ಪಂಚಮಸಾಲಿ ಸಮಾಜದವರ ಮೇಲಿನ ಲಾಠಿಚಾರ್ಜ್ ಖಂಡಿಸಿದ ಜೆಡಿಎಸ್

ಪಂಚಮಸಾಲಿ ಸಮಾಜದವರ ಮೇಲಿನ ಲಾಠಿಚಾರ್ಜ ಖಂಡಿಸಿದ ಜೆಡಿಎಸ್ ಪಕ್ಷದ ವತಿಯಿಂದ ಸುದ್ದಿಗೋಷ್ಠಿ.
ಯಲಬುರ್ಗಾ: ಪಂಚಮಸಾಲಿ ಸಮಾಜದವರು ಮೊದಲಿನಿಂದಲೂ ಅತ್ಯಂತ ಶಾಂತಿಯುತವಾಗಿ ಹೋರಾಟ ನಡೆಸಿಕೊಂಡು ಬಂದಿರುವದು ಎಲ್ಲರಿಗೂ ಗೊತ್ತಿರುವ ವಿಷಯ ಅಂತವರ ಮೇಲೆ ಲಾಠಿಚಾರ್ಜ ಮಾಡಿರುವದು ಅತ್ಯಂತ ಖಂಡನೀಯ ಎಂದು ಜೆಡಿಎಸ್ ತಾಲೂಕ ಅಧ್ಯಕ್ಷ ಬಸವರಾಜ ಗುಳಗುಳಿ ಹೇಳಿದರು.

ಜೆಡಿಎಸ್ ಪಕ್ಷದಿಂದ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ನಮ್ಮ ಕ್ಷೇತ್ರದ ಶಾಸಕರು ನಮ್ಮ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇರುವ ಪಂಚಮಸಾಲಿ ಸಮಾಜದವರಿಂದ ಆಯ್ಕೆಯಾಗಿದ್ದು ಅವರು ಸಹಿತ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರು ಆಗಿದ್ದು ಅವರು ಸದಸನದಲ್ಲಿ ಸಮಾಜಕ್ಕೆ 2ಎ ಮೀಸಲಾತಿ ನೀಡಲು ಒತ್ತಾಯಿಸಬೇಕು ಎಂದರು.
ಜೆಡಿಎಸ್ ಜಿಲ್ಲಾ ವಕ್ತಾರ ಮಲ್ಲನಗೌಡ ಕೋನನಗೌಡ್ರ ಮಾತನಾಡಿ ಕೃಷಿ ಪ್ರಧಾನವಾಗಿ ತಮ್ಮ ಜೀವನವನ್ನು ಸಾಗಿಸುತ್ತಿರುವ ನಮ್ಮ ಸಹೋದರ ಸಮಾಜದ ಭಾಂದವರು ತಮ್ಮ ಹಕ್ಕಿಗಾಗಿ ಹೋರಾಟ ಮಾಡುತ್ತಿದ್ದು ಅದನ್ನು ಹತ್ತಿಕ್ಕುವ ಹುನ್ನಾರ ಸರಕಾರ ಮಾಡುತ್ತಿದೆ ಅದನ್ನ ಬಿಟ್ಟು ಸರಕಾರ ಪ್ರಚೋಧನೆ ಮಾಡುತ್ತಿದೆ ಇದರಿಂದ ಮುಂದೆ ರಾಜ್ಯದಲ್ಲಿ ಅನೇಕ ಸಮಸ್ಯಗಳು ಉದ್ಬವವಾಗುವ ಎಲ್ಲಾ ಲಕ್ಷಣಗಳಿವೆ ಅದನ್ನು ತಪ್ಪಿಸಬೇಕಾದರೆ ತಕ್ಷಣ ಮೀಸಲಾತಿಯನ್ನು ಘೋಷಣೆ ಮಾಡಬೇಕು.
ಸಿದ್ದರಾಮಯ್ಯ ಸರಕಾರ ಹಿಟ್ಲರ್ ಆಡಳಿತ ನಡೆಸಿದೆ ಶಾಂತಿರೀತಿಯ ಹೋರಾಟವನ್ನು ಹಾಗೂ ಹೋರಾಟಕ್ಕೆ ಬೆಲೆ ಕೊಡದೆ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಅನೇಕರ ಮೇಲೆ ಮೊಕದ್ದಮೆ ದಾಖಲಿಸಿದ್ದು ತಕ್ಷಣ ಅದನ್ನ ಹಿಂಪಡೆಯಬೇಕು ಹಾಗೂ ಗಾಯಾಳುಗಳ ಖರ್ಚುಗಳನ್ನ ಸರಕಾರವೇ ನೋಡಿಕೊಳ್ಳಬೇಕು ಮತ್ತು ಸಿದ್ದರಾಮಯ್ಯ ತಕ್ಷಣ ಪಂಚಮಸಾಲಿ ಸಮಾಜದವರ ಕ್ಷಮೇ ಕೋರಬೇಕು ಎಂದರು.
ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರಾದ ಶರಣಪ್ಪ ರಾಂಪೂರ ಹಾಜರಿದ್ದರು.
ವರದಿ: ದೊಡ್ಡಬಸಪ್ಪ ಹಕಾರಿtv8newskannada ಯಲಬುರ್ಗಾ