ಇತ್ತೀಚಿನ ಸುದ್ದಿ

ಐಪಿ ಸೆಟ್ ಗೆ ಸರ್ವಿಸ್, ವಾಲಿರುವ ಕಂಬಗಳ ದುರಸ್ತಿಗೆ ಒತ್ತಾಯಿಸಿ ದೂರು

ಚಾಮರಾಜನಗರ : ತಾಲೂಕಿನ ಹರದನಹಳ್ಳಿ ಗ್ರಾಮದಲ್ಲಿರುವ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ಉಪ ವಿಭಾಗ ದಲ್ಲಿ ಸೆಸ್ಕ್ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರದೀಪ್ ಅವರ ಅಧ್ಯಕ್ಷತೆಯಲ್ಲಿ ಇಂದು ಜನ ಸಂಪರ್ಕಸಭೆ ನಡೆಯಿತು.
ಈ ಸಭೆಯಲ್ಲಿ ಮೂರು ದೂರುಗಳು ಬಂದವು, ಎರಡು ದೂರುಗಳನ್ನು ಬಗೆಹರಿಸಲು ಕ್ರಮ ಕೈಗೊಳ್ಳುವಂತೆ ಸ್ಥಳದಲ್ಲಿದ್ದ ಇಂಜಿನಿಯರ್ ಗಳಿಗೆ ಆದೇಶ ನೀಡಿದರು. ಮತ್ತೊಂದು ಪರಿಹಾರಕ್ಕೆ ಕೋರಿ ಬಂದ ಅರ್ಜಿ ವಿಳಂಬವಾದ ಕಾರಣ ಅದನ್ನು ತಿರಸ್ಕರಿಸಲಾಯಿತು.

ಬೋರ್ವೆಲ್ ತೆಗೆಸಿದೆ, ಆದರೆ ಸರ್ವಿಸ್ ದೊರೆತಿಲ್ಲ ಇದರಿಂದ ವ್ಯವಸಾಯ ಮಾಡಲು ತೊಂದರೆ ಉಂಟಾಗಿದೆ, ಈ ಸಂಬಂಧ ಕೂಡಲೇ ಸರ್ವಿಸ್ ಕೊಡಿಸಿ ಕೊಡಬೇಕೆಂದು ಎಚ್.ಡಿ ಫಾರೆಸ್ಟ್ ನ ರೈತ ನಾಗೇಂದ್ರ ದೂರು ನೀಡಿದರು. ಅದೇ ರೀತಿ ದೊಡ್ಡಮೋಳೆ ಗ್ರಾಮದ ನಾರಾಯಣ ಎಂಬುವರು ತಮ್ಮ ಜಮೀನಿನಲ್ಲಿ ಸಿಮೆಂಟ್ ಕಂಬಗಳನ್ನು ಅಳವಡಿಸಲಾಗಿದ್ದು, ಅವುಗಳು ಇತ್ತೀಚೆಗೆ ಬಿದ್ದ ಮಳೆಯಿಂದ ವಾಲಿಕೊಂಡು ತೆಂಗಿನ ಮರಗಳಿಗೆ ತಾಗುತ್ತಿದೆ. ವಿದ್ಯುತ್ ತಂತಿಗಳಿಂದ ಅನಾಹುತ ಆಗುವ ಸಂಭವವಿದೆ ಆದ್ದರಿಂದ ಕೂಡಲೇ ವಾಲಿರುವ ಕಂಬಗಳನ್ನು ದುರಸ್ತಿ ಪಡಿಸಬೇಕೆಂದು ತಿಳಿಸಿದರು,


ಸಿದ್ದನಪುರ ಗ್ರಾಮದ ಲಕ್ಷ್ಮಮ್ಮ ಎಂಬುವರು ತಮಗೆ ಸೇರಿದ ಕಬ್ಬಿನ ಗದ್ದೆಗೆ ಬೆಂಕಿ ಬಿದ್ದು ಎರಡು ಎಕರೆಯಲ್ಲಿದ್ದ ಕಬ್ಬು ಬೆಳೆ ಹಾನಿಯಾಗಿದೆ, ಆದ್ದರಿಂದ ಸೂಕ್ತ ಪರಿಹಾರ ಕಲ್ಪಿಸಿ ಕೊಡಬೇಕೆಂದು ಮನವಿ ಮಾಡಿದರು, ಇದಕ್ಕೆ ಪ್ರತಿಕ್ರಿಸಿದ ಕಾರ್ಯನಿರ್ವಾಹಕ ಇಂಜಿನಿಯರ್ ಘಟನೆ ನಡೆದ 24 ಗಂಟೆ ಒಳಗೆ ಕಚೇರಿಗೆ ಮಾಹಿತಿ ನೀಡಬೇಕು, ಹಾಗೂ ಅರ್ಜಿ ಸಲ್ಲಿಸಬೇಕಾಗಿತ್ತು, ಈಗ ತಡವಾಗಿ ತಿಳಿಸಿರುವುದರಿಂದ ಪರಿಹಾರ ಕೊಡಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಸಭೆಯಲ್ಲಿ ಎ.ಇಇ.ದ್ರುಪದ್, ಜೂನಿಯರ್ ಇಂಜಿನಿಯರ ಗಳಾದ ಮಹದೇವಸ್ವಾಮಿ, ಸತೀಶ್, ನವೀನ್, ರಿತೇಶ್, ಕಚೇರಿ ಸಹಾಯಕ ಇಂಜಿನಿಯರ್ ಪ್ರದೀಪ್ ಕುಮಾರ್, ಕಂದಾಯ ಹಿರಿಯ ಸಹಾಯಕ ಮಹಾದೇವಸ್ವಾಮಿ ಸೇರಿದಂತೆ ಇತರರು ಇದ್ದರು.

ವರದಿ: ಇರಸವಾಡಿ ಸಿದ್ದಪ್ಪಾಜಿ, tv8newskannada ಚಾಮರಾಜನಗರ

Related Articles

Leave a Reply

Your email address will not be published. Required fields are marked *

Back to top button