ಮಟನ್ ಬೇಯಿಸೋದು ಗೊತ್ತಿಲ್ವ… ಹಾಗಾದ್ರೆ ಈ ಟಿಪ್ಸ್ ಫಾಲೋ ಮಾಡಿ ಸಾಕು,

ಮಟನ್ ಬೇಯಿಸೋದು ಹೇಗೆ..? – ಗಂಟೆಗಟ್ಟಲೇ ಕಾಯೋದೇ ಬೇಡ, ಈ ಟಿಪ್ಸ್ ಫಾಲೋ ಮಾಡಿ ಸಾಕು
ಚಿಕನ್ ಅಥವಾ ಮಟನ್ ನಲ್ಲಿ ಯಾವುದು ಇಷ್ಟ ಅಂತ ಕೇಳದ್ರೆ ಬಹುತೇಕರು ಹೇಳುವುದು ಮಟನ್ ರೆಸಿಪಿ . ಆದ್ರೆ ಮಟನ್ ಅಡುಗೆ ಮಾಡೋದು ಅಷ್ಟು ಸುಲಭದ ಮಾತಲ್ಲ. ಮಟನ್ ಖರೀದಿ ಮಾಡಲು ಜೇಬು ತುಂಬಾ ಹಣ ಇರಬೇಕು ಮತ್ತು ಅದನ್ನು ಬೇಯಿಸಲು ತಾಳ್ಮೆ ಇರಬೇಕು. ಕಾರಣ ಮಟನ್ ಬೇಗ ಬೇಯಲ್ಲ.
ಚಿಕನ್ ಆದ್ರೆ ಐದರಿಂದ ಹತ್ತು ನಿಮಿಷದಲ್ಲಿ ಬೇಯಿಸಿ, ಅದಕ್ಕೆ ಉಪ್ಪು-ಹುಳಿ-ಖಾರ ಸೇರಿಸಿ ತಿನ್ನಬಹುದು. ಆದ್ರೆ ಮಟನ್ ಹಾಗಲ್ಲ, ಅದಕ್ಕೆ ಬೇಯಿಸಲು ಕೊಂಚ ಸಮಯ ಬೇಕಾಗುತ್ತದೆ. ನುರಿತರಾಗಿದ್ದರೆ 30 ರಿಂದ 45 ನಿಮಿಷ ಸಾಕು. ಒಂದು ವೇಳೆ ನೀವು ಫಸ್ಟ್ ಟೈಮ್ ಮಟನ್ ಮಾಡುತ್ತಿದ್ರೆ ಒಂದು ಗಂಟೆಗೂ ಹೆಚ್ಚು ಸಮಯ ಬೇಕಾಗುತ್ತದೆ.

ಮಟನ್ ಬೇಯಿಸುವಾಗ ಕೆಲವೊಂದು ತಪ್ಪುಗಳನ್ನು ಮಾಡಬಾರದು. ಈ ತಪ್ಪುಗಳಿಂದ ಮಟನ್ ಕುದಿಯೋದು ಲೇಟ್ ಮತ್ತು ಅದರ ರುಚಿಯೂ ಹಾಳಾಗುತ್ತದೆ. ಇಂದು ನಾವು ಸರಿಯಾಗಿ ಮಟನ್ ಹೇಗೆ ಬೇಯಿಸಬೇಕು ಎಂಬುದರ ಬಗ್ಗೆ ಹೇಳುತ್ತಿದ್ದೇವೆ.
ಮಟನ್ ಬೇಯಿಸುವಾಗ ಈ ಟಿಪ್ಸ್ ಫಾಲೋ ಮಾಡಿ
1.ಮೊದಲಿಗೆ ಮಟನ್ ಖರೀದಿಸಿದ ನಂತರ ಅಲ್ಲಿಯೇ ಚಿಕ್ಕ ಚಿಕ್ಕ ಪೀಸ್‌ಗಳನ್ನಾಗಿ ಕತ್ತರಿಸಿಕೊಂಡು ತೆಗೆದುಕೊಂಡು ಬನ್ನಿ. ಮಟನ್ ಮೂಳೆ ತುಂಬಾ ಗಟ್ಟಿಯಾಗಿರೋ ಕಾರಣ ಮನೆಯಲ್ಲಿ ತುಂಡರಿಸಲು ಸಾಧ್ಯವಾಗಲ್ಲ.

