ಇತ್ತೀಚಿನ ಸುದ್ದಿ

ಪ್ರತಿಭೆ ಹೊರತರಲು ಯುವಕರಿಗೆ ಯುವಜನೋತ್ಸವ ಸಹಕಾರಿ : ಮಹಮ್ಮದ್ ಅಸ್ಗರ್ ಮುನ್ನಾ

ಚಾಮರಾಜನಗರ: ಯುವಜನರಲ್ಲಿರುವ ಕಲಾಪ್ರತಿಭೆಯನ್ನು ಹೊರತರಲು ಯುವಜನೋತ್ಸವ ಸಹಕಾರಿಯಾಗಿದೆ ಎಂದು ಚೂಡಾ ಅಧ್ಯಕ್ಷರಾದ ಮಹಮ್ಮದ್ ಅಸ್ಗರ್ ಮುನ್ನಾ ಅವರು ತಿಳಿಸಿದರು.

ನಗರದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್,ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ನೆಹರು ಯುವ ಕೇಂದ್ರ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾಮಟ್ಟದ ಯುವಜನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ನಂತರ ಮಾತನಾಡಿದ ಅವರು ಯುವಕರಲ್ಲಿ ನಾನಾ ಬಗೆಯ ಕಲಾಪ್ರಕಾರಗಳಿದ್ದು ಅವುಗಳನ್ನು ಜಗತ್ತಿಗೆ ಪರಿಚಯಿಸುವ ಮೂಲಕ ಯುವಜನತೆಯನ್ನು ಪ್ರೋತ್ಸಾಹಿಸಲು ಸರ್ಕಾರವು ನಿರಂತರವಾಗಿ ಪ್ರತಿವರ್ಷ ಇಂತಹ ಮೇಳಗಳನ್ನು ಆಯೋಜಿಸುತ್ತಿದೆ.ಜಿಲ್ಲೆ, ರಾಜ್ಯಮಟ್ಟದಲ್ಲಿ ಗೆದ್ದು ಜಿಲ್ಲೆಗೆ ಕೀರ್ತಿ ತರಬೇಕು.ಹಾಗೆಯೇ ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಪಾಲ್ಗೊಳ್ಳಲು ಸಂಕಷ್ಟದಲ್ಲಿರುವ ಯುವಜನರಿಗೆ ಸರ್ಕಾರ ಅಗತ್ಯ ನೆರವು ನೀಡಬೇಕಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಶಿವಸ್ವಾಮಿ, ಸಾಹಿತಿ ಮಹದೇವ ಶಂಕನಪುರ, ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣ ಸಮಿತಿಯ ಸದಸ್ಯ ವಿ.ಶ್ರೀನಿವಾಸ್ ಪ್ರಸಾದ್,ಜಿಲ್ಲಾ ಯುವ ಪ್ರಶಸ್ತಿ ಪುರಸ್ಕøತರಾದ ಕಾಳಿಂಗಸ್ವಾಮಿ,ಎಂ.ಎನ್. ನಟರಾಜು, ಚಾಮರಾಜನಗರ ವಿ.ವಿಯ ಶಿವರಾಜು, ದೇವಾನಂದ್ ವರಪ್ರಸಾದ್,ನಟೇಶ್, ಗಾಯಕರಾದ ಸಿ.ಎಂ. ನರಸಿಂಹಮೂರ್ತಿ, ಸುರೇಶ್‍ನಾಗ್, ಸೋಮಹಳ್ಳಿ ನಾಗರಾಜು, ಚಿತ್ರಕಲಾವಿದ ಮಧು, ಕಥೆಗಾರ ಶೀಲಾ ಸತ್ಯೇಂದ್ರಸ್ವಾಮಿ, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ವರದಿ: ಇರಸವಾಡಿ ಸಿದ್ದಪ್ಪಾಜಿ tv8newskannada ಚಾಮರಾಜನಗರ

Related Articles

Leave a Reply

Your email address will not be published. Required fields are marked *

Back to top button