆಗೈದಿರುವ ಮಾವ ಪಾರಾರಿಯಾಗಿರುವ ಘಟನೆ ಘಟನೆ ತಾಲ್ಲೂಕಿನ ಜುಲಮಗೇರಾ ಗ್ರಾಮದಲ್ಲಿ ನಡೆದಿದೆ.
ಮೃತ ಮಹಿಳೆಯನ್ನು ದುಳ್ಳಮ್ಮ (27) ಎಂದು ಗುರುತಿಸಲಾಗಿದೆ. ಸಂತುಳ್ಳ ರಾಮಲಿಂಗಯ್ಯಪಾರಾರಿಯಾಗಿದ್ದಾನೆ.
ಇತ್ತೀಚೆಗೆ ಸೊಸೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ ಇದು ಗೊತ್ತಾಗಿ ಗ್ರಾಮದ ಹಿರಿಯರು, ಕುಟುಂಬಸ್ಥರು ಆರೋಪಿ ರಾಮಲಿಂಗಯ್ಯಗೆ ಬೈದು ಬುದ್ಧಿ ಹೇಳಿದ್ದರು. ಆದರೂ ಕಳೆದ ರಾತ್ರಿಮನೆಯಲ್ಲಿ ಯಾರು ಇಲ್ಲದ ವೇಳೆ ಸೊಸೆಯ ಮೇಲೆ ಅತ್ಯಾಚಾರ ಎಸಗಲು ಮುಂದಾಗಿದ್ದ.
ಈ ವೇಳೆ ಸೊಸೆ ನಿರಾಕರಿಸಿದ್ದು,ಕೋಪದಲ್ಲಿ ಕಬ್ಬಿಣದ ಸಲಾಕೆಯಿಂದ ತಲೆಗೆ ಹೊಡೆದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಘಟನೆ ಬಳಿಕ ಮನೆಬಿಟ್ಟು ಪರಾರಿಯಾಗಿದ್ದಾನೆ.ಇಡಪನೂರು ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಆರೋಪಿ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಇನ್ನು ಮೃತ ಮಹಿಳೆಗೆ ಒಂದು ಹೆಣ್ಣು ಮಗು ಒಂದು ಗಂಡು ಮಗು ಇದೆ ಎಂದು ತಿಳಿದು ಬಂದಿದೆ.
ವರದಿ : ವಿಶ್ವನಾಥ್ ಸಾಹುಕಾರ್ tv8newskannada ರಾಯಚೂರು