2.ಮಟನ್ ತಂದ ಕೂಡಲೇ ಅದನ್ನು ಎರಡರಿಂದ ಮೂರು ಬಾರಿ ತೊಳೆದುಕೊಳ್ಳಬೇಕು. ತೊಳೆಯೋದರಿಂದ ಮಾಂಸದಲ್ಲಿನ ರಕ್ತದ ಕಲೆಗಳು ಹೋಗುತ್ತವೆ. ಯಾವುದೇ ಕಾರಣಕ್ಕೂ ಮಾಂಸವನ್ನು ತಣ್ಣೀರಿನಿಂದ ಮಾತ್ರ ತೊಳೆಯಬಾರದು. ಮಟನ್ ತೊಳೆಯಲು ಉಗುರು ಬೆಚ್ಚಗಿನ ನೀರನ್ನೇ ಬಳಸಬೇಕು. ಬಿಸಿನೀರು ಮಾಂಸವನ್ನು ಸಾಫ್ಟ್ ಮಾಡುತ್ತದೆ.
3.ಮಟನ್ ಕುದಿಸುವ ಮೊದಲು ಒಲೆ ಮೇಲೆ ದೊಡ್ಡದಾದ ಪಾತ್ರೆಯನ್ನು ಇರಿಸಿಕೊಳ್ಳಿ. ಪಾತ್ರೆಗೆ ಒಂದು ಟೀ ಸ್ಪೂನ್ ಅಡುಗೆ ಎಣ್ಣೆ ಹಾಕಿ. ಎಣ್ಣೆ ಬಿಸಿ ಆಗುತ್ತಿದ್ದಂತೆ ಸಣ್ಣದಾಗಿ ಕತ್ತರಿಸಿಕೊಂಡಿರುವ ಮಟನ್ ತುಂಡುಗಳನ್ನು ಹಾಕಿಕೊಳ್ಳಬೇಕು. ನಂತರ ಇದಕ್ಕೆ ಚಿಟಿಕೆಯಷ್ಟು ಅರಿಶಿನ ಸೇರಿಸಿ. ಅಡುಗೆ ಎಣ್ಣೆ ಮತ್ತು ಅರಿಶಿನ ಮಟನ್ ಬೇಗ ಬೇಯಲು ಸಹಾಯ ಮಾಡುತ್ತವೆ.
4.ನಂತರ ಇದಕ್ಕೂ ಬಿಸಿ ನೀರು ಹಾಕಿ ಮಟನ್ ಬೇಯಿಸಬೇಕು. ಒಂದು ವೇಳೆ ನೀರು ಕಡಿಮೆಯಾದ್ರೆ ಯಾವುದೇ ಕಾರಣಕ್ಕೂ ತಣ್ಣೀರು ಬಳಸಬಾರದು. ಮಟನ್ ಅಡುಗೆ ಮುಗಿಯವರೆಗೂ ಬಿಸಿನೀರನ್ನೇ ಬಳಸುತ್ತಿರಬೇಕು.
5.ಮಟನ್ ಒಂದು ಹಂತಕ್ಕೆ ಬೇಯುತ್ತಿದ್ದಂತೆ ಮಾಂಸವನ್ನು ಕುಕ್ಕರ್‌ಗೆ ಹಾಕಿ ಬೇಕಾಗುವಷ್ಟು ಬಿಸಿನೀರು ಸೇರಿಸಿ ಮುಚ್ಚಳ ಮುಚ್ಚಿ ಐದರಿಂದ ಆರು ಕೂಗು ಕೂಗಿಸಿಕೊಂಡರೆ ಮಟನ್ ಹದವಾಗಿ ಬೆಂದಿರುತ್ತದೆ.

✒️ಬರಹ ಮತ್ತು ಸಂಗ್ರಹ: ಮೊಹಮದ್ ಶಫಿ ಸ್ಪೆಶಲ್ tv8newskannada ಬೆಂಗಳೂರು