ಅಬ್ಬಾಬ್ಬಾ…! ರಿಲೀಸ್ ಆಗಿ ಐದು ದಿನಕ್ಕೆ ದಾಖಲೆಯ ಕಲೆಕ್ಷನ್ ಮಾಡಿದ Pushpa 2

ಹೈದರಬಾದ್: ಅಲ್ಲು ಅರ್ಜುನ್-ರಶ್ಮಿಕಾ ಮಂದಣ್ಣ ನಟನೆಯ ಪುಷ್ಪ-2 (Pushpa 2) ಚಿತ್ರವು ಡಿಸೆಂಬರ್ 05ರಂದು ವಿಶ್ವದಾದ್ಯಂತ ಬಿಡುಗಡೆಯಾಗಿದ್ದು, ಮಿಶ್ರ ಪ್ರತಿಕ್ರಿಯೆಯ ಹೊರತಾಗಿಯೂ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ದೊರೆತಿದೆ. ಬಿಡುಗಡೆಯಾದ ದಿನದಿಂದಲೇ ಬಾಕ್ಸ್ಆಫೀಸ್ನಲ್ಲಿ ಧೂಳೆಬ್ಬಿಸುತ್ತಿರುವ ಪುಷ್ಪ-2 ಚಿತ್ರವು ದಾಖಲೆಯ ಗಳಿಕೆ ಕಾಣುತ್ತಿದ್ದು, ಸಾವಿರ ಕೋಟಿ ಕ್ಲಬ್ ಸೇರುವ ಎಲ್ಲಾ ಮುನ್ಸೂಚನೆಯನ್ನು ನೀಡಿದೆ.
ಸದ್ಯ ತಿಳಿದು ಬಂದಿರುವ ಮಾಹಿತಿ ಪ್ರಕಾರ ಪೈರಸಿ ಕಾಟದ ಹೊರತಾಗಿಯೂ ಚಿತ್ರವು ವಿಶ್ವದಾದ್ಯಂತ 920 ಕೋಟಿಗೂ ಅಧಿಕ ಗಳಿಕೆ ಕಂಡಿದ್ದು, ಈ ಬಗ್ಗೆ ಚಿತ್ರತಂಡವೇ ಅಧಿಕೃತ ಮಾಹಿತಿಯನ್ನು ಹಂಚಿಕೊಂಡಿದೆ. ಕರ್ನಾಟಕ ಸೇರಿದಂತೆ ಅನೇಕ ಕಡೆ ಚಿತ್ರ ಹೌಸ್ಫುಲ್ ಪ್ರದರ್ಶನ ಕಾಣುತ್ತಿದ್ದು, ಚಿತ್ರ ಸಕ್ಸಸ್ ಮೀಟ್ ನಡೆಸುವುದಕ್ಕೆ ತಯಾರಿ ನಡೆಸುತ್ತಿದೆ.

ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಪುಷ್ಪ-2 ಚಿತ್ರಕ್ಕೆ ಸಾವಿರಾರು ಶೋಗಳನ್ನು ಮೀಸಲಿಡಲಾಗಿದ್ದು, ಟಿಕೆಟ್ ದರ ಹೆಚ್ಚಳ ಕೂಡ ಚಿತ್ರದ ಕೆಲಕ್ಷನ್ ಜಾಸ್ತಿ ಆಗಲು ಕಾರಣ ಎಂದು ಹೇಳಲಾಗಿದೆ. ಟಿಕೆಟ್ ದರ ಹೆಚ್ಚಳದ ಫಲವಾಗಿ ಚಿತ್ರವು ಬಿಡುಗಡೆಯಾದ ಐದು ದಿನಕ್ಕೆ 922 ಕೋಟಿ ರೂಪಾಯಿ ಗಳಿಸಿದ್ದು, ವಾರದ ಮಧ್ಯದಲ್ಲೇ ವೇಳೆ 1,000ಕೋಟಿ ಕ್ಲಬ್ ಸೇರಬಹುದು ಎಂದು ಬಾಕ್ಸ್ಆಫೀಸ್ ಪಂಡಿತರು ಹೇಳಿದ್ದಾರೆ.
ಮೈತ್ರಿ ಮೂವೀ ಮೇಕರ್ಸ್’ ಸಂಸ್ಥೆಯ ಮೂಲಕ ‘ಪುಷ್ಪ 2’ ಸಿನಿಮಾ ನಿರ್ಮಾಣ ಆಗಿದೆ. ಈ ಸಿನಿಮಾದ ಪ್ರತಿ ದಿನದ ಕಲೆಕ್ಷನ್ ಬಗ್ಗೆ ಈ ಸಂಸ್ಥೆಯ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಮಾಹಿತಿ ನೀಡಲಾಗುತ್ತಿದೆ. 5 ದಿನಕ್ಕೆ ವಿಶ್ವಾದ್ಯಂತ ಎಷ್ಟು ಕಲೆಕ್ಷನ್ ಆಗಿದೆ ಎಂಬುದನ್ನು ತಿಳಿಸಲು ಹೊಸ ಪೋಸ್ಟರ್ ಹಂಚಿಕೊಳ್ಳಲಾಗಿದೆ. ಅದನ್ನು ಕಂಡು ಸಿನಿಪ್ರಿಯರು ಕಣ್ಣರಳಿಸಿದ್ದಾರೆ.
ವರದಿ : ಪುಣ್ಯ ಗೌಡ ಫಿಲಂ ಬ್ಯೂರೋ.tv8newskannada ಬೆಂಗಳೂರು