ಡಿ.18 ರಿಂದ ಡಿ.25 ರವರೆಗೆ ನಂಜನಗೂಡಿನಲ್ಲಿ ಬೃಹತ್ ಮದ್ಯವರ್ಜನ ಶಿಬಿರ

ನಂಜನಗೂಡು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ನಂಜನಗೂಡು ಇವರ ವತಿಯಿಂದ ಡಿ.18 ರಿಂದ ಡಿ.25ರ ವರೆಗೆ ನಂಜನಗೂಡಿನಲ್ಲಿ ಬೃಹತ್ ಮಧ್ಯವರ್ಜನ ಶಿಬಿರವನ್ನು ಆಯೋಜನೆ ಮಾಡಲಾಗಿದೆ ಎಂದು ಮಧ್ಯವರ್ಜನ ಶಿಬಿರದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಎ.ಎನ್ ಶಿವಯ್ಯ ಅಳಗಂಚಿ ಹೇಳಿದರು.
ನಂಜನಗೂಡು ನಗರದ ಶ್ರೀ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಕಛೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರತಿಯೊಂದು ಗ್ರಾಮದಲ್ಲಿ ಮಧ್ಯವರ್ಜನರಿದ್ದಾರೆ. ಅವರಿಗೆ ಶಿಬಿರವನ್ನು ಮಾಡಿ ಪಾನಮುಕ್ತರನ್ನಾಗಿ ಮಾಡುವುದು ನಮ್ಮ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಡಿ.18 ರಂದು ಬುಧವಾರದಿಂದ ಡಿ.25 ರವರೆಗೆ 1901ನೇ ಮಧ್ಯವರ್ಜನ ಶಿಬಿರವನ್ನು ನಂಜನಗೂಡು ಪಟ್ಟಣದ ಜೆಎಸ್ಎಸ್ ಮಂಗಳ ಮಂಟಪದಲ್ಲಿ ಆ ಯೋಜನೆ ಮಾಡಲಾಗಿದೆ. ಈ ಕಾರ್ಯಕ್ರಮಕ್ಕೆ ನಂಜನಗೂಡು ವಿಧಾನಸಭಾ ಕ್ಷೇತ್ರದ ಶಾಸಕರಾದ ದರ್ಶನ್ ಧ್ರುವನಾರಾಯಣ್ , ನಗರಸಭಾ ಅಧ್ಯಕ್ಷರಾದ ಶ್ರೀಕಂಠಸ್ವಾಮಿ, ತಹಶೀಲ್ದಾರ್ ಶಿವಕುಮಾರ್ ಕಾಸ್ನೂರು ಸೇರಿದಂತೆ ಹಲವು ಕಣ್ಣೀರು ಆಗಮಿಸಲಿದ್ದಾರೆ. ನಂಜನಗೂಡಿನಲ್ಲಿ ಈಗಾಗಲೇ 6 ಮದ್ಯವರ್ಜನ ಶಿಬಿರಗಳನ್ನು ಮಾಡಿದ್ದೇವೆ. ನೂರಕ್ಕೂ ಹೆಚ್ಚು ಶಿಬಿರಾರ್ಥಿಗಳು ಬರುವ ನಿರೀಕ್ಷೆ ಇದೆ. ಸಲಹೆ ಸೂಚನೆಗಳನ್ನು ನೀಡಲು ವಿಶೇಷ ವೈದ್ಯರ ತಂಡವು ಆಗಮಿಸುತ್ತಿದೆ. ಶಿಬಿರಕ್ಕೆ ಬರುವ ಎಲ್ಲರಿಗೂ ಒಂದು ವಾರಗಳ ಕಾಲ ಮೂಲಭೂತ ಸೌಕರ್ಯ ಸೇರಿದಂತೆ ಊಟ, ತಿಂಡಿ, ವಸತಿ ಸೌಲಭ್ಯವನ್ನು ಕಲ್ಪಿಸಲಾಗಿದೆ. ಆದ್ದರಿಂದ ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಕೆ.ಧರ್ಮರಾಜ್, ಮೈಸೂರು ಜಿಲ್ಲಾ ಜನ ಜಾಗೃತಿ ವೇದಿಕೆ ಸದಸ್ಯರಾದ ಡಿ.ಜಿ ಸೋಮಶೇಖರ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಲತಾ ಮುದ್ದು ಮೋಹನ್, ಎನ್.ಶಶಿಕಲಾ ಗಿರೀಶ್, ವಲಯ ಮೇಲ್ವಿಚಾರಕಿ ಪ್ರತಿಮಾ, ಉದ್ಯಮಿ ಕೆ.ಎಸ್ ಮಣಿಕಂಠ, ನವ ಜೀವನ ಸಮಿತಿಯ ಸದಸ್ಯ ಕಿರಣ್ ಹಾಜರಿದ್ದರು.